ಸಾರಾಂಶ
"ಸುರಪುರದ ಸಂಗೀತ ಕಲಾ ಸಾಧಕರು " ಗ್ರಂಥ ಲೋಕಾರ್ಪಣೆ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಸುರಪುರಸುರಪುರದಲ್ಲಿ ಸಾವಿರಾರು ಕವಿ, ಕಲಾವಿದರು, ಸಾಹಿತಿಗಳು, ಸಂತರು, ಶರಣರು, ಸಾಧಕರು ತಮ್ಮ ಕುರುಹುಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಶೋತಿಯ ಬ್ರಹ್ಮನಿಷ್ಟ ಸದ್ಗುರು ಸೋಪಾನಾಥ ಸ್ವಾಮೀಜಿ ಹೇಳಿದರು.
ಶ್ರೀಸದ್ಗುರು ಸಹಜಾನಂದ ಸರಸ್ವತಿ ಮಹಾಸ್ವಾಮಿಗಳ ಮಂದಿರ ರಂಗಂಪೇಟೆಯಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಸುರಪುರದ ಸಂಗೀತ ಕಲಾ ಸಾಧಕರು ಎಂಬ ಗ್ರಂಥ ಲೋಕಾರ್ಪಣೆ ಹಾಗೂ ಸಂಗೀತ ಸೇರಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾನತಾಡಿದರು.ಸುರಪುರ ಸಂಸ್ಥಾನದ ರಾಜರ ಆಶ್ರಯದಲ್ಲಿ ಪ್ರಸಿದ್ಧವಾದ "ಗರುಡಾದ್ರಿ ಚಿತ್ರಕಲೆ " ದುಂದುಮೆ ಹಾಡುಗಳು, ಲಕ್ಷ್ಮೀಶನ ಭರತೇಶ ವೈಭವ, ಮುದನೂರಿನ ದೇವರದಾಸಿಮಯ್ಯನ ವಚನಗಳು, ಸಗರನಾಡಿನ ಭವ್ಯ ಪರಂಪರೆಗೆ ಸಾಕ್ಷಿಯಾಗಿವೆ. ಇಂದು ಸುಮಾರು 581 ಕವಿ ಕಲಾವಿದ ಸಾಧಕರ ಪರಿಚಯವುಳ್ಳ "ಸುರಪುರದ ಸಂಗೀತ ಕಲಾ ಸಾಧಕರು " ಪುಸ್ತಕ ಲೋಕಾರ್ಪಣೆಯಾಗಿದ್ದು, ಸಂತೋಷವಾಗಿದೆ ಎಂದರು.
ಸುರಪುರ ಸಂಗೀತ ಕಲಾ ಸಾಧಕರು ಎಂಬ ಗ್ರಂಥವನ್ನು ಡಾ. ಅಂಬೇಡ್ಕರ್ ಕಾಲೇಜಿನ ಉಪನ್ಯಾಸಕರಾದ ಶರಣಗೌಡ ಪಾಟೀಲ ಜೈನಾಪುರ ಸಹೃದಯಿಗಳಿಗೆ ಪರಿಚಯಿಸಿ, ಇದು 718 ಪುಟಗಳ 581 ಕಲಾ ಸಾಧಕರ ಹೆಸರು ಮತ್ತು ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಬೃಹತ್ ಗ್ರಂಥವಾಗಿದೆ. ಇದನ್ನು ಸಂಪಾದಿಸಿದ ಎ. ಕಮಲಾಕರ್, ಗೌರವಸಂಪಾದಕ ಶರಣಪ್ಪ ಕಮ್ಮಾರ, ಪ್ರಧಾನ ಸಂಪಾದಕರಾದ ಡಾ. ಸುನಂದ ಸಾಲವಾಡಗಿ ನಿಜಕ್ಕೂ ಅಭಿನಂದನಾರ್ಹರು. ಈ ಕೃತಿಯನ್ನು ಪ್ರಕಟಿಸಲು ಬೇಕಾದ ಧನ ಸಹಾಯವನ್ನು ಮಾಡಿದ ಜಗದೀಶ್ ಮಾನು ಅವರ ಸೇವೆ ಅನನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಶಿವಶರಣಯ್ಯ ಸ್ವಾಮಿ ಬಳ್ಕೊಂಡಗಿಮಠ, ಶರಣಪ್ಪ ಕಮ್ಮಾರ, ಶ್ರೀಹರಿ ಆದೋನಿ, ಈಶ್ವರ ಬಡಿಗೇರ, ಮೋಹನರಾವ್ ಮಾಳದಕರ, ಜ್ಞಾನೇಶ್ವರ ಪಾಣಿಭಾತೆ, ಲಕ್ಷ್ಮಣ ಗುತ್ತೇದಾರ ಹಾಗೂ ಸಂಗೀತ ಕಲಾವಿದರನ್ನು ಸನ್ಮಾನಿಸಲಾಯಿತು.
