ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ 20 ಅಂಶದ ಕಾರ್ಯಕ್ರಮ

| Published : Dec 30 2023, 01:15 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ 20 ಅಂಶದ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ 20 ಅಂಶಗಳ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಜಿಲ್ಲೆಯ ಎಲ್ಲ ಶಾಲೆಗಳಿಗೆ ಸೂಚಿಸಿದೆ.

ರಾಮನಗರ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ 20 ಅಂಶಗಳ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಜಿಲ್ಲೆಯ ಎಲ್ಲ ಶಾಲೆಗಳಿಗೆ ಸೂಚಿಸಿದೆ.

2022-23ನೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ 21ನೇ ಸ್ಥಾನದಲ್ಲಿದ್ದು, ಇದನ್ನು ಉತ್ತಮ ಪಡಿಸಿ ಜಿಲ್ಲೆಯನ್ನು ಟಾಪ್ 10ರ ಸ್ಥಾನಕ್ಕೇರಿಸಲು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಅದಕ್ಕಾಗಿ 20 ಅಂಶಗಳ ಕಾರ್ಯಕ್ರಮವನ್ನು ರೂಪಿಸಿದ್ದು, ಜಿಲ್ಲೆಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಈ ಅಂಶಗಳನ್ನು ಅಳವಡಿಕೊಳ್ಳುವಂತೆ ನಿರ್ದೇಶನ ನೀಡಿದೆ.

2019ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿತ್ತು. ಆದರೆ, 2023ರಲ್ಲಿ ಜಿಲ್ಲೆ 21ಕ್ಕೆ ಕುಸಿದಿದ್ದು, ಇದನ್ನು ಸುಧಾರಿಸಿ ಮತ್ತೆ ಜಿಲ್ಲೆಯ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

2023-2024ನೇ ಸಾಲಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಒಟ್ಟು 13824 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಈ ಬಾರಿ ಗರಿಷ್ಟ ಫಲಿತಾಂಶ ಪಡೆಯುವ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಸಾಕಷ್ಟು ಉಪಕ್ರಮಗಳನ್ನು ತೆಗೆದುಕೊಂಡಿದ್ದು, ಇದರಲ್ಲಿ 20 ಅಂಶದ ಕಾರ್ಯಕ್ರಮ ಪ್ರಮುಖವಾಗಿದೆ. ಎಸ್ಸೆಸ್ಸೆಲ್ಸಿ ಪಠ್ಯಗಳಿಗೆ ಸಂಬಂಧಿಸಿದ್ದಂತೆ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ವಿಷಯದ ಪಾಠಗಳನ್ನು ಮುಗಿಸಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ವ್ಯಾಸಂಗದಲ್ಲಿ ತೊಡಗಿಸಿಕೊಳ್ಳುವಂತೆ ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಸೂಚನೆ ನೀಡಿದೆ.

20 ಅಂಶದ ಕಾರ್ಯಕ್ರಮ:

ಗುಣಮಟ್ಟದ ಫಲಿತಾಂಶ ಪಡೆಯುವ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಈ ಬಾರಿ ವಿಶೇಷ ಪ್ರಯತ್ನ ನಡೆಸಿದ್ದು, ೨೦ ಅಂಶದ ಕಾರ್ಯಕ್ರಮ ರೂಪಿಸಿದೆ. ಡಿಸೆಂಬರ್ ಅಂತ್ಯದೊಳಗೆ ಪಠ್ಯವನ್ನು ಮುಗಿಸುವುದು. ಪ್ರತಿ ಘಟಕದ ಪಾಠ ಬೋಧನೆಯ ಮುಗಿದ ನಂತರ ಆ ಘಟಕಕ್ಕೆ ಕಿರು ಪರೀಕ್ಷೆ ನಡೆಸುವುದು, ನಂತರ ಎರಡು ಅಥವಾ ಮೂರು ಘಟಕಗಳನ್ನು ಸೇರಿಸಿ ಮತ್ತೊಮ್ಮೆ ಕಿರು ಪರೀಕ್ಷೆ ನಡೆಸುವುದು. ಜತೆಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪುನಾವರ್ತನಾ ಪ್ರಕ್ರಿಯೆ ನಡೆಸುವುದು.

ಓದಿನ ಒತ್ತಡ ನಿವಾರಣೆಗಾಗಿ ಕಡ್ಡಾಯವಾಗಿ ವಿದ್ಯಾರ್ಥಿಗಳನ್ನು ಅರ್ಧಗಂಟೆ ಕಾಲ ಕ್ರೀಡೆಯಲ್ಲಿ ತೊಡಗಿಸಿವುದು, ಮಕ್ಕಳಲ್ಲಿ ಪರೀಕ್ಷಾ ಭಯ, ಒತ್ತಡ ಉಂಟಾಗದಂತೆ ಆರೋಗ್ಯಕರ ಸ್ಪರ್ಧೆಯಿಂದ ಕೂಡಿರುವ ಸಂತದಾಯಕ ಕಲಿಕೆಗೆ ಒತ್ತು ನೀಡುವುದು. ಹಿಂದಿನ ಐದು ವರ್ಷ ಪರೀಕ್ಷಾ ಪ್ರಶ್ನೆ ಪತ್ರಿಕೆಗಳಿಗೆ ವಿದ್ಯಾರ್ಥಿಗಳಿಂದ ಉತ್ತರ ಬರೆಸುವುದು, ಗುಂಪು ಚರ್ಚೆ, ವಿಶೇಷ ತರಗತಿ ನಡೆಸುವುದನ್ನು ಈ 20 ಅಂಶಗಳಲ್ಲಿ ತಿಳಿಸಲಾಗಿದೆ.

