13 ವರ್ಷದ ಬಾಲಕ ಸಮರ್ಥ ಚಿತ್ರ ಕಲೆ, ಅಭಿನಯ, ಸಂಗೀತ, ಸಾಹಿತ್ಯ, ವಾದ್ಯ ನುಡಿಸುವಿಕೆ, ಕೋಡಿಂಗ್, ವಿಜ್ಞಾನ ಮಾದರಿ ತಯಾರಿಕೆ, ಎಲ್ಲದರಲ್ಲೂ ಸಮರ್ಥ

| Published : Nov 14 2024, 12:56 AM IST / Updated: Nov 14 2024, 01:02 PM IST

13 ವರ್ಷದ ಬಾಲಕ ಸಮರ್ಥ ಚಿತ್ರ ಕಲೆ, ಅಭಿನಯ, ಸಂಗೀತ, ಸಾಹಿತ್ಯ, ವಾದ್ಯ ನುಡಿಸುವಿಕೆ, ಕೋಡಿಂಗ್, ವಿಜ್ಞಾನ ಮಾದರಿ ತಯಾರಿಕೆ, ಎಲ್ಲದರಲ್ಲೂ ಸಮರ್ಥ
Share this Article
  • FB
  • TW
  • Linkdin
  • Email

ಸಾರಾಂಶ

13 ವರ್ಷದ ಬಹುಮುಖ ಪ್ರತಿಭೆಯ ಬಾಲಕ ಸಮರ್ಥ ಹೆಸರಿಗೆ ತಕ್ಕಂತೆ ಚಿತ್ರ ಕಲೆ, ಅಭಿನಯ, ಸಂಗೀತ, ಸಾಹಿತ್ಯ, ವಾದ್ಯ ನುಡಿಸುವಿಕೆ, ಕೋಡಿಂಗ್, ವಿಜ್ಞಾನ ಮಾದರಿ ತಯಾರಿಕೆ, ಎಲ್ಲದರಲ್ಲೂ ಸಮರ್ಥನಾಗಿದ್ದಾನೆ.  

ಮಲ್ಲಿಕಾರ್ಜುನ ಕುಬಕಡ್ಡಿ

 ಕೊಲ್ಹಾರ : 13 ವರ್ಷದ ಬಹುಮುಖ ಪ್ರತಿಭೆಯ ಬಾಲಕ ಸಮರ್ಥ ಹೆಸರಿಗೆ ತಕ್ಕಂತೆ ಚಿತ್ರ ಕಲೆ, ಅಭಿನಯ, ಸಂಗೀತ, ಸಾಹಿತ್ಯ, ವಾದ್ಯ ನುಡಿಸುವಿಕೆ, ಕೋಡಿಂಗ್, ವಿಜ್ಞಾನ ಮಾದರಿ ತಯಾರಿಕೆ, ಎಲ್ಲದರಲ್ಲೂ ಸಮರ್ಥನಾಗಿದ್ದಾನೆ. ಮಸೂತಿ ಗ್ರಾಮದ ಜಗದೀಶ ಸಾಲಳ್ಳಿ ಹಾಗೂ ಪ್ರತಿಭಾ ಸಾಲಳ್ಳಿ ದಂಪತಿ ಸುಪುತ್ರ 5 ವರ್ಷದ ಬಾಲಕನಿರುವಾಗಲೇ ನೂರಕ್ಕೂ ಹೆಚ್ಚು ಕಡೆ ವಿವಿಧ ದೇಶ ಭಕ್ತರ ಕಿರು ಉಪನ್ಯಾಸ ನೀಡಿ ಸೈ ಎನಿಸಿಕೊಂಡು ಹಲವಾರು ಪ್ರಶಸ್ತಿಗೆ ಭಾಜನವಾಗಿದ್ದಾನೆ.

5ನೇ ವರ್ಗದಲ್ಲಿ ಮೈ ಮೆಮೊರೆಬಲ್ ಟ್ರಿಪ್ಸ್, 6ನೇ ವರ್ಗದಲ್ಲಿ 5 ಆಕ್ಟಿವಿಟಿಸ್, ಬೆಸ್ಟ್ ಸ್ಟೋರಿಸ್, ಹೈದರಾಬಾದ್‌ ಟು ಶ್ರೀಶೈಲಂ ಪ್ರವಾಸ ಕಥನ, ಮೈ ಲವಲಿ ಸ್ಕೂಲ್ ಒಟ್ಟು 5 ಪುಸ್ತಕ ಬರೆದು ಬರೆದು ಮುದ್ರಿಸಿ ಅಮೆಜಾನ್ ಮಾರುಕಟ್ಟೆಯಲ್ಲಿ ಲಭಿಸುವಂತೆ ಮಾಡಿದ್ದಾನೆ.

