ಎ.ಸಿ.ಸಿ.ಇ.ಎ. ಪದಾಧಿಕಾರಿಗಳ ಪದಗ್ರಹಣ: ಸಾಧಕರಿಗೆ ಸನ್ಮಾನ

| Published : Apr 09 2024, 12:46 AM IST

ಎ.ಸಿ.ಸಿ.ಇ.ಎ. ಪದಾಧಿಕಾರಿಗಳ ಪದಗ್ರಹಣ: ಸಾಧಕರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ನಿಟ್ಟೆ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ ಮುಂಡ್ಕೂರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಘದ ನೂತನ ಅಧ್ಯಕ್ಷ ಯೋಗೀಶ್ ಚಂದ್ರಾಧರ ಅವರಿಗೆ ಪ್ರತಿಜ್ಞಾ ವಿಧಿ ನಡೆಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ ಆ್ಯಂಡ್ ಆರ್ಕಿಟೆಕ್ಟ್ (ಎ.ಸಿ.ಸಿ.ಇ.ಎ.) ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಶನಿವಾರ ಕರಾವಳಿ ಬೈಪಾಸ್ ಬಳಿಯ ಮಣಿಪಾಲ್ ಇನ್ ಹೊಟೇಲ್‌ನ ಜ್ಸಿಹಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ನಿಟ್ಟೆ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ ಮುಂಡ್ಕೂರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಘದ ನೂತನ ಅಧ್ಯಕ್ಷ ಯೋಗೀಶ್ ಚಂದ್ರಾಧರ ಅವರಿಗೆ ಪ್ರತಿಜ್ಞಾ ವಿಧಿ ನಡೆಸಿ ಶುಭ ಹಾರೈಸಿದರು.

ಇದೇ ಸಂದರ್ಭ ಮಣಿಪಾಲದ ಎಂ.ಐ.ಟಿ. ಸಹಪ್ರಾಧ್ಯಾಪಕಿ ಎಚ್.ಕೆ. ಸುಗಂಧಿನಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಯು.ಕೆ. ರಾಘವೇಂದ್ರ ರಾವ್, ರಮೇಶ್ ರಾವ್, ನಾರಾಯಣ ಮೂರ್ತಿ, ದಿವಾಕರ್ ರಾವ್ ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಾಂತಾ ಎಲೆಕ್ಟ್ರಿಕಲ್ಸ್ ಮಾಲಕ ಶ್ರೀಪತಿ ಭಟ್, ಶ್ರೀದೇವಿ ಗ್ಲಾಸ್ ಗೌಸ್ ಮಾಲಕ ಸುರೇಶ್ ನಾಯ್ಕ್ ಮತ್ತು ನಿರ್ಗಮನ ಅಧ್ಯಕ್ಷ ಪಾಂಡುರಂಗ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ನೂತನ ಕಾರ್ಯದರ್ಶಿ ಮಹೇಶ್ ಕಾಮತ್, ಖಚಾಂಜಿ ಅಮಿತ್ ಅರವಿಂದ್ ನಾಯಕ್, ಪದಾಧಿಕಾರಿಗಳಾದ ಡಾ. ಶ್ರೀನಾಥ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಪಾಂಡುರಂಗ ಆಚಾರ್ಯ ಸ್ವಾಗತಿಸಿದರು. ಭಗವಾನ್ ದಾಸ್ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಕಾಮತ್ ವಂದಿಸಿದರು. ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಮೂಲ್ಕಿ, ಬ್ರಹ್ಮಾವರ ವಲಯದ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ರಾಜೇಶ್ ಶೇಟ್, ದಯಾನಂದ್, ಶಂಕರ್ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.