ಸಾರಾಂಶ
ಸಾವಳಗಿ: ಜಮಖಂಡಿ-ಸಾವಳಗಿ ಸಂಪರ್ಕ ಕಲ್ಪಿಸುವ ನಾಕೂರ ಹಳ್ಳದ ಹತ್ತಿರ ಬೃಹತ್ ಆಲದ ಮರ ಮಂಗಳವಾರ ರಸ್ತೆ ಮೇಲೆ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಗಿತ್ತು. ಬೆಳಗ್ಗೆ 10 ಗಂಟೆಗೆ ಮರ ಬಿದ್ದು, ಸಂಚಾರಕ್ಕೆ ತೊಂದರೆಯಾಗಿದೆ ಎನ್ನುವ ಮಾಹಿತಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಗೊತ್ತಾಗಿದ್ದರೂ ಮಧ್ಯಾಹ್ನ 3 ಗಂಟೆವರೆಗೆ ತೆರವುಗೊಳಿಸುವ ಗೋಜಿಗೆ ಹೋಗಲಿಲ್ಲ.
ಸಾವಳಗಿ: ಜಮಖಂಡಿ-ಸಾವಳಗಿ ಸಂಪರ್ಕ ಕಲ್ಪಿಸುವ ನಾಕೂರ ಹಳ್ಳದ ಹತ್ತಿರ ಬೃಹತ್ ಆಲದ ಮರ ಮಂಗಳವಾರ ರಸ್ತೆ ಮೇಲೆ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಗಿತ್ತು. ಬೆಳಗ್ಗೆ 10 ಗಂಟೆಗೆ ಮರ ಬಿದ್ದು, ಸಂಚಾರಕ್ಕೆ ತೊಂದರೆಯಾಗಿದೆ ಎನ್ನುವ ಮಾಹಿತಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಗೊತ್ತಾಗಿದ್ದರೂ ಮಧ್ಯಾಹ್ನ 3 ಗಂಟೆವರೆಗೆ ತೆರವುಗೊಳಿಸುವ ಗೋಜಿಗೆ ಹೋಗಲಿಲ್ಲ. ಕೊನೆಯ ಪಕ್ಷ ರಸ್ತೆಯ ಮೇಲೆ ಬಿದ್ದಿರುವ ಕೊಂಬೆಗಳನ್ನಾದರು ತುಂಡರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಕೆಲವನ್ನೂ ಅಧಿಕಾರಿಗಳು ಮಾಡದಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಯಿತು. ಕೊನೆಗೆ ವಾಹನ ಸವಾರರೇ ಕೊಂಬೆಗಳನ್ನು ರಸ್ತೆಯ ಒಂದು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.