ಸಾರಾಂಶ
- ಅಗರಬನ್ನಿಹಟ್ಟಿ ತಸ್ಮೀಯ ಖಾನಂ, ಶಿವಮೊಗ್ಗ ಮೂಲದ ಮುಜೀಬುಲ್ಲಾ ಶೇಖ್ ಬಂಧಿತರು
- ಮನೆಯಲ್ಲಿ ಕಳವು ನಡೆದಿದೆ ಎಂದು ಚನ್ನಗಿರಿ ಠಾಣೆಗೆ ತಾನೇ ದೂರು ನೀಡಿದ್ದ ತಸ್ಮೀಯ ಖಾನಂ- ಆರೋಪಿಗಳಿಂದ ₹10.77 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಪರಿಚಯಸ್ಥನೊಂದಿಗೆ ಸೇರಿ ತನ್ನದೇ ಮನೆಯಲ್ಲಿ ಕಳವು ಕೃತ್ಯ ನಡೆಸಿದ್ದ ಯುವತಿ ಹಾಗೂ ಸಹಚರನನ್ನು ಬಂಧಿಸಿರುವ ಪೊಲೀಸರು, ಸುಮಾರು ₹10.77 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕು ಅಗರಬನ್ನಿಹಟ್ಟಿ ಗ್ರಾಮದ ತಸ್ಮೀಯ ಖಾನಂ (26), ಶಿವಮೊಗ್ಗ ಇಲಿಯಾಜ್ ನಗರ ಮೂಲದ ಹಾಲಿ ಬೆಂಗಳೂರು ರಾಜಾಜಿನಗರ ನಿವಾಸಿ ಮುಜೀಬುಲ್ಲಾ ಶೇಖ್ (42) ಬಂಧಿತರು.ಚನ್ನಗಿರಿ ಪೊಲೀಸರಿಗೆ ದೂರು:
ಸೆ.30ರಂದು ಮಧ್ಯಾಹ್ನ ಅಗರಬನ್ನಿಹಟ್ಟಿ ಗ್ರಾಮದ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಯಾರೋ ಪ್ರಜ್ಞೆ ತಪ್ಪಿಸಿ, ಮನೆಯ ಬೀರುವಿನಲ್ಲಿದ್ದ ಸುಮಾರು 170 ಗ್ರಾಂ ಚಿನ್ನಾಭರಣ, ₹1.20 ಲಕ್ಷ ಕಳವು ಮಾಡಿದ್ದಾರೆ ಎಂದು ತಸ್ಮೀಯ ಖಾನಂ ಚನ್ನಗಿರಿ ಪೊಲೀಸ್ ಠಾಣೆಗೆ ಸ್ವತಃ ದೂರು ನೀಡಿದ್ದಳು. ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಿದಾಗ ಪೊಲೀಸರಿಗೆ ತಸ್ಮೀಯ ಖಾನಂ ಕುತಂತ್ರ ಅರಿವಾಗಿದೆ.ತಸ್ಮೀಯ ಖಾನಂ ಹಣ, ಆಭರಣ ಲಪಟಾಯಿಸಲು ತಮ್ಮ ಕುಟುಂಬಕ್ಕೆ ನಿಕಟವರ್ತಿಯಾಗಿದ್ದ ಮುಜೀಬುಲ್ಲಾ ಶೇಖ್ ಜೊತೆ ಸೇರಿ ಕುತಂತ್ರ ನಡೆಸಿದ್ದಳು. ಮನೆಯಲ್ಲಿ ಚಿನ್ನಾಭರಣ-ನಗದು ಕಳ್ಳರು ಕಳವು ಮಾಡಿದ್ದಾರೆಂಬ ಸುಳ್ಳುಕಥೆ ಯಾರಿಗೂ ಗೊತ್ತಾಗಬಾರದು ಎಂದು ನಾಟಕವಾಡಿರುವುದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ.
ಆರೋಪಿ ತಸ್ಮೀಯ ಖಾನಂ ಈ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಆಕೆ ನೀಡಿದ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಕಳವು ಮಾಡಿದ್ದ ₹9.5 ಲಕ್ಷ ಬೆಲೆ ಬಾಳುವ 155 ಗ್ರಾಂ ಚಿನ್ನಾಭರಣ ಹಾಗೂ ₹1,27,000 ಹಣವನ್ನು ಮತ್ತೊಬ್ಬ ಆರೋಪಿ ಮುಜೀಬುಲ್ಲಾ ಶೇಖ್‌ನ ಶಿವಮೊಗ್ಗ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಸಧ್ಯಕ್ಕೆ ಈ ಇಬ್ಬರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.ಪ್ರಕರಣದ ಪತ್ತೆಗಾಗಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಎಎಸ್‌ಪಿಗಳಾದ ವಿಜಯಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ್, ಚನ್ನಗಿರಿ ಡಿವೈಎಸ್‌ಪಿ ಸ್ಯಾಮ್ ವರ್ಗಿಸ್ ಮಾರ್ಗದರ್ಶನದಲ್ಲಿ ಪಿಐ ಬಾಲಚಂದ್ರ ನಾಯ್ಕ ನೇತೃತ್ವದಲ್ಲಿ ಪಿಎಸ್‌ಐಗಳಾದ ಸುರೇಶ್, ಜಗದೀಶ್, ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು.
- - - (- ಸಾಂದರ್ಭಿಕ ಫೋಟೋ:)