ಚೀಲೂರಿನ ದರ್ಗಾಕ್ಕೂ ನುಗ್ಗಿದ ಕರಡಿ: ಮತ್ತೆ ಆತಂಕ

| Published : Aug 30 2025, 01:00 AM IST

ಚೀಲೂರಿನ ದರ್ಗಾಕ್ಕೂ ನುಗ್ಗಿದ ಕರಡಿ: ಮತ್ತೆ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ದರ್ಗಾದಲ್ಲಿ ಬುಧವಾರ ಕರಡಿ ನುಗ್ಗಿರುವ ಘಟನೆ ನಡೆಸಿದ್ದು, ದರ್ಗಾದೊಳಗೆ ಕರಡಿ ಪ್ರವೇಶಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೀಲೂರಿನಲ್ಲಿ ಎರಡನೇ ಬಾರಿ ಕರಡಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಇನ್ನಷ್ಟು ನ್ನಸೃಷ್ಠಿಯಾಗಿದೆ.

- ದರ್ಗಾದಲ್ಲಿ ಯಾರು ಇಲ್ಲದ್ದರಿಂದ ತಪ್ಪಿದ ಅನಾಹುತ । ಕೆಲ ದಿನಗಳ ಹಿಂದಷ್ಟೇ ಮಹಿಳೆಗೆ ದಾಳಿ ನಡೆಸಿತ್ತು

- - -

- 2 ಕಡೆ ಬೋನ್‌ಗಳ ಅಳವಡಿಸಿದ್ದರೂ ಸೆರೆಯಾಗದೇ ಕರಡಿ ಆಟ

- 2ನೇ ಬಾರಿ ಕರಡಿ ಕಾಣಿಸಿಕೊಂಡಿದ್ದರಿಂದ ಇನ್ನಷ್ಟು ಆತಂಕ ಸೃಷ್ಟಿ

- ಕರಡಿ ಸೆರೆ ಹಿಡಿಯುವವರೆಗೂ ಎಚ್ಚರಿಕೆ ವಹಿಸಲು ವಲಯ ಅರಣ್ಯಾಧಿಕಾರಿ ಮನವಿ

- - -

ನ್ಯಾಮತಿ: ತಾಲೂಕಿನ ಚೀಲೂರು ಗ್ರಾಮದ ದರ್ಗಾದಲ್ಲಿ ಬುಧವಾರ ಕರಡಿ ನುಗ್ಗಿರುವ ಘಟನೆ ನಡೆಸಿದ್ದು, ದರ್ಗಾದೊಳಗೆ ಕರಡಿ ಪ್ರವೇಶಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೀಲೂರಿನಲ್ಲಿ ಎರಡನೇ ಬಾರಿ ಕರಡಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಇನ್ನಷ್ಟು ನ್ನಸೃಷ್ಠಿಯಾಗಿದೆ.

ಚೀಲೂರು ಗ್ರಾಮದ ತುಂಗಭದ್ರಾ ನದಿ ತಟದಲ್ಲಿರುವ ದರ್ಗಾದಲ್ಲಿ ಕರಡಿ ಕಾಣಿಸಿಕೊಂಡಿದೆ. ದರ್ಗಾದೊಳಗೆ ಕರಡಿ ನುಗ್ಗಿದ ಸಂದರ್ಭ ಅಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಕರಡಿಯು ದರ್ಗಾದೊಳಗೆ ನುಗ್ಗಿದ ಸಂದರ್ಭ ಜನರು ಇದ್ದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಅದೃಷ್ಟವಶಾತ್‌ ಅಪಾಯ ತಪ್ಪಿದಂತಾಗಿದೆ. ಕರಡಿ ಕಾಟದಿಂದ ಭಯಬೀತರಾದ ಜನರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಕರಡಿ ಸೆರೆಹಿಡಿದು ಅಪಾಯ ದೂರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಹಿಳೆ ಮೇಲೆ ದಾಳಿಯಿಟ್ಟಿತ್ತು:

ಕಳೆದ ಕೆಲ ದಿನಗಳ ಹಿಂದಷ್ಟೇ ಇದೇ ಗ್ರಾಮದಲ್ಲಿ ನಿರ್ಮಾಣ ಹಂತದ ಮನೆಯೊಂದಕ್ಕೆ ಕರಡಿ ರಾತ್ರೋರಾತ್ರಿ ನುಗ್ಗಿತ್ತು. ಕಟ್ಟಡದಲ್ಲಿ ಮಲಗಿದ್ದ ಮಹಿಳೆ ಮೇಲೆ ದಾಳಿಗೆ ಪ್ರಯತ್ನಿಸಿತ್ತು. ಮಹಿಳೆಯು ದಿಟ್ಟತನದಿಂದ ಕರಡಿಯನ್ನು ಎದುರಿಸಿ, ಓಡಿಸಿದ್ದಳು. ಈ ಆತಂಕ ಮರೆಯುವ ಮುನ್ನವೇ ಮತ್ತೆ ಕರಡಿ ಇದೇ ಗ್ರಾಮದ ದರ್ಗಾಕ್ಕೂ ನುಗ್ಗಿ ಭೀತಿ ಹೆಚ್ಚಿಸಿದೆ.

ಬೋನ್‌ಗೆ ಬೀಳದೇ ಕರಡಿ ಆಟ:

ಕರಡಿ ದರ್ಗಾಕ್ಕೂ ನುಗ್ಗಿದ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿ ಬರ್ಕತ್‌ ಅಲಿ, ಅಂಜಲಿ, ಪ್ರಶಾಂತ್‌, ಶಿವರಾಜ್‌ ಸೇರಿದಂತೆ ವಾಚರ್‌ಗಳು ಕರಡಿ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಕರಡಿ ಸೆರೆಹಿಡಿಯಲು ಚೀಲೂರು ಭಾಗದಲ್ಲಿ 2 ಕಡೆ ಬೋನ್‌ ಅಳವಡಿಸಲಾಗಿದೆ. ಆದರೂ, ಕರಡಿ ಬೋನ್‌ಗೆ ಬೀಳದೇ ಆಟವಾಡುತ್ತಿದೆ. ಕರಡಿ ಸೆರೆ ಹಿಡಿಯುವವರೆಗೂ ಜನರು ಎಚ್ಚರಿಕೆಯಿಂದ ಓಡಾಡುವಂತೆ ವಲಯ ಅರಣ್ಯಾಧಿಕಾರಿ ಕಿಶೋರ್‌ ನಾಯ್ಕ ಮನವಿ ಮಾಡಿದ್ದಾರೆ.

- - -

-ಚಿತ್ರ:

ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ತುಂಗಭದ್ರಾ ನದಿ ತಟದಲ್ಲಿರುವ ದರ್ಗಾವೊಂದಕ್ಕೆ ಕರಡಿ ನುಗ್ಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.