ಮೂಲ್ಕಿ: ಚಿರತೆ ಹಿಡಿಯಲು ಬೋನು ಅಳವಡಿಕೆ

| Published : Dec 29 2024, 01:18 AM IST

ಸಾರಾಂಶ

ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಚಿರತೆ ರಸ್ತೆಯಲ್ಲಿ ಹಾದು ಹೋಗುತ್ತಿರುವುದನ್ನು ಸ್ಥಳೀಯ ಶಿಕ್ಷಕಿ ಅರ್ಪಣಾ ವೇದವ್ಯಾಸ ಭಟ್ ನೋಡಿದ್ದು ಬಳಿಕ ಈ ಬಗ್ಗೆ ಮನೆಯ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಚಿರತೆ ಹಾದು ಹೋಗುವ ದೃಶ್ಯ ಕಂಡು ಬಂದಿತ್ತು.

ಮೂಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಚಿರತೆ ಮತ್ತೆ ಕಂಡುಬಂದ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಬೋನು ಅಳವಡಿಸಲಾಯಿತು.

ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಚಿರತೆ ರಸ್ತೆಯಲ್ಲಿ ಹಾದು ಹೋಗುತ್ತಿರುವುದನ್ನು ಸ್ಥಳೀಯ ಶಿಕ್ಷಕಿ ಅರ್ಪಣಾ ವೇದವ್ಯಾಸ ಭಟ್ ನೋಡಿದ್ದು ಬಳಿಕ ಈ ಬಗ್ಗೆ ಮನೆಯ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಚಿರತೆ ಹಾದು ಹೋಗುವ ದೃಶ್ಯ ಕಂಡು ಬಂದಿತ್ತು.

ಈ ಬಗ್ಗೆ ಕೂಡಲೇ ವೇದವ್ಯಾಸ ಭಟ್ ಹಾಗೂ ಕಿನ್ನಿಗೋಳಿ ಪಂಚಾಯಿತಿ ಮಾಜಿ ಸದಸ್ಯ ರಾಘವೇಂದ್ರ ಮತ್ತಿತರರು ಮೂಡುಬಿದಿರೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಚಿರತೆ ಸೆರೆಗೆ ಬೋನು ಅಳವಡಿಸಲು ಒತ್ತಾಯಿಸಿದ್ದರು.

ವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ನಿರ್ದೇಶನದಂತೆ ಶನಿವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಮಾನಿಷ್ ಅವರು ಸ್ಥಳೀಯರ ಸಹಕಾರದೊಂದಿಗೆ ಚಿರತೆ ಸೆರೆಗೆ ಬೋನು ಅಳವಡಿಸಿದರು.