ಸಾರಾಂಶ
ಚಿಮ್ಮಡ ಗ್ರಾಮದ ಶ್ರೀ ಬಾಹುಸಾಹೇಬರ ಮಠದ ಆವರಣದಲ್ಲಿ ಅಗ್ನಿವೀರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಆಭ್ಯರ್ಥಿಗಳನ್ನು ಸತ್ಕರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕೇಂದ್ರ ಸರ್ಕಾರಿ ನೇಮಕ ಮಾಡಿಕೊಳ್ಳುವ ಅಗ್ನಿವೀರ ಸೈನಿಕ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಒಂದೇ ಬಾರಿಗೆ ಚಿಮ್ಮಡ ಗ್ರಾಮದ 14 ಜನ ಯುವಕರು ಅಯ್ಕೆಯಾಗುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.ಇತ್ತೀಚೆಗೆ ನಡೆದ ಅಗ್ನೀವೀರ ಸೈನಿಕ ಆಯ್ಕೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಗ್ರಾಮದ ಸುಮಾರು 20ಕ್ಕೂ ಅಧಿಕ ಯುವಕರು ಪರೀಕ್ಷೆ ಬರೆದಿದ್ದರು. ಹದಿನಾಲ್ಕು ಜನ ಯುವಕರು ಬಾರಿಗೆ ತೇರ್ಗಡೆ ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಆಯ್ಕೆಯಾದ ಎಲ್ಲ ಯುವಕರು ಬನಹಟ್ಟಿಯ ಜಿ.ಎಸ್. ಅಕಾಡೆಮಿಯ ತರಬೇತಿ ಕೇಂದ್ರದಲ್ಲಿ ತರಬೇತಿ ಹೊಂದಿದ್ದು ವಿಶೇಷ. ಒಂದೇ ಬಾರಿಗೆ ಹೆಚ್ಚಿನ ಯುವಕರು ಆಯ್ಕೆಯಾದ ನಿಮಿತ್ತ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಆಯ್ಕೆಯಾದ ಅಗ್ನಿವೀರರನ್ನು ಜಿ.ಎಸ್. ಅಕಾಡೆಮಿಯಿಂದ ಸ್ಥಳಿಯ ಬಾಹುಸಾಹೇಬರ ಮಠದ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ವಿನಾಯಕ ಹಟ್ಟಿ, ಚೇತನ ಬಗನಾಳ, ಶಿವಾನಂದ ಬೆಳಗಲಿ, ಬಸವೇಶ್ವರ ಯುವಕ ಮಂಡಳದ ಅಧ್ಯಕ್ಷ ಬಸವರಾಜ ಬಳಗಾರ, ಗುರುಪಾದ ಹಟ್ಟಿ, ಎಸ್.ಜಿ. ಹಳ್ಳದಮನಿ, ಜಿ.ಎಸ್. ಅಕಾಡೆಮಿಯ ವಿಠ್ಠಲ ಉಪ್ಪಾರ, ಸತೀಶ ಸಿಂಧೆ, ಸದಾಶಿವ ಮಾಳಿ, ಮಹಾದೇವ ಭಂಗಿ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.