ದೂರದರ್ಶನದಿಂದ ದೂರ ಇರುವ ಬಾಲಕ ಸದಾ ಹೊಸ ಸಂಶೋಧನೆಯಲ್ಲೆ ತಲ್ಲೀನರಾಗಿರುತ್ತಾನೆ ಕುರುಡರ ರಕ್ಷಣೆಗೆ ಸೆನ್ಸಾರ್ ಬೆಸ ಕನ್ನಡಕ, ಎಲೆಕ್ಟ್ರಿಕಲ್‌ ಗಣಿತ ಸರಿ, ಬೆಸ ಗಣಕಯಂತ್ರ, ಸೆನ್ಸಾರ್ ಬೆಸ ವಾಟರ್‌ ಡಿಸಫೆನ್ಸರ್, ಆಡಿನೋಗೆಮ್ ವಿತ್ತಡಿಸ್ಪ್ಲೇ, ಸೋಲಾರ ಸಿಸ್ಟಂ ಮಾಡಲ್, ಗ್ರಹಗಳ ಮಾದರಿ, ಸೆನ್ಸಾರ್ ಬೇಸ ನೀರಿನ ಅಳತೆ ಮಾಪನ, ಪೀರಿಯಾಡಿಕ್‌ ಟೇಬಲ್ ಜೊತೆಗೆ ಸೆನ್ಸಾರ್‌ ಆಡಿನೋ ಬಳಸಿ ಧ್ವನಿ ಮೂಲಕ ಪೀರಿಯಾಡಿಕ ಟೇಬಲ್ ಕಲಿಯುವ ಮಾದರಿ, ಲ್ಯಾಟಿಸ್‌ ಗುಣಾಕಾರ ಮಾದರಿ, ಸಾವಯವ ಗೊಬ್ಬರ ತಯಾರಿ ಮಾದರಿ, ಸರ್ಕಲ್ ಲೈಟಿಂಗ್‌ ಮಾದರಿ, ಸೈಕಲ್‌ ಬ್ರೆಕ್ ಲೈಟ್‌ ಹೀಗೆ ಹಲವಾರು ಎಲೆಕ್ಟ್ರಿಕಲ್ ಹೊಸ ಹೊಸ ಮಾದರಿ ತಯಾರಿಸುವ ಯುವ ವಿಜ್ಞಾನಿ ಜತೆಗೆ ನಿಮಿಷದಲ್ಲಿ 118 ಎಲಿಮೆಂಟ್‌ ನಾಲಿಗೆ ತುದಿಯಲ್ಲೆ ಹೆಳಬಲ್ಲ ಮೆಮೊರಿ ಕಿಂಗ್. 

ತಮ್ಮ ತರಗತಿಗಳ ಯಾವುದೇ ವಿಷಯ ಕೇಳಿದರೂ ವಯಸ್ಸಿಗೆ ಮೀರಿದ ಗಂಟೆಗಟ್ಟಲೆ ಶಿಕ್ಷಕರಂತೆ ವಿಷಯ ವಿವರಿಸುವ ಯುವ ಉಪನ್ಯಾಸಕನೂ ಹೌದು.ಯಾವುದೇ ಚಿತ್ರ ವ್ಯಕ್ತಿಯನ್ನು ಆ ಸ್ಥಳದಲ್ಲಿ ಅಂದವಾಗಿ ಬಿಡಿಸುವ ಕಲೆಗಾರ, ಮಣ್ಣಿನಲ್ಲಿ ಪ್ರಾಣಿಗಳು, ಗಣೇಶ ಮೂರ್ತಿ ಸೇರಿದಂತೆ ಮಾದರಿ ತಯಾರಿಸುವ ಕಲಾಕಾರ, ತ್ರಿಭಾಷೆಯಲ್ಲಿ ಹಾಡು ಹಾಡುವ ಜತೆಗೆ ಯಾವುದೇ ಹಾಡಿಗೆ ಹಾರ್ಮೋನಿಯಂ ನುಡಿಸುವ ಸಂಗೀತಗಾರ, ಕೋಡಿಂಗ್ ಮೂಲಕ ಗೇಮ ಮೇಕರ್, ಸ್ವಂತ ವೆಬ್‌ಸೈಟ್‌ ಕ್ರಿಯೇಟರ್, ಕನ್ನಡ, ಸಂಸ್ಕೃತ, ಇಂಗ್ಲಿಷ್‌, ಹಿಂದಿ, ನಿರರ್ಗಳವಾಗಿ ಮಾತನಾಡುವ ಜತೆಗೆ ವ್ಯವಹಾರಕ್ಕೆ ಬೇಕಾದಷ್ಟು ತೆಲುಗು ಸೇರಿದಂತೆ ಹಲವು ಭಾಷೆ ಮಾತನಾಡುವ ಬಹು ಭಾಷಾ ಪಂಡಿತ. 

ಕೈಚಳಕದಿಂದ ನಿರೂಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ, ಮನೆ ಅಲಂಕಾರಿಕ ಆಕರ್ಷಕ ಕ್ರಾಪ್ಟ್‌ ಮೇಕರ್, ರಂಗೋತ್ಸವ ಅಂತಾರಾಷ್ಟ್ರೀಯ ಮೆರಿಟ್‌ ಅವಾರ್ಡ್‌, ಓಲಂಪಿಯಾರ್ಡ್‌ ಪರೀಕ್ಷೆ ಗೋಲ್ಡ್‌ ಮೆಡಿಲಿಸ್ಟ್‌, ಕಂಪ್ಯೂಟರ್‌ ಓಲಂಪಿಯಾರ್ಡ್‌ ಜೂನಲ್‌ ರ್‍ಯಾಂಕರ್‌, ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಬಂಧ ಹಾಗೂ ಚಿತ್ರಕಲೆಯಲ್ಲಿ ಪ್ರಥಮ ಕಾಣಿಕೆ ಹಾಗೂ ನಗದು ಬಹುಮಾನ ಹೀಗೆ ತನ್ನ ಬಹುಮುಖ ಪ್ರತಿಭೆಯ ಮೂಲಕ ನೂರಾರು ಪ್ರಶಸ್ತಿಗಳು, ಚಿನ್ನದ ಪದಕಗಳಿಗೆ ಭಾಜನವಾಗಿದ್ದಾನೆ. sites.google.com/view/samarthsalalli/home ಪರಿಶೀಲಿಸಿದಾಗ ಎಲ್ಲ ಮಾಹಿತಿ ಲಬಿಸುವುದು.