ಏ. 16 ರಿಂದ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ

| Published : Mar 28 2024, 12:52 AM IST

ಸಾರಾಂಶ

ಲೋಕಾಪುರ: ಪಟ್ಟಣದ ವೆಂಕಟಾಪುರ ಓಣಿಯ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ಏ.೧೬ ರಿಂದ ೨೬ ರವರೆಗೆ ಆಯೋಜಿಸಲಾಗಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಯಶಸ್ವಿಗೆ ಪ್ರತಿಯೊಬ್ಬರ ಭಕ್ತರ ಸಹಕಾರ ಅತ್ಯಗತ್ಯವಿದೆ ಎಂದು ಕಾಶಿಲಿಂಗೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಅಧ್ಯಕ್ಷ ಮುತ್ತಪ್ಪ ಗಡ್ಡದವರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ವೆಂಕಟಾಪುರ ಓಣಿಯ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ಏ.೧೬ ರಿಂದ ೨೬ ರವರೆಗೆ ಆಯೋಜಿಸಲಾಗಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಯಶಸ್ವಿಗೆ ಪ್ರತಿಯೊಬ್ಬರ ಭಕ್ತರ ಸಹಕಾರ ಅತ್ಯಗತ್ಯವಿದೆ ಎಂದು ಕಾಶಿಲಿಂಗೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಅಧ್ಯಕ್ಷ ಮುತ್ತಪ್ಪ ಗಡ್ಡದವರ ಹೇಳಿದರು.

ಬುಧವಾರ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಏ.೧೬ ರಂದು ಮಧ್ಯಾಹ್ನ 3 ಗಂಟೆಗೆ ದುರ್ಗಾದೇವಿ ದೇವಸ್ಥಾನದಿಂದ ಕಳಸಾರೋಹಣ ಪ್ರಾರಂಭವಾಗುವುದು. ಏ. 17 ರಂದು ಗಂಗಾದರ್ಶನ, ಮಧ್ಯಾಹ್ನ 12.15ಕ್ಕೆ ಸಾಮೂಹಿಕ ವಿವಾಹ, 1 ಗಂಟೆಗೆ ಅನ್ನ ಸಂತರ್ಪಣೆ, 3 ಗಂಟೆಗೆ ಡೊಳ್ಳಿನ ವಾಲಗ ಕಾರ್ಯಕ್ರಮ ಕೆಂಪಟ್ಟಿಯ ಮಂಗರಾಯ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ಮನಗೂಳಿ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಕೇದಾರಿ ಸಂಗಡಿಗರಿಂದ ನಡೆಯುವವು. ಸಂಜೆ ೫ ಗಂಟೆಗೆ ಮಹಾರಥೋತ್ಸವ ಜರುಗುವುದು ಎಂದು ತಿಳಿಸಿದರು.

ಏ.೧೮ ರಂದು ಬೆಳಿಗ್ಗೆ 8 ಗಂಟೆಗೆ ಭಂಡಾರ ಒಡೆಯುವುದು,10 ಗಂಟೆಗೆ ನಿಮಿಷದ ಬಂಡಿ ಸ್ಪರ್ಧೆ, ರಾತ್ರಿ 9.30ಕ್ಕೆ ಕಾಶಿಲಿಂಗೇಶ್ವರ ನಾಟ್ಯ ಸಂಘ, ವೆಂಕಟಾಪುರ ಇವರಿಂದ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್‌ ಸಾಮಾಜಿಕ ನಾಟಕ ಹಮ್ಮಿಕೊಳ್ಳಲಾಗಿದೆ. ಏ.19 ರಂದು ಮುಂಜಾನೆ 10 ಗಂಟೆಗೆ ಸುತಬಂಡಿ ಸ್ಪರ್ಧೆ, ಮಧ್ಯಾಹ್ನ ೨ ಗಂಟೆಗೆ ಟಗರಿನ ಕಾಳಗ ಜರುಗುವುದು. ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಕ್ರಮವು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಹಾಗೂ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಇವರ ನೇತೃತ್ವದಲ್ಲಿ ಜರುಗುವುದು ಎಂದು ಮಾಹಿತಿ ನೀಡಿದರು.

ಕಾಶಿಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸೇವಾ ಸಮಿತಿ ಕಾರ್ಯದರ್ಶಿ ಬಾಳು ಗಡ್ಡದವರ ಮಾತನಾಡಿ, ಈ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಜಾತ್ರೆಯಲ್ಲಿ ೫ ದಿನಗಳ ಕಾರ್ಯಕ್ರಮ ಜರುಗುವುದು. ಜಾತ್ರೆಗೆ ತನು, ಮನ, ಧನದಿಂದ ಪಾಲ್ಗೊಂಡು ಯಶಸ್ವಿಗೆ ಸಹಕರಿಸಬೇಕು ಹಾಗೂ ಕಾಶಿಲಿಂಗೇಶ್ವರನ ಆರ್ಶೀರ್ವಾದ ಪಡೆಯಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಿದ್ದಪ್ಪ ಗಡ್ಡದವರ, ನಿಂಗಪ್ಪ ಗಡ್ಡದವರ, ತಿಪ್ಪಣ್ಣ ಕಿಲಾರಿ, ಸಿದ್ದಪ್ಪ ಹರಕಂಗಿ, ನಾಗಪ್ಪ ಗುಡ್ಡದ, ಬಸೆಂಗಪ್ಪ ಸಿದ್ದಾಪುರ, ಮಾಯಪ್ಪ ಗಡ್ಡದವರ, ಸಿಂಗಾಡೆಪ್ಪ ಗಡ್ಡದವರ, ಸಿದ್ದಪ್ಪ ಕಂಬಳಿ, ಬಾಳು ಗಡ್ಡದವರ ವೆಂಕಟಾಪುರ ಗ್ರಾಮದ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ಅಪಾರ ಭಕ್ತ ವೃಂದ ಇದ್ದರು.

ಫೋಟೋ....

೨೭-ಎಲ್.ಕೆ.ಪಿ-೧ : ಲೋಕಾಪುರ ಪಟ್ಟಣದ ವೆಂಕಟಾಪುರ ಓಣಿಯ ಕಾಶಿಲಿಂಗೇಶ್ವರ ಜಾತ್ರೆಯ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗಣ್ಯರು ಅನಾವರಣಗೊಳಿಸಿದರು. ಈ ವೇಳೆ ಮುತ್ತಪ್ಪ ಗಡ್ಡದವರ, ಬಾಳು ಗಡ್ಡದವರ, ಸಿದ್ದಪ್ಪ ಗಡ್ಡದವರ ನಾಗಪ್ಪ ಗುಡ್ಡದ ಇತರರು ಇದ್ದರು.