ಅಮೀನಗಡದಲ್ಲಿ ಸಂಭ್ರಮದ ಬಣ್ಣದೋಕುಳಿ

| Published : Apr 02 2025, 01:03 AM IST

ಸಾರಾಂಶ

ಹೋಳಿ ಹಣ್ಣಿಮೆಯಂದು ಕೇವಲ ಕಾಮದಹನ ಮಾಡಿ, ಯುಗಾದಿಯ ಪಾಢ್ಯದ ಮರುದಿನ ಎರಡು ದಿನ ಆಚರಿಸುವ ಬಣ್ಣದೋಕುಳಿ ಮಂಗಳವಾರ ಮುಕ್ತಾಯಗೊಂಡಿತು.

ಕನ್ನಡಪ್ರಭ ವಾರ್ತೆ ಅಮೀನಗಡ

ಹೋಳಿ ಹಣ್ಣಿಮೆಯಂದು ಕೇವಲ ಕಾಮದಹನ ಮಾಡಿ, ಯುಗಾದಿಯ ಪಾಢ್ಯದ ಮರುದಿನ ಎರಡು ದಿನ ಆಚರಿಸುವ ಬಣ್ಣದೋಕುಳಿ ಮಂಗಳವಾರ ಮುಕ್ತಾಯಗೊಂಡಿತು.

ಸೋಮವಾರ ಚಿಕ್ಕಮಕ್ಕಳು, ಮಂಗಳವಾರ ದೊಡ್ಡವರು ರಂಗದೋಕುಳಿಯಾಡಿ ಸಂಭ್ರಮಿಸಿದರು. ಓಕುಳಿಯಲ್ಲಿ ಹಿರಿಕಿರಿಯರೆನ್ನದೆ ಎಲ್ಲರೂ ಪಾಲ್ಗೂಂಡಿದ್ದರು. ಪಟ್ಟಣದ ಪ್ರತಿ ಓಣಿಯಲ್ಲೂ ಯುವಕರು ಬಣ್ಣದಾಟವಾಡಿದರು. ಪಟ್ಟಣದ ಲಂಬಾಣಿ ತಾಂಡಾದ ಯುವಕರು, ಯುವತಿಯರು, ಮುಖ್ಯರಸ್ತೆಯಲ್ಲಿ ವಿಶಿಷ್ಟವಾಗಿ ಅಲಂಕರಿಸಿ ಬಣ್ಣದೋಕುಳಿಯಾಡುವ ಮೂಲಕ ರಂಜಿಸಿದರು. ಮಂಗಳಮ್ಮನ ಗುಡಿ, ಕುಂಬಾರ ಓಣಿಗಳಲ್ಲೂ ರಂಗದೋಕುಳಿ ಜರುಗಿತು.

ಸೂಳೇಬಾವಿ, ಕುಣಬೆಂಚಿ, ಗಂಗೂರ, ಹಿರೇಮಾಗಿ, ಹುಲಗಿನಾಳ, ಐಹೊಳೆ, ಕೆಲೂರ, ಗುಡೂರ(ಎಸ್.ಸಿ) ಮುಂತಾದ ಗ್ರಾಮಗಳಲ್ಲೂ ಬಣ್ಣದೋಕುಳಿ ಜರುಗಿತು.