ಶಿಕ್ಷಕರಿಗೆ ಕಾರ್ಯಾಗಾರ:

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ಸಲುವಾಗಿ ಶಾಲಾ ಶಿಕ್ಷಣ ಇಲಾಖೆಯು ಇತ್ತೀಚಿಗೆ ಕಾರ್ಯಾಗಾರ ಹಮ್ಮಿಕೊಂಡಿತ್ತು. ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ತರಬೇತಿ ಹಾಗೂ ಮಾಹಿತಿ ನೀಡುವ ಕೆಲಸ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಮಾಹಿತಿ:

ಇನ್ನು ರಾಜ್ಯ ಸರಕಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಮಾದರಿಯನ್ನು ಬದಲಾವಣೆ ಮಾಡಿದೆ. ನೂತನ ಪ್ರಶ್ನೆ ಪತ್ರಿಕೆ ಮಾದರಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧತೆ ಮಾಡಬೇಕಿದೆ. ಜತೆಗೆ, ಈ ಬಾರಿಯಿಂದ ಪ್ರತಿ ಪರೀಕ್ಷಾ ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಹಾಗಾಗಿ ಈ ಸಂಬಂಧ ಶಿಕ್ಷಕರು ಹಾಗೂ ಮಕ್ಕಳಿಗೆ ಮಾಹಿತಿ ನೀಡುವ ಕೆಲಸ ಆಗಲಿದೆ. ಆಮೂಲಕ ಗುಣಮಟ್ಟದ ಫಲಿತಾಂಶಕ್ಕಾಗಿ ಕಾರ್‍ಯನಿರ್ವಹಿಸಲಾಗುತ್ತಿದೆ.

ಅಧಿಕಾರಿಗಳಿಗೆ ಶಾಲೆ ದತ್ತು:

ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಈ ಬಾರಿಯು ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆ ಅಧಿಕಾರಿಗಳಿಗೆ ಒಂದೊಂದು ಸರಕಾರಿ ಶಾಲೆಗಳನ್ನು ದತ್ತು ನೀಡಲಾಗುತ್ತದೆ. ಈ ಸಂಬಂಧ ತಾಲೂಕು ಹಂತದಲ್ಲಿ ಅಧಿಕಾರಿಗಳ ಹೆಸರು ಹಾಗೂ ದತ್ತು ನೀಡಲಿರುವ ಶಾಲೆಯ ಹೆಸರಿರುವ ನಮೂನೆ ತಯಾರಿಸಲಾಗಿದ್ದು, ಜಿಪಂ ಸಿಇಒ ಗಮನಕ್ಕೆ ತರಲಾಗಿದೆ. ಈ ಪ್ರಕಾರ ಶಾಲೆ ದತ್ತು ಪಡೆದ ಶಿಕ್ಷಣ ಇಲಾಖೆ ಅಧಿಕಾರಿಯು ವಾರಕ್ಕೆ ಒಂದು ದಿನ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಬೇಕು. ಇನ್ನು ಶಿಕ್ಷಣ ಇಲಾಖೆ ಹೊರತು ಪಡಿಸಿದ ಅಧಿಕಾರಿಗಳು ೧೫ ದಿನ ಅಥವಾ ತಿಂಗಳಿಗೊಮ್ಮೆ ಭೇಟಿ ನೀಡಬೇಕೆಂದು ಸೂಚಿಸಲಾಗಿದೆ. ಇದರಲ್ಲಿ ತಹಸೀಲ್ದಾರ್, ಉಪವಿಭಾಗಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆ ತರಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ.

ಬಾಕ್ಸ್................

ಕಳೆದ ಮೂರು ಸಾಲಿನ ಜಿಲ್ಲೆಯಲ್ಲಿನ ಎಸ್ಸೆಸ್ಸೆಲ್ಸಿ ಫಲಿತಾಂಶತಾಲೂಕ.

202.

202.

2020

ಚನ್ನಪಟ್ಟಣ 98.0.

95.4.

93.11

ಮಾಗಡ.

83.8.

95.7.

93.27

ಕನಕಪು.

88.0.

95.1.

83.24

ರಾಮನಗ.

89.6.

89.4.

78.90ಒಟ್ಟ.

89.9.

93.8.

86.43

ಬಾಕ್ಸ್.................

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಸಂಖ್ಯೆ

ತಾಲೂಕ.

ವಿದ್ಯಾರ್ಥಿಗಳ ಸಂಖ್ಯೆ

ಚನ್ನಪಟ್ಟ.

3113

ಕನಕಪು.

4152ಮಾಗಡ.

2792

ರಾಮನಗ.

3767

ಒಟ್ಟ.

13814

ಕೋಟ್..............

ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಗುಣಮಟ್ಟದ ಫಲಿತಾಂಶ ಪಡೆಯುವ ಸಂಬಂಧ 20 ಅಂಶದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಬೇರೆ ಇಲಾಖೆ ಅಧಿಕಾರಿಗಳಿಗೆ ಶಾಲೆಯನ್ನು ದತ್ತು ನೀಡಲಾಗಿದೆ.

- ವಿ.ಸಿ.ಬಸವರಾಜೇಗೌಡ, ಉಪ ನಿರ್ದೇಶಕ(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ರಾಮನಗರ.

ಪೊಟೋ೨೯ಸಿಪಿಟಿ೧:

ಸಾಂದರ್ಭಿಕ ಚಿತ್ರ