ಪಾಶ್ಚಿಮಾತ್ಯರು ನಮ್ಮ ಗುರು-ಶಿಷ್ಯ ಪರಂಪರೆಯನ್ನು ಇಚ್ಛೆಯಿಂದ ಪಾಲಿಸುತ್ತಿದ್ದರು. ತನ್ನ ಶಿಷ್ಯರು ಉನ್ನತ ಹುದ್ದೆಯಲ್ಲಿದ್ದು ತಮ್ಮನ್ನು ನೆನೆದು ನೀಡುತ್ತಿರುವ ಗೌರವ ಮರೆಯಲಾರೆ. ವಿದ್ಯೆ ಸಾಧಕರ ಸ್ವತ್ತು ಎನ್ನುವುದಕ್ಕೆ ತನ್ನ ಶಿಷ್ಯರೇ ಸಾಕ್ಷಿ.

ಕಿಕ್ಕೇರಿ: ಗುರುಗಳ ಹಿಂದೆ ಗುರಿ ಇರಲಿದೆ ಎಂಬುದನ್ನು ಅರಿತು ಶಿಷ್ಯರು ವಿದ್ಯೆ ಕಲಿತರೆ ಉಜ್ವಲ ಭವಿಷ್ಯ ಖಚಿತ ಎಂದು ನಿವೃತ್ತ ಶಿಕ್ಷಕ ಸಿ.ಡಿ. ಜಯರಾಂ ಹೇಳಿದರು.

ಹೋಬಳಿಯ ಆನೆಗೊಳ ಆದಿಚುಂಚನಗಿರಿ ಪ್ರೌಢಶಾಲೆ 1998-2010ನೇ ಸಾಲಿನ ಹಳೆ ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುಶಿಷ್ಯ ಪರಂಪರೆ ಸನಾತನ ಸಂಸ್ಕೃತಿಯಲ್ಲಿ ಬಲುದೊಡ್ಡದಾಗಿದೆ ಎಂದರು.

ಪಾಶ್ಚಿಮಾತ್ಯರು ನಮ್ಮ ಗುರು-ಶಿಷ್ಯ ಪರಂಪರೆಯನ್ನು ಇಚ್ಛೆಯಿಂದ ಪಾಲಿಸುತ್ತಿದ್ದರು. ತನ್ನ ಶಿಷ್ಯರು ಉನ್ನತ ಹುದ್ದೆಯಲ್ಲಿದ್ದು ತಮ್ಮನ್ನು ನೆನೆದು ನೀಡುತ್ತಿರುವ ಗೌರವ ಮರೆಯಲಾರೆ. ವಿದ್ಯೆ ಸಾಧಕರ ಸ್ವತ್ತು ಎನ್ನುವುದಕ್ಕೆ ತನ್ನ ಶಿಷ್ಯರೇ ಸಾಕ್ಷಿ ಎಂದರು.

ಇಂದಿನ ಪೀಳಿಗೆ ಮೊಬೈಲ್, ಸಾಮಾಜಿಕ ಜಾಲತಾಣದಿಂದ ದಾರಿ ತಪ್ಪುವಂತಾಗಿದೆ. ಉತ್ತಮ ಪುಸ್ತಕ ಜ್ಞಾನದಕೋಶವಾಗಿದೆ ಎಂಬುದನ್ನು ಪೋಷಕರು ಮಕ್ಕಳಿಗೆ ತಿಳಿಯಬೇಕಿದೆ. ಕನ್ನಡ ಶಾಲೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಇದನ್ನು ಮರೆತು ಕಾನ್ವೆಂಟ್, ಖಾಸಗಿ ಶಾಲಾ ವ್ಯಾಮೋಹದಿಂದ ಮುಂದಾದರೆ ಹಳ್ಳಿ ಶಾಲೆ ಮುಚ್ಚಲಿದೆ. ಪರಿಣಾಮ ಬಡಮಕ್ಕಳ ಭವಿಷ್ಯ ಕಿತ್ತುಕೊಂಡಂತೆ ಆಗಲಿದೆ ಎಂದು ಎಚ್ಚರಿಸಿದರು.

ಹಳೆ ವಿದ್ಯಾರ್ಥಿಅರುಣ್‌ಕುಮಾರ್ ಮಾತನಾಡಿದರು. ಗುರುಗಳಾದ ಸಿ.ಡಿ.ಜಯರಾಂ, ಮಂಜುನಾಥ್, ಕೆ.ಎಲ್. ಶಿವಲಿಂಗೇಗೌಡ, ನವೀನ್, ಎ.ಸಿ.ಮಂಜುನಾಥ್, ಎಂ.ರವೀಂದ್ರಕುಮಾರ್, ಮಹಾಲಿಂಗೇಗೌಡ, ನಾಗರಾಜು, ಪ್ರೇಮಮ್ಮ, ಭಾರತಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅರುಣ್‌ಕುಮಾರ್, ಹರೀಶ್, ಶ್ರೀಧರ, ರವಿಚಂದ್ರ, ಸುರೇಶ್‌ ಇದ್ದರು.ಪ್ರಧಾನಿ ಮೋದಿ ವಿಶ್ವಕಂಡ ಮೇರು ನಾಯಕ: ಎಸ್.ಪಿ.ಸ್ವಾಮಿ

ಕನ್ನಡಪ್ರಭ ವಾರ್ತೆ ಮದ್ದೂರುಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಕಂಡ ಮೇರು ನಾಯಕ. ಇವರ ಆಡಳಿತ ಅವಧಿಯಲ್ಲಿ ದೇಶ ಸಮಗ್ರ ಪ್ರಗತಿಯತ್ತ ಸಾಗುತ್ತಿದೆ ಎಂದು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಬಣ್ಣಿಸಿದರು.

ಪ್ರಧಾನಿ ಮೋದಿಯವರ 76ನೇ ಜನ್ಮದಿನದ ಅಂಗವಾಗಿ ತಾಲೂಕಿನ ಸಾದೊಳಲು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಇತ್ತೀಚೆಗೆ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ತಾಲೂಕು ಬಿಜೆಪಿ ಘಟಕದಿಂದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮೋದಿ ಅವರು ನಮ್ಮ ದೇಶದ ಪ್ರಧಾನಿಯಾಗಿರುವುದು ಪ್ರತಿಯೊಬ್ಬರು ಹೆಮ್ಮೆಪಡುವ ವಿಷಯ. ಅವರ ಜನ್ಮ ದಿನದ ಅಂಗವಾಗಿ ವಿವಿಧ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್, ಪ್ರಧಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ವೇತಾ, ಮುಖಂಡರಾದ ಸೌಮ್ಯ, ಮಮತಾ ರಾಂಖ, ತ್ರಿವೇಣಿ, ಕಿರಣ್ಕುಮಾರ್, ಕಾಂತರಾಜು, ಗಿರೀಶ್, ಕೃಷ್ಣ, ಮಿಥುನ್, ಹೇಮಂತ್, ಕೋಮಲ ಸೇರಿದಂತೆ ಇತರು ಭಾಗವಹಿಸಿದ್ದರು.