ಬೆಂಕಿಗೆ ಅರ್ಧ ಕೋಟಿಗೂ ರುಪಾಯಿಗೂ ಅಧಿಕ ಮೌಲ್ಯದ ತೆಂಗು ನಾರಿನ ಉತ್ಪನ್ನ ಭಸ್ಮ

| Published : Mar 29 2024, 12:48 AM IST

ಬೆಂಕಿಗೆ ಅರ್ಧ ಕೋಟಿಗೂ ರುಪಾಯಿಗೂ ಅಧಿಕ ಮೌಲ್ಯದ ತೆಂಗು ನಾರಿನ ಉತ್ಪನ್ನ ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಗಿನ ನಾರಿನ ಫ್ಯಾಕ್ಟರಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿರುವ ಘಟನೆ ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ತಿಮ್ಮಾಲಪುರ ಗೇಟ್ ಬಳಿ ರಾತ್ರಿ ನಡೆದಿದೆ.

ತಿಪಟೂರು: ತೆಂಗಿನ ನಾರಿನ ಫ್ಯಾಕ್ಟರಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿರುವ ಘಟನೆ ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ತಿಮ್ಮಾಲಪುರ ಗೇಟ್ ಬಳಿ ರಾತ್ರಿ ನಡೆದಿದೆ.ಬುಧವಾರ ರಾತ್ರಿ ಫ್ಯಾಕ್ಟರಿಗೆ ಬೆಂಕಿ ತಗುಲಿದ್ದು, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಪಾರ ಪ್ರಮಾಣದ ನಾರು ಮತ್ತು ತೆಂಗಿನ ಉತ್ಪನ್ನಗಳು ಇರುವುದರಿಂದ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಈಗಲೂ ಸಹ ನಾರು ಹೊತ್ತಿ ಉರಿಯುತ್ತಲೇ ಇದ್ದು ಅಗ್ನಿಶಾಮಕ ದಳದವರು ಸ್ಥಳದಲ್ಲೇ ಇದ್ದಾರೆ. ಈ ನಾರಿನ ಫ್ಯಾಕ್ಟರಿ ಜಯಣ್ಣ ಎಂಬುವವರಿಗೆ ಸೇರಿದ್ದಾಗಿದ್ದು, ಇದು ಯಾರೋ ಕಿಡಿಗೇಡಿಗಳ ಕೆಲಸ ಎಂದು ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಕೆ.ಬಿ. ಕ್ರಾಸ್ ಇನ್ಸ್‌ಫೆಕ್ಟರ್ ಮಹೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು.