ಪಗಡಬಂಡಿ ಗ್ರಾಮಸ್ಥರಿಂದ ರಾಮಲಲ್ಲಾಗೆ ಗದ್ದಿಗೆ ಕಂಬಳಿ

| Published : Jan 17 2024, 01:48 AM IST

ಸಾರಾಂಶ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಗಡಬಂಡಿ ಗ್ರಾಮಸ್ಥರು ಅಯೋಧ್ಯೆಯ ಶ್ರೀ ರಾಮಲಲ್ಲಾನಿಗೆ ಅರ್ಪಿಸಲು ಮಂಗಳವಾರ ಗದ್ದಿಗೆ ಕಂಬಳಿಯನ್ನು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ನೀಡಿದ್ದಾರೆ. ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಾಲುಮತ ಸಮಾಜದ ಮುಖಂಡರು ಕಂಬಳಿ ಹಸ್ತಾಂತರಿಸಿದರು. ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪಗಡಬಂಡಿ ಗ್ರಾಮದ 40ಕ್ಕೂ ಹೆಚ್ಚು ಮನೆಯಿಂದ ಪವಿತ್ರ ಉಣ್ಣೆಯನ್ನು ಸಂಗ್ರಹಿಸಿ ಕೈಯಿಂದಲೇ ನೇಕರಾರು 3 ದಿನಗಳ ಕಾಲ ಈ ಕರಿ ಕಂಬಳಿಯನ್ನು ನೇಯ್ದಿದ್ದು, ಈಶ್ವರಪ್ಪ ಅವರ ಮೂಲಕ ಶ್ರೀ ರಾಮಲಲ್ಲಾನಿಗೆ ಸಮರ್ಪಿಸುತ್ತಿದ್ದೇವೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಗಡಬಂಡಿ ಗ್ರಾಮಸ್ಥರು ಅಯೋಧ್ಯೆಯ ಶ್ರೀ ರಾಮಲಲ್ಲಾನಿಗೆ ಅರ್ಪಿಸಲು ಮಂಗಳವಾರ ಗದ್ದಿಗೆ ಕಂಬಳಿಯನ್ನು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ನೀಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಾಲುಮತ ಸಮಾಜದ ಮುಖಂಡರು ಮಾತನಾಡಿ, ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪಗಡಬಂಡಿ ಗ್ರಾಮದ 40ಕ್ಕೂ ಹೆಚ್ಚು ಮನೆಯಿಂದ ಪವಿತ್ರ ಉಣ್ಣೆಯನ್ನು ಸಂಗ್ರಹಿಸಿ ಕೈಯಿಂದಲೇ ನೇಕರಾರು 3 ದಿನಗಳ ಕಾಲ ಈ ಕರಿ ಕಂಬಳಿಯನ್ನು ನೇಯ್ದು ಈಶ್ವರಪ್ಪನವರ ಮೂಲಕ ಶ್ರೀ ರಾಮಲಲ್ಲಾನಿಗೆ ಸಮರ್ಪಿಸುತ್ತಿದ್ದೇವೆ ಎಂದರು.

2015ರಲ್ಲಿ ಪ್ರಧಾನಿ ಮೋದಿ ಅವರು ಚಿತ್ರದುರ್ಗಕ್ಕೆ ಆಗಮಿಸಿದಾಗ ಅವರಿಗೆ ಇದೇ ರೀತಿಯ ಕಂಬಳಿಯನ್ನು ನೀಡಿದ್ದೆವು, ನಮಗೆ ಯಾವುದೇ ರಾಜಕೀಯವಿಲ್ಲ. ಆದರೆ, ಈ ಪವಿತ್ರ ಕಂಬಳಿಯಿಂದ ದೇಶಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ, ನಮ್ಮ ಸಮಾಜದ ಎಲ್ಲರ ಅಪೇಕ್ಷೆಯಂತೆ ಈ ಕಂಬಳಿಯನ್ನು ನೀಡುತ್ತಿದ್ದೇವೆ ಎಂದು ಪ್ರಮುಖರಾದ ಎಂ.ವಿ.ಶಾಂತಕುಮಾರ್ ತಿಳಿಸಿದರು.

ಮಾಜಿ ಸಚಿವ ಈಶ್ವರಪ್ಪ ಅವರು ಈ ಕಂಬಳಿಯನ್ನು ಸ್ವೀಕರಿಸಿ ಪೋಸ್ಟ್ ಮೂಲಕ ಅಯೋಧ್ಯೆಗೆ ಕಳುಹಿಸಿವುದಾಗಿ ಭರವಸೆ ನೀಡಿದರು.

- - -ಬಾಕ್ಸ್‌ ಚೌಡೇಶ್ವರಿ ದೇಗುಲ ಆವರಣ ಸ್ವಚ್ಛತೆ:

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯ ರಾಮ ಮಂದಿರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಸ್ಥಾನಗಳ ಸ್ವಚ್ಚಗೊಳಿಸುವಂತೆ ಕರೆ ನೀಡಿದ್ದು, ಈ ಹಿನ್ನೆಲೆ ಮಂಗಳವಾರ ಶಿವಮೊಗ್ಗದ ಎನ್.ಟಿ. ರಸ್ತೆಯ ಭಾರತಿ ಕಾಲೋನಿಯ ಚೌಡೇಶ್ವರಿ ದೇವಸ್ಥಾನ ಆವರಣವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರು ಸ್ವಚ್ಛಗೊಳಿಸಿದರು.

- - - -16ಎಸ್‌ಎಂಜಿಕೆಪಿ05:

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಾಲುಮತ ಸಮಾಜದ ಮುಖಂಡರು ಮಂಗಳವಾರ ಆಯೋಧ್ಯೆಯ ಶ್ರೀ ರಾಮಲಲ್ಲಾನಿಗೆ ಅರ್ಪಿಸಲು ಮಂಗಳವಾರ ಗದ್ದಿಗೆ ಕಂಬಳಿಯನ್ನು ಮಾಜಿ ಸಚಿವ ಈಶ್ವರಪ್ಪನವರಿಗೆ ನೀಡಿದರು.

- - -