ಪಾಲಿಕೆ ಸಭೆಯ ಟೀ-ಕಾಫಿ ತಿಂಡಿಗೆ ₹99 ಲಕ್ಷ ಟೆಂಡರ್‌

| Published : Mar 19 2025, 11:46 PM IST

ಸಾರಾಂಶ

ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿಯ ಸಭೆ ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಆಹಾರ ಪೂರೈಕೆಗೆ ₹99 ಲಕ್ಷ ವೆಚ್ಚದ ಟೆಂಡರ್‌ ಆಹ್ವಾನಿಸಿರುವುದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿಯ ಸಭೆ ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಆಹಾರ ಪೂರೈಕೆಗೆ ₹99 ಲಕ್ಷ ವೆಚ್ಚದ ಟೆಂಡರ್‌ ಆಹ್ವಾನಿಸಿರುವುದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಕಾರಣವಾಗಿದೆ.

ಬಿಬಿಎಂಪಿಯು ಕೇವಲ ಸಭೆ-ಸಮಾರಂಭಗಳ ಟೀ,ಕಾಫಿ, ತಿಂಡಿ ಹಾಗೂ ಊಟಕ್ಕೆ ಇಷ್ಟೊಂದು ಹಣ ವೆಚ್ಚ ಮಾಡಲಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಈ ಕುರಿತು ಬಿಬಿಎಂಪಿ ಸ್ಪಷ್ಟಣೆ ನೀಡಿದ್ದು, ₹99 ಲಕ್ಷ ಮೊತ್ತದ ಟೆಂಡರ್‌ ಕರೆದಿರುವುದು ಒಂದು ದಿನ ಕಾರ್ಯಕ್ರಮಕ್ಕೆ ಅಲ್ಲ. ಇಡೀ ವರ್ಷ ಬಿಬಿಎಂಪಿಯು ನಡೆಸುವ ಸಭೆ ಸಮಾರಂಭಗಳಿಗೆ ಪೂರೈಕೆ ಆಗುವ ಟೆಂಡರ್‌ ಆಗಿದೆ.

ಟೆಂಡರ್‌ ಅವಧಿ ಒಂದು ವರ್ಷವಾಗಿದೆ. ಸಣ್ಣ ಸಣ್ಣ ಕಾರ್ಯಕ್ರಮಗಳಿಗೆ ಪ್ರತ್ಯೇಕವಾಗಿ ದರ ನಿಗಧಿ ಮಾಡುವ ಮತ್ತು ಹೆಚ್ಚಿನ ತೊಡಕು ತಪ್ಪಿಸುವ ಉದ್ದೇಶದಿಂದ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.