ಶವಗಳ ಹೊತಿಟ್ಟ ಪ್ರಕರಣ; ಎಸ್‌ಐಟಿ ಮೇಲೆ ವಿಶ್ವಾಸ ಇದೆ: ನಾಗಲಕ್ಷ್ಮಿ ಚೌಧರಿ

| Published : Jul 25 2025, 12:30 AM IST

ಶವಗಳ ಹೊತಿಟ್ಟ ಪ್ರಕರಣ; ಎಸ್‌ಐಟಿ ಮೇಲೆ ವಿಶ್ವಾಸ ಇದೆ: ನಾಗಲಕ್ಷ್ಮಿ ಚೌಧರಿ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಐಟಿ ತನಿಖಾ ತಂಡದಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ನಮಗೆ ನಂಬಿಕೆ, ಭರವಸೆ ಮತ್ತು ವಿಶ್ವಾಸ ಇರಬೇಕು. ಸತ್ಯದ ಮೇಲೆ ಖಂಡಿತವಾಗಿಯೂ ಬೆಳಕು ಚೆಲ್ಲುತ್ತದೆ ಎನ್ನುವ ನಂಬಿಕೆ ನನಗಿದೆ. ರಾಜ್ಯ ಪೊಲೀಸರ ಮೇಲೆ ಜನರು ಸಹ ನಂಬಿಕೆ ಇಟ್ಟಿದ್ದಾರೆ. ಖಂಡಿತವಾಗಿಯೂ ಧರ್ಮಸ್ಥಳ ಸುತ್ತಮುತ್ತಲಿನ ಶವಗಳನ್ನು ಹೊತಿರುವ ಪ್ರಕರಣದ ಸತ್ಯಾಂಶ ಹೊರ ಬರಲಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಧರ್ಮಸ್ಥಳ ಸುತ್ತಮುತ್ತಲಿನ ಶವಗಳನ್ನು ಹೊತಿರುವ ಪ್ರಕರಣದ ಸತ್ಯಾಂಶ ಹೊರತರುವ ನಿಟ್ಟಿನಲ್ಲಿ ಎಸ್ಐಟಿ ತನಿಖಾ ತಂಡ ಯಶಸ್ವಿಯಾಗಿ ಕೆಲಸ ನಿರ್ವಹಿಸಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ವಿಶ್ವಾಸ ವ್ಯಕ್ತಪಡಿಸಿದರು.ಚಾಮರಾಜನಗರ ಜಿಲ್ಲೆಗೆ ತೆರಳುವ ಮಾರ್ಗಮಧ್ಯೆ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸಾರ್ವಜನಿಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಜ್ಯ ಪೊಲೀಸರ ಕಾರ್ಯವೈಖರಿ ಇಡೀ ದೇಶಕ್ಕೆ ಮಾದರಿಯಾಗಿದೆ. ಗೌರಿಲಂಕೇಶ್ ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.

ಎಸ್ಐಟಿ ತನಿಖಾ ತಂಡದಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ನಮಗೆ ನಂಬಿಕೆ, ಭರವಸೆ ಮತ್ತು ವಿಶ್ವಾಸ ಇರಬೇಕು. ಸತ್ಯದ ಮೇಲೆ ಖಂಡಿತವಾಗಿಯೂ ಬೆಳಕು ಚೆಲ್ಲುತ್ತದೆ ಎನ್ನುವ ನಂಬಿಕೆ ನನಗಿದೆ. ರಾಜ್ಯ ಪೊಲೀಸರ ಮೇಲೆ ಜನರು ಸಹ ನಂಬಿಕೆ ಇಟ್ಟಿದ್ದಾರೆ. ಖಂಡಿತವಾಗಿಯೂ ಧರ್ಮಸ್ಥಳ ಸುತ್ತಮುತ್ತಲಿನ ಶವಗಳನ್ನು ಹೊತಿರುವ ಪ್ರಕರಣದ ಸತ್ಯಾಂಶ ಹೊರ ಬರಲಿದೆ ಎಂದರು.

ಎಸ್ಐಟಿ ತನಿಖಾ ತಂಡಕ್ಕೆ ಬಿಜೆಪಿ ವಿರೋಧ ಬಗ್ಗೆ ಪ್ರತಿಕ್ರಿಯಿಸಿ ನಾನು ಪ್ರತಿಕ್ರಿಯಿಸುವುದಿಲ್ಲ. ಇಂತಹ ಗಂಭೀರ ಪ್ರಕರಣವನ್ನು ಎಸ್ಐಟಿಗೆ ವಹಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೆ ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಪುರಸಭೆ ಮಾಜಿ ಅಧ್ಯಕ್ಷ ಗಂಗರಾಜೇ ಅರಸು, ಮಾಜಿ ಸದಸ್ಯ ಕಿರಣ್ ಶಂಕರ್, ಮುಖಂಡರಾದ ಚೌಡಪ್ಪ, ರಾಧಾ, ಪೇಟೆಬೀದಿ ರವಿ, ಭರತ್, ದಸ್ತಗಿರ್, ಮಹಮ್ಮದ್ ಯಾಸೀನ್, ಅಕ್ರಂ ಪಾಲ್ಗೊಂಡಿದ್ದರು.