ಕಡೂರುಕ್ಷೇತ್ರದಲ್ಲಿ 1,99,230 ಮತದಾರರ ಶೇ. 96 ರಷ್ಟು ಮ್ಯಾಪಿಂಗ್ ಮಾಡಲಾಗಿದೆ ಎಂದು ತಹಸೀಲ್ದಾರ್ ಸಿ.ಎಸ್ ಪೂರ್ಣಿಮಾ ತಿಳಿಸಿದರು.

- 18,710 ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ

ಕನ್ನಡಪ್ರಭ ವಾರ್ತೆ, ಕಡೂರು

ಕ್ಷೇತ್ರದಲ್ಲಿ 1,99,230 ಮತದಾರರ ಶೇ. 96 ರಷ್ಟು ಮ್ಯಾಪಿಂಗ್ ಮಾಡಲಾಗಿದೆ ಎಂದು ತಹಸೀಲ್ದಾರ್ ಸಿ.ಎಸ್ ಪೂರ್ಣಿಮಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಡೂರು ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಇಲ್ಲಿಯವರೆಗಿನ ಮಾಹಿತಿ ನೀಡಿ ಕಳೆದ 6 ತಿಂಗಳಿಂದ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ನಾವು ಜೂ.19 ರಿಂದ ಜುಲೈ 30ರವರೆಗೆ ಗಣತಿ ದಾರರು ಎಸ್ಐಆರ್ ಫಾರಂನ್ನು ಮನೆ ಮನೆಗೆ ಹಂಚಿ ಅದನ್ನು ಗಣಕೀಕರಣ ಮಾಡುವ ಮೂಲಕ ಆ. 17 ರವರೆಗೆ ವಿಸ್ತರಿಸಲಾಗಿತ್ತು. ಕೊನೆ ದಿನವಾದ ಇಂದು ಆ. 24 ಕರಡು ಮತದಾರರ ಪಟ್ಟಿ ಅಧಿಕೃತವಾಗಿ ಪ್ರಕಟಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಅಧಿಕೃತ ಪಟ್ಟಿ ರಾಜಕೀಯ ಪಕ್ಷಗಳಿಗೂ ವಿತರಿಸಲಾಗಿದೆ. ಸದರಿ ಪಟ್ಟಿಗಳನ್ನು ಗ್ರಾಪಂಗಳ ಮೂಲಕ ಪ್ರಕಟಿಸಲಾಗುತ್ತದೆ ಎಂದರು. 1,99,230 ಮತದಾರರನ್ನು ಶೇ 96 ರಷ್ಟು ಮ್ಯಾಪಿಂಗ್ ನಂತರ ಗಣಕೀಕರಣಗೊಳಿಸಿದ್ದು, ಅದರಲ್ಲಿ 1120 ಮತ ದಾರರು ಶೇ 0.54 ರಷ್ಟು ಗಣನೆಗೆ ಸಿಕ್ಕಿಲ್ಲ. 2 ಲಕ್ಷ ಮತದಾರರಲ್ಲಿ 18,710 ಮತದಾರರು ಸ್ಥಳಾಂತರ, ಮರಣ, ನಾಪತ್ತೆ, 3-4 ಕಡೆ ಇರುವ ಮತದಾರರಾಗಿದ್ದಾರೆ.ಇವರನ್ನು ಕರಡು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದರು.

ತಾಲೂಕಿನ ಬಳ್ಳಿಗನೂರಿನಲ್ಲಿ 1200 ಮತದಾರರಿಗೆ 1ಮತಗಟ್ಟೆಯಂತೆ ಹೆಚ್ಚುವರಿಯಾಗಿ 2 ಎರಡು ಮತಗಟ್ಟೆ ಸೇರಿ ತಾಲೂಕಿನಲ್ಲಿ ಒಟ್ಟು 254 ಮತಗಟ್ಟೆಗಳಿವೆ. ದಿ. 24-8-26 ರಿಂದ 23-9-26ರ ತನಕ ಮತದಾರರು ಆಕ್ಷೇಪಣೆ ಸಲ್ಲಿಸಬಹುದು. ಅಧಿಕೃತವಾಗಿ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಬದಲಾವಣೆ, ತಿದ್ದುಪಡಿ, ಸೇರ್ಪಡೆ, ಆಕ್ಷೇಪಣೆಗೆ 24-8-26ರಿಂದ 23-09-26ವರೆಗೆ ಕಾಲಾವಕಾಶ ನೀಡಲಾಗಿದೆ ಎಂದರು.

ಜೊತೆಗೆ ನೋಟೀಸ್ 22,967 ಜನಕ್ಕೆ ನಾಳೆಯಿಂದಲೇ ನೋಟೀಸ್ ಜಾರಿ ಮಾಡಬೇಕಾದ ಕಾರಣ ಹೆಚ್ಚುವರಿ 32 ಜನರನ್ನು ಚುನಾವಣಾ ಸಹಾಯಕ ಸಿಬ್ಬಂದಿ ಆಯ್ಕೆ ಮಾಡಲಾಗಿದೆ. ಅಲ್ಲದೆ 32 ಪಂಚಾಯ್ತಿಗಳನ್ನು ವಿಚಾರಣಾ ಸ್ಥಳಗಳಾಗಿ ಗುರುತು ಮಾಡಲಾಗಿದೆ ಎಂದರು.

ವಿಚಾರಣೆಗೆ ನಿಗಧಿತ ಸಮಯಕ್ಕೆ ಬಾರದೇ ಹೋದರೆ ಆತನಿಗೆ ಮತ್ತೊಂದು ಅವಕಾಶ ನೀಡಲಿದ್ದು ಖುದ್ದು ಮತದಾರನೇ ಬರಬೇಕು. ಕಾಯಿಲೆ ಅಥವಾ ಅಂಗವಿಕಲರಿಗೆ ಮನೆಗೆ ತೆರಳಿ ನೀಡಿ ಬರೆಸಬಹುದು. 2004 ಹಿಂದೆ ಮತ್ತು-2002 ರೊಳಗೆ ಹುಟ್ಟಿದವರು ದಾಖಲೆ ನೀಡಿ ವಿಚಾರಣೆಗೆ ಹಾಜರಾಗಬೇಕು..ಸೇರ್ಪಡೆಗೆ ನಮೂನೆ 6 ಸೇರ್ಪಡೆಗೆ, ಕೈ ಬಿಡಲು 7 ನಮೂನೆ ಪಡೆದು ನೀಡಬೇಕು . 27-10-26ಕ್ಕೆ ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದರು.

24ಕೆಕೆಡಿಯು4. . ಸಿ.ಎಸ್ ಪೂರ್ಣಿಮಾ. ತಹಸೀಲ್ದಾರ್.