ಪಾಂಡವಪುರ ಸಂಭ್ರಮಕ್ಕೆ ವರ್ಣರಂಜಿತ ತೆರೆ

| Published : Dec 25 2023, 01:30 AM IST

ಸಾರಾಂಶ

ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ಮೂರು ದಿನಗಳ ಕಾಲ ನಡೆದ ಪಾಂಡವಪುರ ಸಂಭ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಪ್ರೇಕ್ಷಕರ ಮನಸೂರೆಗೊಂಡ ಸಾಂಸ್ಕೃತಿಕ ಕಲಾ ಪ್ರದರ್ಶನ

ಕನ್ನಡಪ್ರಭ ವಾರ್ತೆ ಪಾಂಡವಪುರಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಪಾಂಡವಪುರ ಸಂಭ್ರಮ ಕಾರ್ಯಕ್ರಮಕ್ಕೆ ಭಾನುವಾರ ವರ್ಣ ರಂಜಿತ ತೆರೆಬಿದ್ದಿತು.

ಪಾಂಡವಪುರ ಸಂಭ್ರಮ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಅವರ ಪತ್ನಿ ನಾಗಮ್ಮ ಪುಟ್ಟರಾಜು ಬಹುಮಾನ ವಿತರಿಸಿದರು ಸಾಂಸ್ಕೃತಿಕ ಕಲಾ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ಪ್ರಿಯಾಂಕ ಅಡುಗೆ ಮಹಾರಾಣಿ:

ಅಡುಗೆ ಮಹಾರಾಣಿ ಸ್ಪರ್ಧೆಯಲ್ಲಿ ಪ್ರಿಯಾಂಕಾ ಅವರು ಪ್ರಥಮ ಬಹುಮಾನದೊಂದಿಗೆ ಅಡುಗೆ ಮಹಾರಾಣಿ ಪಟ್ಟ ಅಲಂಕರಿಸಿದರು. ಅರ್ಪಿತ ದ್ವಿತೀಯ ಹಾಗೂ ಕವಿತಾ ತೃತೀಯ ಬಹುಮಾನ ಪಡೆದುಕೊಂಡರು.

ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಲೋಹಿಯಾ ಎಸ್. ಗೌಡ- ಪ್ರಥಮ, ರಿಷಿಕಾ- ದ್ವಿತೀಯ, ಪರಿಣಿತಾ- ತೃತೀಯ.

ಚಿತ್ರಕಲಾ ಸ್ಪರ್ಧೆಯಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವಿಭಾಗದಲ್ಲಿ ಭವಿಷಿಣಿ ಆರ್. ಗೌಡ- ಪ್ರಥಮ, ಸಿ.ತೇಜಸ್- ದ್ವಿತೀಯ, ಲಕ್ಷ್ಯ ಡಿ.ಶೆಟ್ಟಿ- ತೃತಿಯ.

5ನೇ ತರಗತಿಯಿಂದ 7ನೇ ತರಗತಿವರೆಗಿನ ವಿಭಾಗದಲ್ಲಿ ಸಿಎ.ಹೇಮಂತ್ ಗೌಡ- ಪ್ರಥಮ, ಎಂ ರಿದನ್ಯಾ- ದ್ವಿತೀಯ, ಪಿ.ಲಾಲಿತ್ಯ-ತೃತೀಯ.

6ನೇ ತರಗತಿಯಿಂದ 10ನೇ ತರಗತಿ ವಿಭಾಗದಲ್ಲಿ ಮಿಥಾಯಿಷ್ ಸ್ಕಂದ - ದ್ವಿತೀಯ, ಎಂ. ಅನನ್ಯ- ತೃತಿಯ ಬಹುಮಾನ ಪಡೆದುಕೊಂಡರು.

