ಸಾರಾಂಶ
ಪಟ್ಟಣದ ಶ್ರೀವಿಶ್ವೇಶ್ವರ ಬಾಲಭಾರತಿ ಪೂರ್ವ ಪ್ರಾಥಮಿಕ ಹಾಗೂ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಜರುಗಿತು.
ಕನ್ನಡಪ್ರಭ ವಾರ್ತೆ ಆಲಮೇಲ
ಪಟ್ಟಣದ ಶ್ರೀವಿಶ್ವೇಶ್ವರ ಬಾಲಭಾರತಿ ಪೂರ್ವ ಪ್ರಾಥಮಿಕ ಹಾಗೂ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಜರುಗಿತು.ಶಾಲೆಯ ರಂಗೋಲಿ ಹಾಕಿ, ತಳಿರು ತೋರಣ, ಬಣ್ಣ ಬಣ್ಣದ ಬಲೂನ್ ಹಾಗೂ ಬ್ಯಾನರ್‌ಗಳಿಂದ ಕಂಗೊಳಿಸುತ್ತಿತ್ತು. ಆಗಮಿಸಿದ ಮಕ್ಕಳನ್ನು ವಿನೂತನವಾಗಿ ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ ಅವರು ತಿಲಕ ಇಟ್ಟು, ಪುಷ್ಪ ನೀಡಿ ಸ್ವಾಗತಿಸಿದರು.
ಮಕ್ಕಳಿಗೆ ಶುಭ ಹಾರೈಸಿ ಸಿಹಿ ತಿಂಡಿ ಊಟ ಮಾಡಿಸುವುದರ ಮುಖಾಂತರ ಶಾಲಾ ಪ್ರಾರಂಭಿಸಲಾಯಿತು. ಈ ವೇಳೆ ಮುಖ್ಯ ಗುರುಗಳು ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಈರಣ್ಣ ಕಲಶೇಟ್ಟಿ, ಚಂದ್ರಕಾಂತ ದೇವರಮನಿ, ಸುವರ್ಣ ಸಾರಂಗಮಠ, ಲಕ್ಮೀಬಾಯಿ ಹಳೇಮನಿ, ಸೀತಾ ಆರೇಶಂಕರ, ಸುನೀತಾ ಗುಂಡದ, ಸರುಬಾಯಿ ಬಂಡಗರ, ಜಗದೇವಿ ಇಟಗಿ ಮುಂತಾದವರಿದ್ದರು.