ಸಾರಾಂಶ
ಉಡುಪಿ - ಚಿಕ್ಕಮಗಳೂರು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 4664 ಮಂದಿ ಹಿರಿಯರು ಮತ್ತು 1436 ಮಂದಿ ಅಂಗವಿಕಲರು ಸೇರಿ ಒಟ್ಟು 6,100 ಮಂದಿ ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 4512 ಮಂದಿ ಹಿರಿಯರು ಮತ್ತು 1407 ಮಂದಿ ಅಂಗವಿಕಲರು ಸೇರಿ ಒಟ್ಟು 5,919 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಈ ಬಾರಿ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟವರಿಗೆ ಮತ್ತು ದೈಹಿಕ ಅಶಕ್ತರಿಗೆ ಮನೆಯಿಂದಲೇ ಮತ ಹಾಕುವ ಅವಕಾಶವನ್ನು ನೀಡಿತ್ತು. ಅದರಂತೆ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಧಿಕಾರಿಗಳು ಮನೆಮನೆಗೆ ತೆರಳಿ ಅರ್ಹರ ಮತದಾನಕ್ಕೆ ವ್ಯವಸ್ಥೆ ಮಾಡಿತ್ತು. ಈ ಕ್ಷೇತ್ರದಲ್ಲಿ ಹಿರಿಯರು ಮತ್ತು ಅಂಗವಿಕಲರು ಸೇರಿ ಒಟ್ಟು ಶೇ.97.03ರಷ್ಟು ಮತದಾನವಾಗಿದೆ.ಉಡುಪಿ - ಚಿಕ್ಕಮಗಳೂರು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 4664 ಮಂದಿ ಹಿರಿಯರು ಮತ್ತು 1436 ಮಂದಿ ಅಂಗವಿಕಲರು ಸೇರಿ ಒಟ್ಟು 6,100 ಮಂದಿ ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿದ್ದರು.
ಅವರಲ್ಲಿ 4512 ಮಂದಿ ಹಿರಿಯರು ಮತ್ತು 1407 ಮಂದಿ ಅಂಗವಿಕಲರು ಸೇರಿ ಒಟ್ಟು 5,919 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.ಸುಮಾರು 152 ಮಂದಿ ಹಿರಿಯರು ಮತ್ತು 29 ಮಂದಿ ಅಂಗವಿಕಲರು ಸೇರಿ 181 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರೂ, ಅಧಿಕಾರಿಗಳು ಎರಡೆರಡು ಬಾರಿ ಮನೆಗೆ ತೆರಳಿದಾಗ ಮತದಾನಕ್ಕೆ ಲಭ್ಯರಾಗಿಲ್ಲ. ಅವರಿಗೆ 26ರಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವುದಕ್ಕೂ ಅವಕಾಶ ಇರುವುದಿಲ್ಲ.