ಗಂಧದ ಗುಡಿ ಬಳಗದಿಂದ ಗುಂಡಿಹೊಂಬಳ ಶಾಲೆಗೆ ಬಣ್ಣದ ಚಿತ್ತಾರ

| Published : May 28 2024, 01:07 AM IST

ಸಾರಾಂಶ

ಬಾಳೆಹೊನ್ನೂರುಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಆರಂಭಿಸಿರುವ ಖಾಂಡ್ಯ ಹೋಬಳಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನಕ್ಕೆ ಸ್ಪಂದಿಸಿರುವ ಬೆಂಗಳೂರಿನ ಗಂಧದ ಗುಡಿ ಬಳಗ ಬಿದರೆ ಗುಂಡಿಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಬಣ್ಣ ಹಾಗೂ ಚಿತ್ತಾರ ಬಳಿಯುವ ಮೂಲಕ ಸ್ಪಂದಿಸಿದೆ.

ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ವಿ.ಸಿ.ರಘುಪತಿ ಬಿದರೆ ಮಾಹಿತಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಆರಂಭಿಸಿರುವ ಖಾಂಡ್ಯ ಹೋಬಳಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನಕ್ಕೆ ಸ್ಪಂದಿಸಿರುವ ಬೆಂಗಳೂರಿನ ಗಂಧದ ಗುಡಿ ಬಳಗ ಬಿದರೆ ಗುಂಡಿಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಬಣ್ಣ ಹಾಗೂ ಚಿತ್ತಾರ ಬಳಿಯುವ ಮೂಲಕ ಸ್ಪಂದಿಸಿದೆ.ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ವಿ.ಸಿ.ರಘುಪತಿ ಬಿದರೆ ಈ ಕುರಿತು ಮಾಹಿತಿ ನೀಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನಕ್ಕೆ ಸ್ಪಂದಿಸಿದ ಗಂಧದ ಗುಡಿ ಬಳಗ ಎರಡು ತಿಂಗಳಿಂದ ಟ್ವಿಟರ್, ಪೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್‌ನಲ್ಲಿ ಅಭಿಯಾನ ಪ್ರಾರಂಭಿಸಿ ದಾನಿಗಳಿಂದ ಸಹಾಯಧನ ಸಂಗ್ರಹಿಸಿ ಬಿದರೆ ಗುಂಡಿಹೊಂಬಳ ಶಾಲೆ ಕೊಠಡಿಗೆ ಬಣ್ಣ ಕೊಂಡುಕೊಂಡಿದೆ. ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಪೊಲೀಸ್, ಅರಣ್ಯ ಇಲಾಖೆ ನೌಕರರು ಹಾಗೂ ಗಿನ್ನಿಸ್ ದಾಖಲೆ ಮಾಡಿದ ಚಿತ್ರ ಕಲಾವಿದರನ್ನು ಸೇರ್ಪಡೆಗೊಳಿಸಿ ಕೊಠಡಿಗೆ ಸುಸಜ್ಜಿತ ಬಣ್ಣ ಹೊಡೆದು ಶಾಲೆ ಚಿತ್ರಣ ಬದಲಾವಣೆ ಮಾಡಿ ದ್ದಾರೆ. ಶಾಲೆ ಮುಂಭಾಗದಲ್ಲಿ ವಿವಿಧ ಚಿತ್ರಗಳನ್ನು ರಚಿಸುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಬರಲು ಆಕರ್ಷಿಸಲು ಪ್ರೇರೇಪಣೆ ನೀಡಲಾಗಿದೆ.ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದು, ಆ ಮಕ್ಕಳು ಸಹ ಉನ್ನತ ಗುಣಮಟ್ಟದ ಕೊಠಡಿಯಲ್ಲಿ ಕುಳಿತುಕೊಳ್ಳುವಂತಾಗಬೇಕು ಎಂಬ ಆಶಯದೊಂದಿಗೆ ಗಂಧದ ಗುಡಿ ಬಳಗ ಶಾಲೆಗೆ ರು.60 ಸಾವಿರ ಮೌಲ್ಯದ ಬಣ್ಣ ವಿನಿಯೋಗಿಸಿದೆ. ಗಂಧದ ಗುಡಿ ಬಳಗ ಹಾಗೂ ಶೌರ್ಯ ವಿಪತ್ತು ಘಟಕದ ಸದಸ್ಯರು ಒಂದು ದಿನಗಳ ಕಾಲ ಉಚಿತವಾಗಿ ಕಾರ್ಯನಿರ್ವಹಿಸುವ ಮೂಲಕ ಶಾಲೆಯನ್ನು ಅಂದವಾಗಿಸಲು ಸಹಕರಿಸಿದ್ದಾರೆ ಎಂದು ತಿಳಿಸಿದರು.ಗಂಧದಗುಡಿ ಬಳಗ ಸಾಮಾಜಿಕ ಸೇವಾ ತಂಡದ ಅಧ್ಯಕ್ಷ ಪ್ರಖ್ಯಾತ್ ಪುತ್ತೂರು, ಕಾರ್ಯದರ್ಶಿ ಅಫ್ಜಲ್ ಷರೀಪ್, ಗಿನ್ನಿಸ್ ದಾಖಲೆ ಚಿತ್ರ ಕಲಾವಿದ ಯಲ್ಲಪ್ಪ, ಸದಸ್ಯರಾದ ರವಿಕುಮಾರ್, ಜಗದೀಶ್, ಮಹೇಶ್, ಜಯೇಂದ್ರ, ನಿತಿನ್, ಚೇತನ್, ಪುನೀತ್, ಗಂಧದಗುಡಿ ಬಳಗದ ಜಿಲ್ಲಾಧ್ಯಕ್ಷ ಮಂಜುನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಕೃಷಿ ಮೇಲ್ವಿಚಾರಕ ರವಿಚಂದ್ರ, ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಚಂದ್ರಶೇಖರ್ ರೈ, ಸ್ವಯಂ ಸೇವಕ ಸುರೇಶ್ ಕೋಟ್ಯಾನ್, ರಘುಪತಿ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ಶಿಕ್ಷಕ ಬಿ.ಡಿ.ಚಂದ್ರೇಗೌಡ, ಅಂಗನವಾಡಿ ಸಹಾಯಕಿ ಮಮತಾ, ಅರಣ್ಯ ಇಲಾಖೆ ನೌಕರ ಚನ್ನಪ್ಪಗೌಡ, ರಘು, ಹೂವಪ್ಪಗೌಡ, ಮಂಜುಳ ಯೋಗಿಣಿ ಮತ್ತಿತರರು ಇದ್ದರು.೨೭ಬಿಹೆಚ್‌ಆರ್ ೭:

ಖಾಂಡ್ಯ ಶೌರ್ಯ ವಿಪತ್ತು ಘಟಕದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನದಡಿ ಬಾಳೆಹೊನ್ನೂರು ಸಮೀಪದ ಬಿದರೆ ಗುಂಡಿಹೊಂಬಳ ಶಾಲೆಗೆ ಬೆಂಗಳೂರಿನ ಗಂಧದ ಗುಡಿ ಬಳಗ ಸಾಮಾಜಿಕ ಸೇವಾ ತಂಡದಿಂದ ಬಣ್ಣ ಬಳಿದು ವಿವಿಧ ಚಿತ್ತಾರಗಳನ್ನು ಬಿಡಿಸಿರುವುದು.