ಸಾರಾಂಶ
10 ಅಡಿ ಹೆಬ್ಬಾವು ಸೆರೆ
ತುಮಕೂರು: ನಗರದ ಸಿದ್ದಗಂಗಾ ಮಠಕ್ಕೆ ಅದು ಹೋಗುವ ರಸ್ತೆ ಸಮೀಪ ರೈತರೊಬ್ಬರು ಡೈರಿಗೆ ಹಾಲನ್ನು ತೆಗೆದುಕೊಂಡು ಹೋಗುವಾಗ ಸುಮಾರು 10 ಅಡಿ ಉದ್ದ ಇರುವ ಹೆಬ್ಬಾವು ಪತ್ತೆಯಾಗಿದ್ದು ಕೂಡಲೇ ಅವರು ಉರಗ ತಜ್ಞ ಹರೀಶ್ ಅವರಿಗೆ ಕರೆ ಮಾಡಿದ್ದು ಕಾರ್ಯಾ ಚರಣೆ ನಡೆಸಿ ಹಾವನ್ನು ಸೆರೆಹಿಡಿಯಲಾಯಿತು. ಹಿಡಿದ ಹಾವನ್ನು ಸಮೀಪದ ಅರಣ್ಯ ಪ್ರದೇಶದ ದೇವರಾಯನ ದುರ್ಗದ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಇತರ ವನ್ಯಜೀವಿಗಳು ಜನ ವಸತಿ ಪ್ರದೇಶಕ್ಕೆ ಬಂದಾಗ ಯಾವುದೇ ತೊಂದರೆ ಕೊಡದೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಉರಗ ತಜ್ಞ ಹರೀಶ್ ಮೊ -7406312025 ವಿನಂತಿಸಿದ್ದಾರೆ.