ಸಾರಾಂಶ
ಅರುಣ್ ನಂ. ಸಿದ್ದಪ್ಪ, ಗಣೇಶ್ ಮೂರ್ತಿ ತಾಯೂರು, ನವೀನ್ ಕುಮಾರ್,
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೆ.ಆರ್. ಬ್ಯಾಂಕ್ ಚುನಾವಣೆಯಲ್ಲಿ ನಂ. ಸಿದ್ದಪ್ಪ ಹಾಗೂ ಹಾಲಿ ಅಧ್ಯಕ್ಷ ಪ್ರತಿಧ್ವನಿ ಪ್ರಸಾದ್ ನೇತೃತ್ವದ 12 ಮಂದಿ ಸದಸ್ಯರ ತಂಡ ಜಯಭೇರಿ ಬಾರಿಸಿ ಅಭೂತಪೂರ್ವ ಗೆಲುವು ಸಾದಿಸಿದೆ.ಅರುಣ್ ನಂ. ಸಿದ್ದಪ್ಪ, ಗಣೇಶ್ ಮೂರ್ತಿ ತಾಯೂರು, ನವೀನ್ ಕುಮಾರ್, ನಾಗಜ್ಯೋತಿ ಪ್ರಸಾದ್, ನಂ. ಸಿದ್ದಪ್ಪ, ಎಂ.ಡಿ. ಪಾರ್ಥಸಾರಥಿ, ಜಿ.ಎಂ. ಪಂಚಾಕ್ಷರಿ, ಪ್ರತಿಧ್ವನಿ ಪ್ರಸಾದ್, ಬಸವರಾಜು ಬಸಪ್ಪ, ಎಚ್.ವಿ. ಭಾಸ್ಕರ್, ಶಿವಪ್ರಕಾಶ್, ಎಚ್.ಎನ್. ಸರ್ವಮಂಗಳಾ ಗೆಲುವು ಸಾಧಿಸಿದ್ದಾರೆ. ಈ ವೇಳೆ ದಾರಿಪುರ ಡಿ. ಚಂದ್ರಶೇಖರ್, ದೇವಲಾಪುರ ಡಿ.ಪಿ. ಸುರೇಶ್, ಬಿ.ಎಂ. ಪರಮೇಶ್, ರಾಮರಾಜೇ ಅರಸ್, ಶಿವಮೂರ್ತಿ, ಹಡಜನ ಟಿ. ಲಿಂಗರಾಜು, ಎಸ್. ಮಹದೇವಸ್ವಾಮಿ, ಡಾ.ಎಂ.ಎಂ. ಮಹದೇವಪ್ಪ ಅಭಿನಂದಿಸಿದರು.