ನೀರಿಗಾಗಿ ಅಲೆದು ನಿತ್ರಾಣಗೊಂಡು ಕುಸಿದು ಬಿದ್ದ ಮರಿಆನೆ

| Published : Apr 07 2024, 01:51 AM IST

ಸಾರಾಂಶ

ಕನಕಪುರ: ನೀರಿಗಾಗಿ ಅಲೆದಲೆದು ನಿತ್ರಾಣಗೊಂಡಿದ್ದ ಮರಿ ಆನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಅಟ್ಟಿರುವ ಘಟನೆ ತಾಲೂಕಿನ ಕೋಡಿಹಳ್ಳಿ ಹೊರವಲಯದಲ್ಲಿ ಕಂಡುಬಂದಿದೆ.

ಕನಕಪುರ: ನೀರಿಗಾಗಿ ಅಲೆದಲೆದು ನಿತ್ರಾಣಗೊಂಡಿದ್ದ ಮರಿ ಆನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಅಟ್ಟಿರುವ ಘಟನೆ ತಾಲೂಕಿನ ಕೋಡಿಹಳ್ಳಿ ಹೊರವಲಯದಲ್ಲಿ ಕಂಡುಬಂದಿದೆ. ಕನಕಪುರ ಪ್ರಾದೇಶಿಕ ವಲಯ ಅರಣ್ಯ ವ್ಯಾಪ್ತಿಯ ಬೆಟ್ಟಹಳ್ಳಿ ಕೂತಗಳೆ ಗ್ರಾಮದ ಚನ್ನೇಗೌಡರ ಜಮೀನಿನ ಪಕ್ಕದ ಅರಣ್ಯ ಪ್ರದೇಶಕ್ಕೆ ಆಹಾರ ಅರಸಿ ಜಮೀನಿನ ಬಳಿ ಬಂದಿದೆ. ನೀರು ಕೂಡ ಸಿಗದ ಕಾರಣ ನಿತ್ರಾಣಗೊಂಡು ಆನೆ ಮರಿ ಬಿದ್ದಿದೆ. ನಿತ್ರಾಣಗೊಂಡ ಆನೆ ಮರಿಯನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ನೀರು ಕುಡಿಸಿ ಉಪಚರಿಸಿದ್ದಾರೆ. ನೀರು ಕುಡಿದ ಬಳಿಕ‌ ನಿಧಾನವಾಗಿ ಕಾಡೆನೆಡೆ ಮರಿ ಆನೆ ತೆರಳಿದೆ.