ಸಾರಾಂಶ
ಮನಸ್ಸು ವಿಕಾರಚಿತ್ತ ವಿಷಯಗಳ ಗೋಡೌನ್ ಆಗಿದೆ, ಅಧುನಿಕ ಜೀವನದಲ್ಲಿ 88 ಪ್ರತಿಶತ ಜನ ಒತ್ತಡದಲ್ಲಿ ಬದುಕುತ್ತಿದ್ದಾರೆಂದು ಸರ್ವೆ ಹೇಳುತ್ತದೆ
ಗದಗ: ನಿರಂತರ ದೇವರ ನಾಮ ಜಪದಿಂದ ಆನಂದದ ಬದುಕು ಪಡೆಯಲು ಸಾಧ್ಯ ಎಂದು ಸನಾತನ ಸಂಸ್ಥೆಯ ರಾಜು ಧರಿಯನ್ನವರ ಹೇಳಿದರು.
ಅವರು ಪ್ರೋಬಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮನಸ್ಸು ವಿಕಾರಚಿತ್ತ ವಿಷಯಗಳ ಗೋಡೌನ್ ಆಗಿದೆ, ಅಧುನಿಕ ಜೀವನದಲ್ಲಿ 88 ಪ್ರತಿಶತ ಜನ ಒತ್ತಡದಲ್ಲಿ ಬದುಕುತ್ತಿದ್ದಾರೆಂದು ಸರ್ವೆ ಹೇಳುತ್ತದೆ. ಸಾವು ಮುಪ್ಪಿನ ಭಯದೊಂದಿಗೆ ಗಳಿಸಿದ್ದ ಆಸ್ತಿಯ ವ್ಯಾಮೋಹಗಳ ಬಂಧನದಲ್ಲಿ ತೊಳಲಾಡುತ್ತಿದ್ದಾರೆ. ಬೇರೆಯವರ ಬಗ್ಗೆ ಮಾತನಾಡಬಾರದು, ನಮ್ಮೊಡನೆ ನಾವು ಮಾತಾಡಬೇಕು ತಪ್ಪೊಪ್ಪಿಗೆಯಿಂದ ಮನಃಶಾಂತಿ ದೊರಕುತ್ತದೆ.
ಸುಖ ದುಃಖದ ಎಲ್ಲ ಪರಿಸ್ಥಿತಿಗಳಲ್ಲೂ ನಿರ್ವಿಕಾರ ಸ್ಥಿತ ಪ್ರಜ್ಞೆಯಲ್ಲಿರಬೇಕು. ಬಸವಣ್ಣನವರ ವಚನದಂತೆ ಮಾಡಿದರೂ ಮಾಡದಂತಿರಬೇಕು. ಪೈಗಂಬರ, ಜೀಸಸ್, ಸೂಫಿಗಳಂತ ಜ್ಞಾನಿಗಳ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ದಾಸೋಹ ಸೇವೆಗೈದ ಕಸ್ತೂರಿಬಾಯಿ ಎಂ. ಭಾಂಡಗೆ, ಪ್ರಭಾಕರ ಬದಿ ಮತ್ತು ನಂದಿಬಸಪ್ಪ ಎಚ್ಚಲಗಾರ ಜನ್ಮದಿನ ಆಚರಿಸುವದರೊಂದಿಗೆ ಸನ್ಮಾನಿಸಲಾಯಿತು. ನೂತನ ಸದಸ್ಯ ಬಸವರಡ್ಡಿ ಸಿದ್ನೆಕೊಪ್ಪ, ಸಮೀರ್ ಬಳ್ಳಾರಿ, ಸಿ.ಎಸ್. ಮಾಸ್ತಿಹೊಳಿಮಠ, ಪುಷ್ಪಾ ಹೊಳಿಮಠ ಮತ್ತು ಅಶೋಕ ಮಾನೇದ ಅವರನ್ನು ಸ್ವಾಗತಿಸಲಾಯಿತು.
ಕೆ.ಎಸ್.ಗುಗ್ಗರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಧಾ ಬೆಳ್ಳಿ ಪ್ರಾರ್ಥಿಸಿದರು. ಮಂಗಳಾ ಯಾನಮಶೆಟ್ಟಿ ಸ್ವಾಗತಿಸಿದರು. ಎಂ.ಸಿ. ವಗ್ಗಿ ಪ್ರವಾಸದ ಅನುಭವ ವಿವರಿಸಿದರು. ರತ್ನಾ ಘಾರ್ಗಿ, ತ್ರಿವೇಣಿ ಖಾನಾಪೂರ, ಶಾಂತಾಬಾಯಿ ಬಾಕಳೆ ಜಾನಪದ ಹಾಡು ಹಾಡಿದರು. ರಾಜಶೇಖರ ಕರಡಿ, ಎಸ್.ವಿ. ಯಂಡಿಗೇರಿ ನಿರೂಪಿಸಿದರು. ಬಿ.ಎಚ್. ಗರಡಿ ವಂದಿಸಿದರು. ಕ್ಲಬ್‌ನ ವಾರ್ತಾಧಿಕಾರಿ ಬಸವರಾಜ ಗಣಪ್ಪನವರ ಮುಂತಾದವರು ಹಾಜರಿದ್ದರು.