ಸಾರಾಂಶ
ಹಿಂದೂ ಜಾಗರಣ ವೇದಿಕೆಯಿಂದ ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಹಿಂದೂ ಮಹಾಗಣಪತಿಯ ಅದ್ಧೂರಿ ರಾಜಬೀದಿ ಉತ್ಸವ ಭಾನುವಾರ ಅದ್ಧೂರಿಯಾಗಿ ನೆರವೇರಿತು.
ಕನ್ನಡಪ್ರಭ ವಾರ್ತೆ ಹರಿಹರ
ಹಿಂದೂ ಜಾಗರಣ ವೇದಿಕೆಯಿಂದ ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಹಿಂದೂ ಮಹಾಗಣಪತಿಯ ಅದ್ಧೂರಿ ರಾಜಬೀದಿ ಉತ್ಸವ ಭಾನುವಾರ ಅದ್ಧೂರಿಯಾಗಿ ನೆರವೇರಿತು. ಪಿ.ಬಿ. ರಸ್ತೆ, ಗಾಂಧಿ ವೃತ್ತ, ಮುಖ್ಯ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ಹಾಗೂ ದೇವಸ್ಥಾನ ರಸ್ತೆಯ ಮೂಲಕ ಮೆರವಣಿಗೆಯ ಸಾಗಿತು. ಬಳಿಕ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಬೃಹತ್ ಶೋಭಯಾತ್ರೆಯಲ್ಲಿ ಕಲಾತಂಡಗಳು ಹಾಗೂ 3 ಡಿಜೆ ಸೌಂಡ್ ಸಿಸ್ಟಮ್‍ಗಳ ವ್ಯವಸ್ಥೆ ವಿಶೇಷವಾಗಿತ್ತು. ಮಹಿಳೆಯರಿಗಾಗಿಯೇ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಡಿಜೆ ಹಾಡುಗಳಿಗೆ ಮೈಛಳಿ ಬಿಟ್ಟು ಹೆಜ್ಜೆ ಹಾಕಿದರು. ಕೇಸರಿ ಬಾವುಟಗಳು, ಬಂಟಿಂಗ್ಸ್ ರಾರಾಜಿಸುತ್ತಿದ್ದವು.
ಶಾಸಕರಾದ ಬಿ.ಪಿ.ಹರೀಶ್, ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ ಸಿಂಹ, ಜಿ.ಎಂ. ಸಿದ್ದೇಶ್ವರ, ಗಾಯಿತ್ರಿ ಸಿದ್ದೇಶ್, ಎಂ.ಪಿ.ರೇಣುಕಾಚಾರ್ಯ, ಎಚ್.ಎಸ್. ಶಿವಶಂಕರ್, ಬಿಜೆಪಿ ಮುಖಂಡ ಎಸ್.ಎಂ. ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್ ಇತರರು ಆಗಮಿಸಿ ಉತ್ಸಾಹ ತುಂಬಿದರು.ಪೊಲೀಸ್ ಬಂದೊಬಸ್ತ್:
ಮೆರವಣಿಗೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್‍ಪಿ-1, ಸಿಪಿಐ-5, ಪಿಎಸ್‌ಐ-18, ಎಎಸ್‍ಐ-40, ಪಿಸಿ-150, ಮಹಿಳಾ ಪಿಸಿ-20, ಗೃಹರಕ್ಷಕ ದಳದ ಸಿಬ್ಬಂದಿ-50, ಕೆಎಸ್‍ಆರ್‌ಪಿಪಿ-1 ತುಕಡಿ, ಡಿಎಆರ್-1 ತುಕಡಿ ಹಾಗೂ 35ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ, ದ್ರೋಣ್-1 ಮತ್ತು 10ಕ್ಕೂ ಹೆಚ್ಚು ವೀಡಿಯೋ ಚಿತ್ರಿಕರಣ ಮಾಡುವ ವ್ಯವಸ್ಥೆ ಮಾಡಲಾಗಿತ್ತು.- - -
-29ಎಚ್‍ಆರ್‍ಆರ್:29ಎಚ್‍ಆರ್‍ಆರ್2ಎ: -29ಎಚ್‍ಆರ್‍ಆರ್2ಬಿ: -28ಎಚ್‍ಆರ್‍ಆರ್2ಸಿ: