ಶಿಗ್ಗಾಂವಿಯ ಅಂಜುಮನ್ ಕಮಿಟಿ ಚುನಾವಣೆಯಲ್ಲಿ ಶೇ. ೯೨ ಮತದಾನ

| Published : Oct 24 2025, 01:00 AM IST

ಶಿಗ್ಗಾಂವಿಯ ಅಂಜುಮನ್ ಕಮಿಟಿ ಚುನಾವಣೆಯಲ್ಲಿ ಶೇ. ೯೨ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಂಜುಮನ್-ಎ-ಇಸ್ಲಾಂ ಕಮಿಟಿ ಆಡಳಿತ ಮಂಡಳಿ ಸದಸ್ಯತ್ವಕ್ಕಾಗಿ ಶಿಗ್ಗಾಂವಿ ಪಟ್ಟಣದ ಜೆ.ಎಂ.ಜೆ. ಮಹಾವಿದ್ಯಾಲಯದಲ್ಲಿ ನಡೆದ ಮತದಾನದಲ್ಲಿ ೨,೩೧೭ ಮತದಾರರ ಪೈಕಿ ೨೧೪೫ ಜನ ತಮ್ಮ ಹಕ್ಕು ಚಲಾಯಿಸಿದರು.

ಶಿಗ್ಗಾಂವಿ: ಅಂಜುಮನ್-ಎ-ಇಸ್ಲಾಂ ಕಮಿಟಿ ಆಡಳಿತ ಮಂಡಳಿ ಸದಸ್ಯತ್ವಕ್ಕಾಗಿ ಶಿಗ್ಗಾಂವಿ ಪಟ್ಟಣದ ಜೆ.ಎಂ.ಜೆ. ಮಹಾವಿದ್ಯಾಲಯದಲ್ಲಿ ನಡೆದ ಮತದಾನದಲ್ಲಿ ೨,೩೧೭ ಮತದಾರರ ಪೈಕಿ ೨೧೪೫ ಜನ ತಮ್ಮ ಹಕ್ಕು ಚಲಾಯಿಸಿದರು. ೧೧ ಸ್ಥಾನಗಳಿಗೆ ೪೦ ಅಭ್ಯರ್ಥಿಗಳು ಕಣದಲ್ಲಿದ್ದು, ಶೇ. ೯೨ಕ್ಕಿಂತ ಹೆಚ್ಚು ಮತದಾನವಾಗಿದೆ. ಮತದಾನ ಪ್ರಕ್ರಿಯೆ ರಾತ್ರಿ ೯ ಗಂಟೆಯವರೆಗೆ ನಡೆಯಿತು.

ಹೆಚ್ಚು ಮತ ಪಡೆದು ಆಯ್ಕೆಯಾದ ಅಭ್ಯರ್ಥಿಗಳು: ಸಲೀಂ ಅಹಮದ್ ಅಬ್ದುಲ್ ರೌಫ್ ಫಾರೂಕಿ ೧೧೬೭, ಖಾಜಾ ಮೈನುದ್ದೀನ್ ನೂರ್ ಅಹಮದ್ ಶ್ಯಾಬಾಳ ೧೦೨೪, ಅಬ್ದುಲ್ ರೆಹಮಾನ್ ಅಬ್ದುಲ್ ಖಾದರ್ ತೋಕಲ್ಲಿ ೮೧೭, ಅಜೀಮ್ ಖಾನ್ ಫಯಾಜ್ ಖಾನ್ ನಾಗಡ್ ೭೯೯, ಮೊಹಮ್ಮದ್ ಜಾಫರ್ ಕಲಂದರ್ ಸಾಬ್ ನಿರ್ಮಣಿ ೭೬೬, ಮೊಹಮ್ಮದ್ ಗೌಸ ಕಲಂದರ್ ಸವಣೂರು ೭೬೫, ಆಫ್ಟಬ್ ಹುಸೇನ್ ಸಾಹೇಬ್ ಕಳಸ ೭೬೨, ಮೊಹಮ್ಮದ್ ನೂರುಲ್ ಹಸನ್ ಅ. ಖಾಜೇಖಾನವರ್ ೭೩೪, ಮೌಲಾಲಿ ಮೊಹಮ್ಮದ ಗೌಸ್ ದೊಡ್ಮನಿ ೭೩೦, ಲಿಯಾಕತ್‌ ಅಹ್ಮದ್ ಜಮನ್ ಸಾಬ್ ಭಮ್ಮೀಗಟ್ಟಿ ೭೦೭, ಖಾಜಾ ಮೈನುದ್ದೀನ್ ಅಬ್ದುಲ್ ಖಾದರ್ ಚೂಡಿದಾರ್ ೬೮೫ ಮತ ಪಡೆದಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ಸಿಹಿ ಹಂಚಿ, ಬಣ್ಣ ಎರಚುವುದರ ಮೂಲಕ ವಿಜಯೋತ್ಸವ ಆಚರಿಸಿದರು.