ಪಾಂಡುರಂಗ ಸ್ವಾಮೀಜಿ, ಆಮಯ್ಯಸ್ವಾಮಿ ರಾಜನಕೋಳೂರು, ಶಾಂತಪ್ಪ ಬೂದಿಹಾಳ, ಹೊನ್ನಪ್ಪ ಹಳಿಜೋಳರು, ಶರಣಬಸಪ್ಪ ಯಾಳವಾರ, ನಬಿಲಾಲ್ ಮಕಾನ್ದಾರರು, ಜನಾರ್ಧನ ಪಾಣಿಭಾತೆ, ಚಂದ್ರಕಾಂತ ಪಾಡಮುಖಿ, ಉಮೇಶ ಯಾದವ್, ಸುರೇಶ ಅಂಬೂರೆ, ರಮೇಶ ಕುಲಕರ್ಣಿ, ಪ್ರಾಣೇಶರಾವ್ ಕುಲಕರ್ಣಿ, ಜಗದೀಶ ಪತ್ತಾರ, ಮಹಾಂತೇಶ ಶಹಾಪುರಕರ್, ದೀಪಿಕಾ ಸ್ಥಾವರಮಠ, ಭೂಮಿಕಾ ಸ್ಥಾವರಮಠ, ಶ್ರೀನಿವಾಸ ದಾಯಿಪುಲೆ, ರಾಘವೇಂದ್ರ ಹಳಿಜೋಳ, ಶಿವಶಂಕರ ಅಲ್ಲುರ ವೇದಿಕೆಯಲ್ಲಿದ್ದರು.ಇತ್ತೀಚೆಗೆ ಅಗಲಿದ ಸಂಗೀತ ಕಲಾವಿದ, ವಿಶ್ರಾಂತ ಕುಲಪತಿ ಹನುಮಪ್ಪ ನಾಯಕ ದೊರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿಕ್ಷಕ, ಸಾಹಿತಿ ಎಚ್.ವೈ. ರಾಠೋಡ್ ನಿರೂಪಿಸಿದರು.
ಕೊಟ್ರಯ್ಯ ಸ್ವಾಮಿ ಬಳ್ಕೊಂಡಗಿಮಠ, ನೂರುಂದಯ್ಯ ಸ್ವಾಮಿ ಸ್ಥಾವರಮಠ, ಸೋಮಶೇಖರ ಶಾಬಾದಿ, ಗೋವಿಂದಪ್ಪ ಬಲಮುರಿ, ರಮೇಶ ನಾಡಗೇರ, ರಘುರಾಮ ಕಡಬೂರು, ಸೋಪಣ್ಣ ಚಿಲ್ಲಾಳ, ಭೀಮು ಪತಂಗೆ, ವೀರೇಶ ರುಮಾಲ್, ಶರಣಪ್ಪ ಶಾಬಾದಿ, ಗೋಪಾಲ ಗುಳೇದ ಸೇರಿದಂತೆ ಇತರರಿದ್ದರು.- - - -
14ವೈಡಿಆರ್2:ಸುರಪುರ ನಗರದ ರಂಗಂಪೇಟೆಯ ಶ್ರೀ ಸದ್ಗುರು ಸಹಜಾನಂದ ಸರಸ್ವತಿ ಮಹಾಸ್ವಾಮಿಗಳ ಮಂದಿರದಲ್ಲಿ ಗಣ್ಯರು ಸುರಪುರದ ಸಂಗೀತ ಕಲಾ ಸಾಧಕರು ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಯಿತು.
- - - -14ವೈಡಿಆರ್3:
ಸುರಪುರ ನಗರದ ರಂಗಂಪೇಟೆಯ ಶ್ರೀ ಸದ್ಗುರು ಸಹಜಾನಂದ ಸರಸ್ವತಿ ಮಹಾಸ್ವಾಮಿಗಳ ಮಂದಿರದಲ್ಲಿ ನಡೆದ ಸುರಪುರದ ಸಂಗೀತ ಕಲಾ ಸಾಧಕರು ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.- - - -