ವೇಮನ ಸಂದೇಶ ಪಾಲಿಸಲು ಕರೆ

| Published : Jan 20 2025, 01:32 AM IST

ಸಾರಾಂಶ

ತಾಲೂಕು ಆಡಳಿತ ಹಾಗೂ ತಾಲೂಕು ರೆಡ್ಡಿ ಸಮುದಾಯದ ವತಿಯಿಂದ ಭಾನುವಾರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಯೋಗಿ ವೇಮನ ಜಯಂತ್ಯುತ್ಸವವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕು ಆಡಳಿತ ಹಾಗೂ ತಾಲೂಕು ರೆಡ್ಡಿ ಸಮುದಾಯದ ವತಿಯಿಂದ ಭಾನುವಾರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಯೋಗಿ ವೇಮನ ಜಯಂತ್ಯುತ್ಸವವನ್ನು ಆಚರಿಸಲಾಯಿತು.

ಯೋಗಿ ವೇಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ತಹಸೀಲ್ದಾರ್‌ ಡಿ.ಎನ್‌.ವರದರಾಜು ಮಾತನಾಡಿ,ತಾಲೂಕು ಆಡಳಿತದಿಂದ ಯೋಗಿ ವೇಮನ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಗಣ್ಯರು ಹಾಗೂ ಜನಸಾಮಾನ್ಯರು ಭಾಗವಹಿಸಿದ್ದು ಅತ್ಯಂತ ಸಂತಸ ತಂದಿದೆ. ಯೋಗಿ ವೇಮನ ತಮ್ಮ ಸಂದೇಶದ ಮೂಲಕ ಇಡೀ ಮಾನವ ಕುಲದ ಸಮಾಜವನ್ನು ಜಾಗೃತಿಗೊಳಿಸಿದ್ದಾರೆ. ಅವರ ತತ್ವ ಸಂದೇಶಗಳು ಎಲ್ಲ ಕಾಲಕ್ಕೂ ಅದರ್ಶವಾಗಿದೆ. ಅವರು ಸಮಾಜಕ್ಕೆ ನೀಡಿದ ಸಂದೇಶ ಮತ್ತು ತತ್ವ ಭೋಧನೆ ಮಾದರಿಯಾಗಿದೆ ಎಂದರು.

ಹಿರಿಯ ವಕೀಲ ಎಸ್‌.ಆರ್.ವೆಂಕಟರಾಮರೆಡ್ಡಿ ಮಾತನಾಡಿ, ಯೋಗಿ ವೇಮನ ಮಾನವ ಕುಲದ ಒಳಿತಿಗೆ ವಚನದ ಮೂಲಕ ಅನೇಕ ರೀತಿಯ ಸಂದೇಶ ನೀಡಿದ್ದಾರೆ. ಅವರ ಸರಳ ಹಾಗೂ ಶುದ್ಧತೆ ಮತ್ತು ಆಧ್ಯಾತ್ಮಿಕತೆ ರೂಢಿಸಿಕೊಂಡು ಸಮಾಜದ ಒಳತಿಗೆ ಶ್ರಮಿಸಬೇಕೆಂದರು.

ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷ ಬೆಳ್ಳಿ ಬಟ್ಟಲು ಚಂದ್ರಶೇಖರರೆಡ್ಡಿ ಮಾತನಾಡಿ, ಯೋಗಿ ವೇಮನ ಅವರ ಸಂದೇಶ ನಮಗೆಲ್ಲ ಪ್ರೇರಣೆ. ಅವರ ಆದರ್ಶ ಬದುಕು ಹಾಗೂ ಅವರು ಅನೇಕ ವಚನಗಳ ಮೂಲಕ ಇಡೀ ಮಾನವ ಕುಲಕ್ಕೆ ನೀಡಿದ ಸಮಾಜ ಒಳತಿನ ಸಂದೇಶಗಳು ಮಾದರಿಯಾಗಿದೆ. ರೆಡ್ಡಿ ಸಮಾಜ ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕು. ಕಾಯಕದ ಮೂಲಕ ಅರ್ಥಿಕ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು. ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪಟ್ಟಣದಲ್ಲಿ ರೆಡ್ಡಿ ಸಮುದಾಯದಿಂದ ಸುಸಜ್ಜಿತ ಹಾಸ್ಟಲ್‌ ಕಟ್ಟಡ ನಿರ್ಮಾಣವಾಗಬೇಕು. ಎಲ್ಲರ ಸಹಕಾರ ಮುಖ್ಯವಾಗಿದ್ದು ತಾಲೂಕಿನ ರೆಡ್ಡಿ ಸಮಾಜದ ಪ್ರಗತಿಗೆ ನನ್ನ ಕೈಲಾದ ಸಹಾಯಕ್ಕೆ ಸದಾ ಬದ್ಧರಿದ್ದೇವೆ ಎಂದು ಇದೇ ವೇಳೆ ರೆಡ್ಡಿ ಸಮಾಜದ ವಿದ್ಯಾರ್ಥಿ ನಿಲಯಕ್ಕೆ 1ಲಕ್ಷ ಚೆಕ್‌ ಸಹಾಯಸ್ತವಾಗಿ ನೀಡಿದರು.

ತಾಲೂಕು ರೆಡ್ಡಿ ಸಮುದಾಯದ ಹಿರಿಯ ಮುಖಂಡರಾದ ಎ.ಶಂಕರರೆಡ್ಡಿ, ಪುರುಷೋತ್ತಮರೆಡ್ಡಿ, ಸಂಗೀತ ನಾಗರ್ಜುನರೆಡ್ಡಿ, ರಾಮಾಂಜಿನರೆಡ್ಡಿ, ಬ್ಯಾಡನೂರು ವೇಣುಗೋಪಾಲರೆಡ್ಡಿ, ತಿಮ್ಮಾರೆಡ್ಡಿ, ದೈವಧೀನಂ, ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಲಿಂಗದಹಳ್ಳಿಯ ಸಣ್ಣರಾಮರೆಡ್ಡಿ, ಬಿ.ಕೆ.ಹಳ್ಳಿ ಮಲ್ಲೇಶ್‌ರೆಡ್ಡಿ, ಶಿಕ್ಷಕ ಸಿಂಗರೆಡ್ಡಿಹಳ್ಳಿಯ ಈರಣ್ಣ, ಜಯಶಂಕರೆಡ್ಡಿ, ನಾಗಭೂಷಣರೆಡ್ಡಿ, ಪವನ್‌ಕುಮಾರ್‌ ರೆಡ್ಡಿ ಸುಬ್ಬಾರೆಡ್ಡಿ, ಪ್ರಕಾಶ್‌ರೆಡ್ಡಿ ಇತರರಿದ್ದರು.