ಅಂಜುಮನ್ ಸಂಸ್ಥೆ ಅಭಿವೃದ್ಧಿಗೆ ಕಂಕಣ ಬದ್ಧರಾಗಿರಿ: ಸಮಾಜದ ಸೇವೆ ಮಾಡಲು ಆ ಭಗವಂತ ಎಲ್ಲರಿಗೂ ಒಳ್ಳೆಯ ಅವಕಾಶ ಕೊಟ್ಟಿದ್ದಾನೆ, ಅದನ್ನು ಸದುಪಯೋಗ ಪಡಿಸಿಕೊಂಡು ಅಂಜುಮನ್ ಸಂಸ್ಥೆ ಅಭಿವೃದ್ಧಿಗೆ ಕಂಕಣ ಬದ್ಧರಾಗಿರಿ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.

ಪಟ್ಟಣದಲ್ಲಿ ನಡೆದ ಅಂಜುಮನ್-ಎ-ಇಸ್ಲಾಂ ಕಮಿಟಿ ಆಡಳಿತ ಮಂಡಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಹಿ ತಿನಿಸಿ ಸನ್ಮಾನಿಸಿ ಮಾತನಾಡಿದ ಅವರು, ಈ ಹಿಂದೆ ಇದ್ದ ಅಂಜುಮನ್ ಪದಾಧಿಕಾರಿಗಳಿಗೆ ಆಡಳಿತಾತ್ಮಕವಾಗಿ ಶಾಸಕರ ಸಂಪೂರ್ಣ ಬೆಂಬಲವಿರದ ಕಾರಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಹಾಗೂ ನಮ್ಮ ನಾಯಕರಾದ ಬಿ.ಝಡ್. ಜಮೀರ ಅಹಮದ್‌ ಖಾನ್‌ ಅವರ ನೆರವಿನಿಂದ ಹೆಚ್ಚಿನ ಅನುದಾನ ತರುವ ಜವಾಬ್ದಾರಿ ನನ್ನದು. ಒಗ್ಗಟ್ಟಿನಿಂದ ಉತ್ತಮ ಕಾರ್ಯ ಮಾಡೋಣ ಹಾಗೂ ಇತರರಿಗೆ ಮಾದರಿಯಾಗೋಣ ಎಂದರು.

ಗ್ಯಾರಂಟಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಗುಡ್ಡಪ್ಪ ಜಲದಿ, ಗೌಸ್‌ಖಾನ್ ಮುನಸಿ, ಮುನ್ನಾ ಲಕ್ಷ್ಮೇಶ್ವರ, ಮುಕ್ತಾರಖಾನ ತಿಮ್ಮಾಪುರ, ಚಂದ್ರು ಕೊಡ್ಲಿವಾಡ್, ಸುಲೇಮಾನ ಖಾಜೇಖಾನವರ, ಅಹ್ಮದಬಾಷಾ ಗುಲಾಮುದ್ದೀನ ಹಾಗೂ ಆಯ್ಕೆಯಾದ ಸಲೀಂ ಅಹಮದ್ ಫರೋಕಿ, ಖಾಜಾ ಮೈನುದ್ದೀನ್ ಶ್ಯಾಬಾಳ, ಅಬ್ದುಲ್ ರೆಹಮಾನ್ ತೋಕಲ್ಲಿ, ಅಜೀಮಖಾನ್ ನಾಗಡ್, ಮೊಹಮ್ಮದ್ ಜಾಫರ್ ನಿರ್ಮಣಿ, ಮೊಹಮ್ಮದ್ ಗೌಸ್‌ ಸವಣೂರು, ಆಫ್ಟಬ್ ಕಳಸ, ಮೊಹಮ್ಮದ್ ಖಾಜೇಖಾನವರ್, ಮೌಲಾಲಿ ದೊಡ್ಮನಿ, ಲಿಯಾಕತ್‌ ಅಹ್ಮದ್ ಭಮ್ಮೀಗಟ್ಟಿ, ಖಾಜಾ ಮೈನುದ್ದೀನ್ ಚೂಡಿದಾರ್ ಉಪಸ್ಥಿತರಿದ್ದರು.