ಸಾರಾಂಶ
ತಿಕೋಟಾ ಪಟ್ಟಣದ ಮಲ್ಲಿಕಾರ್ಜುನ ಮಂಗಲ ಕಾರ್ಯಾಲಯದಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಎ.ಬಿ. ಜತ್ತಿ ಪದವಿಪೂರ್ವ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ತಿಕೋಟಾ ಪಟ್ಟಣದ ಮಲ್ಲಿಕಾರ್ಜುನ ಮಂಗಲ ಕಾರ್ಯಾಲಯದಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಎ.ಬಿ. ಜತ್ತಿ ಪದವಿಪೂರ್ವ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಿತು.ಸಾನ್ನಿಧ್ಯ ಕೌಲಗುಡ್ಡ ಸಿದ್ದಸಿರಿ ಸಂಸ್ಥಾನ ಮಠದ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ಹಿರೇಮಠದ ಶಿವಬಸವ ಶಿವಾಚಾರ್ಯರು ವಹಿಸಿದ್ದರು. ಅಧ್ಯಕ್ಷತೆ ಬಿ.ಎಲ್.ಡಿ.ಇ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ. ಪಾಟೀಲ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಎಲ್. ಪೊದ್ದಾರ, ಎ.ಬಿ. ಕಟ್ಟಿಮನಿ, ಪಿ.ವಿ. ಉಕ್ಕಲಿ, ಎ.ಎ. ಖಾಜಿ, ಬಿ.ಎ. ಮರತಂಗಿ, ಬಿ.ಎಂ. ಬನ್ನೂರ, ಆರ್.ಎಸ್. ಪಡ್ನಾರ, ಶ್ರೀಮತಿ ಯಲ್ಲಮ್ಮ, ಕೆ.ಜಿ. ಕುಲಕರ್ಣಿ, ಪಿ.ಬಿ. ವಾಲಿಕಾರ, ಬಿ.ಆರ್. ನಾಡಗೌಡ, ಐ.ಎಫ್. ಅರಳಿಮಟ್ಟಿ, ಸುನಂದಾ ಶಹಾಪೂರ, ಎಂ.ಪಿ. ಪೂಜಾರಿ, ವಾಯ್.ಬಿ. ವಾಲಿಕಾರ, ಶರಣಬಸಪ್ಪ ಹಿಟ್ಟಿನಹಳ್ಳಿ, ಶಿಕ್ಷಕರಾದ ಬೋರಮ್ಮ ವಿಭೂತಿ, ಆರ್.ಎಫ್. ಅರಳಿಮಟ್ಟಿ, ಎಸ್.ಬಿ. ಕೊಣ್ಣೂರ, ಆರ್.ಎಂ. ಬಿರಾದಾರ, ಡಿ.ಬಿ. ಪಾಟೀಲ, ಜೆ.ಎಂ. ಪಾಟೀಲ, ಪಿ.ಎಸ್. ನಾಯಕ, ಎ.ಬಿ. ಬಿರಾದಾರ, ಮಲ್ಲಿಕಾರ್ಜುನ ಬುಲಗೌಡ, ಬಿ.ಬಿ. ಛಪ್ಪರ ನಿವೃತ್ತ ಲೆಕ್ಕಿಗ, ಸಿ.ಎಂ. ಸಾಲಿಮಠ, ಗುರು ಹಂಜಗಿ, ವಿಜಯಕುಮಾರ ಜೋಶಿ, ವಿರುಪಾಕ್ಷಪ್ಪ ಬಂದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶ್ರೀಶೈಲ ಭೂಸಗೊಂಡ, ಮಹಾಂತೇಶ ಪಾಟೀಲ, ಜಯಶ್ರೀ ಬಾಗಲಕೋಟ, ವಿ.ಎಸ್. ಬಂದಿ, ಶಿವಲೀಲಾ ಪಾಟೀಲ ಮುಂತಾದವರು ಇದ್ದರು.