ಸಾರಾಂಶ
ಅಯೋಧ್ಯೆ ಬಾಲರಾಮನನ್ನು ನೋಡಿ ಕಣ್ಣುಂಬಿಕೊಳ್ಳಲು ದೇಶಾದ್ಯಂತ ನಿತ್ಯ ಲಕ್ಷಾಂತರ ಮಂದಿ ಯಾತ್ರೆ ಮಾಡುತ್ತಾರೆ. ಆದರೆ, ಇಲ್ಲೊಬ್ಬರು ‘ಹನುಮಂತ’ ಎನ್ನುವ ಎತ್ತನ್ನು ಬಾಲರಾಮನ ದರ್ಶನಕ್ಕಾಗಿ ಕರೆದೊಯ್ಯುತ್ತಿದ್ದಾರೆ.
-ಪೆರುಮಗೊಂಡನಹಳ್ಳಿಯಿಂದ ಎತ್ತು ರಾಮನೂರಿಗೆ
- ₹30 ಲಕ್ಷ ವೆಚ್ಚ, 18 ದಿನ ಯಾತ್ರೆಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನನ್ನು ನೋಡಿ ಕಣ್ಣುಂಬಿಕೊಳ್ಳಲು ದೇಶಾದ್ಯಂತ ನಿತ್ಯ ಲಕ್ಷಾಂತರ ಮಂದಿ ಯಾತ್ರೆ ಮಾಡುತ್ತಾರೆ. ಆದರೆ, ಇಲ್ಲೊಬ್ಬರು ‘ಹನುಮಂತ’ ಎನ್ನುವ ಎತ್ತನ್ನು ಬಾಲರಾಮನ ದರ್ಶನಕ್ಕಾಗಿ ಕರೆದೊಯ್ಯುತ್ತಿದ್ದಾರೆ.
ತಾಲೂಕಿನ ಪೆರಮಗೊಂಡನಹಳ್ಳಿ ದಿನ್ನೆ ಅಂಜನೇಯ ದೇಗುಲ ಆರ್ಚಕ ವಾಸುದೇವಚಾರ್, ಬಸಪ್ಪನ ತೀರ್ಥಯಾತ್ರೆಗಾಗಿ ಸುಮಾರು 30 ಲಕ್ಷ ರು. ವೆಚ್ಚದಲ್ಲಿ ವಿಶೇಷ ಬಸ್ ವಿನ್ಯಾಸ ಮಾಡಿದ್ದಾರೆ. ಮೆತ್ತನೆ ಹಾಸಿಗೆ ವ್ಯವಸ್ಥೆಯೂ ಇದೆ. ಬಸ್ಸಿನ ಒಂದು ಭಾಗದಲ್ಲಿ ಮೇವು, ನೀರು ಇಡಲು ವ್ಯವಸ್ಥೆ ರೂಪಿಸಲಾಗಿದೆ.ಎತ್ತಿನೊಂದಿಗೆ ಆರು ಮಂದಿ 1,874ಕಿ.ಮೀ ಪ್ರಯಾಣವನ್ನು ಆರಂಭಿಸಿದ್ದಾರೆ. ಎತ್ತಿಗೆ ‘ಹನುಮಂತ ದೇವರು’ ಎಂದು ಹೆಸರಿಡಲಾಗಿದೆ. ದೇವರ ಪಟ್ಟ ನೀಡಿದ ಒಂದು ವರ್ಷಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿತ್ತು. ಇದರ ನೆನಪಿಗಾಗಿ ರಾಮನ ದರ್ಶನ ಮಾಡಿಸಲು ‘ಹನಮಂತ’ನನ್ನು ಕರೆದೊಯ್ಯಲಾಗುತ್ತಿದೆ.
ಈ ಯಾತ್ರೆ 18 ದಿನ ಸಾಗಲಿದೆ. ಮೊದಲಿಗೆ ಮಂತ್ರಾಲಯ ರಾಯರ ದರ್ಶನದಿಂದ ತೀರ್ಥಯಾತ್ರೆ ಪ್ರಾರಂಭವಾಗಲಿದೆ. ಆ ನಂತರ ಅಯೋಧ್ಯೆ ರಾಮನ ದರ್ಶನ, ಗಂಗಾನದಿಯಲ್ಲಿ ಬಸಪ್ಪನಿಗೆ ಸ್ನಾನ. ಮುಂದೆ ಕಾಶಿ, ಗಯಾ, ನೇಪಾಳದ ಸಾಲಿಗ್ರಾಮಕ್ಕೆ ಭೇಟಿ ನೀಡಲಾಗುವುದು ಎಂದು ವಾಸುದೇವಚಾರ್ ಪ್ರವಾಸದ ಮಾಹಿತಿ ನೀಡಿದರು.ತೀರ್ಥಯಾತ್ರೆಗಾಗಿ ಬಸಪ್ಪನಿಗೆ ಒಂದೂವರೆ ವರ್ಷದಿಂದ ತರಬೇತಿ ನೀಡಲಾಗಿದೆ. ಈ ಮೊದಲು ಶಾಲಾ ಬಸ್‌ನಲ್ಲಿ ಕೇರಳ, ತಮಿಳುನಾಡಿಗೆ ಪ್ರವಾಸ ಕರೆದೊಯ್ದು ಅಭ್ಯಾಸ ಮಾಡಲಾಗಿದೆ ಎಂದು ವಿವರಿಸಿದರು.