ಮಾದಾರ ಚನ್ನಯ್ಯ 973ನೇ ಜಯಂತಿ

| Published : Mar 02 2024, 01:47 AM IST

ಸಾರಾಂಶ

ನಗರದ ನೌಬಾದನ ಡಾ.ಬಾಬು ಜಗಜೀವರಾಮ್ ಸಮುದಾಯ ಭವನ ಆವರಣದಲ್ಲಿ ಕರ್ನಾಟಕ ಮಾದಿಗ ವೇಲ್‌ಫೇರ್ ಅಸೋಸಿಯೇಷನ್ ವತಿಯಿಂದ ವಚನಕಾರ, ಕಾಯಕ ಯೋಗಿ ಶಿವಶರಣ ಮಾದಾರ ಚನ್ನಯ್ಯ ಅವರ 973ನೇ ಜಯಂತೋತ್ಸವ ಆಚರಿಸಲಾಯಿತು.

ಬೀದರ್‌: ನಗರದ ನೌಬಾದನ ಡಾ.ಬಾಬು ಜಗಜೀವರಾಮ್ ಸಮುದಾಯ ಭವನ ಆವರಣದಲ್ಲಿ ಕರ್ನಾಟಕ ಮಾದಿಗ ವೇಲ್‌ಫೇರ್ ಅಸೋಸಿಯೇಷನ್ ವತಿಯಿಂದ ವಚನಕಾರ, ಕಾಯಕ ಯೋಗಿ ಶಿವಶರಣ ಮಾದಾರ ಚನ್ನಯ್ಯ ಅವರ 973ನೇ ಜಯಂತೋತ್ಸವ ಆಚರಿಸಲಾಯಿತು.

ಅನ್ನ ದಾಸೋಹ ನಿಮಿತ್ತವಾಗಿ ಒಮ್ಮನಸ್ಸಿನ ಮಾದಿಗ ಸಂಘಟನೆಗಳ ಬೃಹತ್ ಐಕ್ಯತೆ ಸಮಾವೇಶ ಹಾಗೂ ಮಾದಾರ ಚನ್ನಯ್ಯ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ಅಪ್ಪನು ಮಾದಾರ ಚನ್ನಯ್ಯ, ಮಾನವ ಕುಲದ ತಿಲಕ ಮಾದಾರ ಚನ್ನಯ್ಯ ಎಂದು ನುಡಿದ ಅಣ್ಣ ಬಸವಣ್ಣನವರು ಈ ಸಮಾಜಕ್ಕೆ ಒಂದು ಸಂದೇಶವನ್ನು ನೀಡಿ, ಮಾನವ ಕುಲದಲ್ಲಿ ಒಳ್ಳೆಯದು ಮತ್ತು ಕೆಟ್ಟದು ಇವೆರಡೇ ಜಾತಿಗಳಾಗಿವೆ. ಮನುಕುಲದಲ್ಲಿ ಎಲ್ಲರೂ ಸಮಾನರು ಎಂದು ನುಡಿದರು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಕಾಂತಸ್ವಾಮಿ, ಮಾದಾರ ಚನ್ನಯ್ಯ ಅರಿವು ಪೀಠ ಬಸವಕಲ್ಯಾಣ, ಪೂಜ್ಯ ಸದ್ಗುರು ಸತ್ಯದೇವಿ ಅನುಭವ ಮಂಟಪ ಬೀದರ್‌, ಶರಣೆ ತಾಯಿ ಚಿತ್ರಮ್ಮಾ, ಸ್ವಾಮಿದಾಸ ಕೆಂಪೇನೋರ್ ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸುಭಾಷ ಕಲ್ಲೂರ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಯುವ ಉದ್ಯಮಿ ಮಲ್ಲಿಕನಾಥ ಮಡಿಗೆ, ಭಾಸ್ಕರ ಅಗಷ್ಠಿನ್, ಸಂಜುಕುಮಾರ ನಂಜವಾಡ್, ಅಭಿ ಕಾಳೆ ಉಪತ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಗೌರವ ಮಾರ್ಗದರ್ಶಕ ರಮೇಶ ಕಟ್ಟಿತುಗಾಂವ, ನವೀನ ಅಲ್ಲಾಪೂರ, ಕಮಲಹಾಸನ್ ಭಾವಿದೊಡ್ಡಿ, ಶಿವರಾಜ ಹಮೀಲ್‌ಪೂರ, ಸುಶೀಲ ಕೆಂಪೇನೋರ್, ಘಾಳೆಪ್ಪಾ ಅಂತಿ, ಧನರಾಜ ಬೇಮಳಖೇಡಾ ಹಾಗೂ ಸಾವಿರಾರು ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಉಪತ್ಥಿತರಿದ್ದರು.