ಜಿಲ್ಲೆಯಲ್ಲಿ ಚುನಾವಣೆ ಕಾರ್ಯಕ್ಕೆ 9700 ಸಿಬ್ಬಂದಿ: ಡಿಸಿ

| Published : Mar 28 2024, 12:49 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ದೇಶದಲ್ಲಿ ಮೂರನೇ ಹಂತ, ರಾಜ್ಯದಲ್ಲಿ ಎರಡನೇ ಹಂತವಾದ ಮೇ 7ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಮತದಾನ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮೊದಲ ರ‍್ಯಾಂಡಮೇಜೇಷನ್‌ ಕೈಗೊಂಡರು.

ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ದೇಶದಲ್ಲಿ ಮೂರನೇ ಹಂತ, ರಾಜ್ಯದಲ್ಲಿ ಎರಡನೇ ಹಂತವಾದ ಮೇ 7ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಮತದಾನ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮೊದಲ ರ‍್ಯಾಂಡಮೇಜೇಷನ್‌ ಕೈಗೊಂಡರು.

ಜಗಳೂರು, ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಹರಿಹರ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರ ಹಾಗೂ ಹರಪನಹಳ್ಳಿ ತಾಲೂಕು ಅರಸಿಕೆರೆ ಹೋಬಳಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಲಿವೆ. 1946 ಮತಗಟ್ಟೆಗಳು ಕ್ಷೇತ್ರದಲ್ಲಿವೆ. ಪ್ರತಿ ಮತಗಟ್ಟೆಗೆ ಪಿಆರ್‌ಒ, ಎಪಿಆರ್‌ಒ, ಪಿಒ ಮತ್ತು ಒಬ್ಬರು ಗ್ರೂಪ್ ಡಿ ಇರಲಿದ್ದು, ಮತಗಟ್ಟೆಗೆ ಬೇಕಾದ ಸಿಬ್ಬಂದಿಗಿಂತಲೂ ಹೆಚ್ಚುವರಿಯಾಗಿ ಶೇ.30ರಷ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟು ಚುನಾವಣೆಗಾಗಿ 9700 ಸಿಬ್ಬಂದಿ ಸೇವೆ ಪಡೆಯಲಾಗುತ್ತಿದೆ ಎಂದರು.

ಮತದಾನಕ್ಕೆ ಅಗಶ್ಯವಿರುವ ಸಿಬ್ಬಂದಿಯನ್ನು ಎಚ್.ಆರ್.ಎಂ.ಎಸ್. ಹಾಗೂ ನಾನ್ ಎಚ್.ಆರ್.ಎಂ.ಸಿ. ದತ್ತಾಂಶ ಆಧರಿಸಿ ಡೈಸ್ ಸಾಫ್ಟ್‌ವೇರ್‌ ಮೂಲಕ ಕರ್ತವ್ಯನಿರತ ಸ್ಥಳದಿಂದ ಬೇರೆ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗುತ್ತದೆ. 9700 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಅವರು ಚುನಾವಣಾ ಕರ್ತವ್ಯ ನಿರ್ವಹಿಸುವ ವಿಧಾನಸಭಾ ಕ್ಷೇತ್ರದ ಆಯ್ಕೆಯೇ ಮೊದಲ ರ‍್ಯಾಂಡಮೈಜೇಷನ್ ಆಗಿದೆ. ಮೊದಲ ಈ ಪ್ರಕ್ರಿಯೆಯಿಂದ ಯಾರು, ಯಾವ ವಿಧಾಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವರೆಂದು ಗೊತ್ತುಪಡಿಸಲಾಗುವುದು. ಅವರಿಗೆ ತರಬೇತಿ ದಿನಾಂಕ ನಿಗದಿ ಮಾಡಲು ಸಂಬಂಧಿಸಿದ ಸಿಬ್ಬಂದಿಗೆ ನೇಮಕಾತಿ ಆದೇಶ ಕಳುಹಿಸುವ ಪ್ರಕ್ರಿಯೆ ಇದಾಗಿದೆ ಎಂದು ವಿವರಿಸಿದರು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಅಫ್ರೀನ್ ಬಾನು ಎಸ್. ಬಳ್ಳಾರಿ, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಎನ್.ಐ.ಸಿ ಅಧಿಕಾರಿ ಉದಯಕುಮಾರ್, ರಮೇಶ್ ಉಪಸ್ಥಿತರಿದ್ದರು.

- - -

-26ಕೆಡಿವಿಜಿ31ಃ:

ದಾವಣಗೆರೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಮೊದಲ ರ‍್ಯಾಂಡಮೈಜೇಷನ್, ತರಬೇತಿಗೆ ತಂಡಗಳ ನಿಯುಕ್ತಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಚಾಲನೆ ನೀಡಿದರು.