ರಂಗೋಲಿ ಸ್ಪರ್ಧೆಯಲ್ಲಿ ಎಸ್.ರೂಪಶ್ರೀ ಪ್ರಥಮ, ಎಚ್.ಪಿ.ಶಿಲ್ಪ ದ್ವಿತೀಯ, ಅರ್ಪಿತ ತೃತೀಯ ಬಹುಮಾನ ಪಡೆದುಕೊಂಡರು. ಪಾಂಡವಪುರ ಸಂಭ್ರಮ ಕಾರ್ಯಕ್ರಮದಲ್ಲಿ ನಾಟಕ ರಂಗ,, ಕನ್ನಡ ಚಿತ್ರರಂಗ ಹಾಗೂ ಹಿಂದಿ ಚಿತ್ರರಂಗ ಮಿಶ್ರಣ ಮಾಡಿ ಕಣಿವೆ ಯೋಗೇಶ ಅವರು ನಡೆಸಿಕೊಟ್ಟ ಮಿಮಿಕ್ರಿ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸಾಧಕರಿಗೆ ಪುರಸ್ಕಾರ:

ರಂಗಭೂಮಿ ಕ್ಷೇತ್ರದಿಂದ ಹಳೇಬೀಡು ಕುಳ್ಳೇಗೌಡ, ಮೇನಾಗರ ಕೆಂಪೇಗೌಡ, ಕಣಿವೆ ಕೊಪ್ಪಲಿನ ಕಣಿವೆ ಯೋಗೇಶ್, ಜಾನಪದ ಕ್ಷೇತ್ರದಿಂದ ಹೆಗಡಹಳ್ಳಿ ಕೃಷ್ಣೆಗೌಡ, ಲಕ್ಷ್ಮೀಸಾಗರ ರಾಜೇಶ್, ದೊಡ್ಡ ಬೋಗನಹಳ್ಳಿ ನಾಗಮ್ಮ ,ಶ್ಯಾದನಹಳ್ಳಿ ಚೆಲುವರಾಜು, ನೃತ್ಯ ಕ್ಷೇತ್ರದಿಂದ ಮುರಳಿ, ಪಾಂಡವಪುರ ಸಂತೋಷ್, ಸಾಹಿತ್ಯ ಕ್ಷೇತ್ರದಿಂದ ಕ್ಯಾತನಹಳ್ಳಿ ರಾಮಣ್ಣ, ಚಿಕ್ಕಮರಳಿ ಡಾ. ಬೋರೇಗೌಡ, ಶಿಕ್ಷಣ ಕ್ಷೇತ್ರದಿಂದ ಶಿವನಂಜೇಗೌಡ, ಸಿ ಪಿ ಶಿವರಾಜು ಹಾಗೂ ಯುವ ಪ್ರತಿಭೆಗಳಾದ ರೋಹಿತ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತುಪಾಂಡವಪುರ ಸಂಭ್ರಮ ಪ್ರತಿವರ್ಷ ಆಯೋಜನೆ: ಸಿ.ಎಸ್.ಪುಟ್ಟರಾಜು;

ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ, ಸಾಧಕರನ್ನು ಪುರಸ್ಕರಿಸುವ, ಪಾಂಡವಪುರ ಸಂಭ್ರಮ ಕಾರ್ಯಕ್ರಮವನ್ನು ಇನ್ನು ಮುಂದೆ ಪ್ರತಿ ವರ್ಷವೂ ಆಯೋಜಿಸುವುದಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಹೇಳಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಡೆದ ಪಾಂಡವಪುರ ಸಂಭ್ರಮ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು, ಸಹಕಾರಿಗಳು, ಕಲಾವಿದರು, ಶಿಕ್ಷಕರು ಸೇರಿದಂತೆ ಹಲವಾರು ಸಾಧಕರು ನಮ್ಮ ಜೊತೆಗೆ ಇರುತ್ತಾರೆ. ಅವರನ್ನು ಗುರುತಿಸಿ ಗೌರವಿಸುವುದಕ್ಕೆ ಸೂಕ್ತ ವೇದಿಕೆ ಅವಶ್ಯವಾಗಿರುತ್ತದೆ. ಅಂತಹದೊಂದು ವೇದಿಕೆಯನ್ನು ಪಾಂಡವಪುರ ಸಂಭ್ರಮ ದೊರಕಿಸಿಕೊಡಲಿದೆ ಎಂದರು.

ಈ ವರ್ಷ ನಡೆದಿರುವ ಮೂರು ದಿನಗಳ ಕಾರ್ಯಕ್ರಮವನ್ನು ಮುಂದೆ ನಾಲ್ಕೈದು ದಿನಗಳವರೆಗೆ ವಿಸ್ತರಿಸಿ ಚಿನ್ನದ ಪದಕ ಸೇರಿದಂತೆ ಹಲವು ಉತ್ತಮ ಬಹುಮಾನಗಳನ್ನು ನೀಡುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದರು.