ಸಂಭ್ರಮದ ವಿಶ್ವಕರ್ಮ ಜಯಂತ್ಯುತ್ಸವ ಮೆರವಣಿಗೆ

| Published : Sep 18 2024, 01:59 AM IST

ಸಂಭ್ರಮದ ವಿಶ್ವಕರ್ಮ ಜಯಂತ್ಯುತ್ಸವ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಚೀನ ಕಾಲದಿಂದ ಈವರೆಗೂ ವಿಶ್ವಕರ್ಮ ಸಮಾಜದವರು ಸಮಾಜಮುಖಿಯಾಗಿ ತಮ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ

ರೋಣ: ವಿಶ್ವಕರ್ಮ ಸಮಾಜ ರೋಣ ತಾಲೂಕು, ಶ್ರೀಕಾಳಿಕಾದೇವಿ ದೇವಸ್ಥಾನ ಸುಧಾರಣಾ ಸಮಿತಿ, ವಿಶ್ವಕರ್ಮ ಮಹಿಳಾ ಮಂಡಳ ಸಂಯುಕ್ತಾಶ್ರಯದಲ್ಲಿ ಪಟ್ಟಣದಲ್ಲಿ ಮಂಗಳವಾರ ವಿಶ್ವಕರ್ಮ ಜಯಂತ್ಯುತ್ಸವವನ್ನು ಡೊಳ್ಳು, ಕುಂಭಮೇಳ, ಆರತಿ ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಸಡಗರ, ಸಂಭ್ರಮದಿಂದ ಅದ್ಧೂರಿಯಾಗಿ ಜರುಗಿತು.

ವಿಶ್ವಕರ್ಮ ಮೂರ್ತಿ ಮೆರವಣಿಗೆಗೆ ಮೌನೇಶ್ವರ ದೇವಸ್ಥಾನದಲ್ಲಿ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿ ಮಾತನಾಡಿ, ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದ್ದು, ಆದ್ದರಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ವಿಶ್ವಕರ್ಮ ಸಮಾಜ ಪ್ರಗತಿ ಹೊಂದಬೇಕು. ಆ ದಿಶೆಯಲ್ಲಿ ಸರ್ಕಾರ ಸೌಲಭ್ಯ ಸಿಗುವಂತಾಗಬೇಕು. ಪ್ರಾಚೀನ ಕಾಲದಿಂದ ಈವರೆಗೂ ವಿಶ್ವಕರ್ಮ ಸಮಾಜದವರು ಸಮಾಜಮುಖಿಯಾಗಿ ತಮ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ತಮ್ಮಲ್ಲಿನ ಕಲಾನೈಪುಣ್ಯತೆಯಿಂದ ಸುಂದರವಾದ ಮೂರ್ತಿ ಕೆತ್ತನೆ, ಚಿನ್ನದ ಆಭರಣ ತಯಾರಿಕೆ, ದೇವಾಲಯಗಳ ವಿನ್ಯಾಸ, ಆಕರ್ಷಕ ಕುಸುರಿ ಕೆತ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಹೊಂದಿಲ್ಲ. ಆದ್ದರಿಂದ ವಿಶ್ವಕರ್ಮ ಸಮಾಜದವರು ಸಂಘಟಿಕರಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ವಿಶ್ವಕರ್ಮ ಮೂರ್ತಿ ಮೆರವಣಿಗೆಯೂ ಮೌನೇಶ್ವರ ದೇವಸ್ಥಾನದಿಂದ ಪೋತದಾರ ರಾಜನ ಕಟ್ಟೆ, ಮುಲ್ಲನಬಾವಿ, ಸೂಡಿ ವೃತ್ತ, ಮುಗಳಿ ರಸ್ತೆ ಸೇರಿದಂತೆ ವಿವಿಧೆಡೆ ಸಂಚರಿಸಿ ಬಳಿಕ ಜಗನ್ಮಾತೆ ಕಾಳಿಕಾದೇವಿ ದೇವಸ್ಥಾನ ತಲುಪಿತು. ಅಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಅಂಗವಾಗಿ ಕಾರ್ಯಕ್ರಮ ಜರುಗಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು, ಗಣ್ಯರನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯವನ್ನು ಶಾಡಲಗೇರಿ ಮದ್ದಾನೆಗುಂದಿ ಸಂಸ್ಥಾನ ಸರಸ್ವತಿಪೀಠ ವಿಶ್ವಕರ್ಮ ಏಕದಂಡಗಿಮಠದ ತೀರ್ಥೇಂಧರ ಸ್ವಾಮೀಜಿ, ಹೊಳೆಆಲೂರ ಯಚ್ಚರೇಶ್ವರ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಕಾಲೇಶ ಪೋತದಾರ, ಕಾಳಿಕಾದೇವಿ ದೇವಸ್ಥಾನ ಸುಧಾರಣೆ ಸಮಿತಿ ಅಧ್ಯಕ್ಷ ಯೋಗೇಶ ಕಮ್ಮಾರ ವಹಿಸಿದ್ದರು.

ಈ ವೇಳೆ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಮಿಥುನ.ಜಿ. ಪಾಟೀಲ, ತಹಸೀಲ್ದಾರ್‌ ನಾಗರಾಜ.ಕೆ, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಅಬಕಾರಿ ನಿರೀಕ್ಷಕ ಗಂಗಾಧರ ಬಡಿಗೇರ, ವೀರುಪಾಕ್ಷಪ್ಪ ಪೋಯದಾರ, ಮೌನೇಶ ಅಕ್ಕಲಸಾಲಿಗರ, ಯಚ್ಚರಪ್ಪ ಬಡಿಗೇರ, ಪ್ರಭುಗೌಡ ಪಾಟೀಲ, ಭಾಸ್ಕರ ಪತ್ತಾರ, ವಾಸು ಕಮ್ಮಾರ, ವಿಷ್ಣು ಕಮ್ಮಾರ, ಯೋಗೇಶ ಕಮ್ಮಾರ, ಈಶ್ವರ ಪತ್ತಾರ, ರೇಣುಕಾ ಪತ್ತಾರ, ಗೀತಾ ಕಮ್ಮಾರ, ರುಕ್ಮಿಣಿಬಾಯಿ ಪತ್ತಾರ, ರಾಘವೇಂದ್ರ ಪತ್ತಾರ, ಸಣ್ಣಮಾನಪ್ಪ ಬಡಿಗೇರ, ಶೇಖರಪ್ಪ ಕಮ್ಮಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪೂರ್ಣಿಮಾ ಪತ್ತಾರ ನಿರೂಪಿಸಿದರು.