ಉತ್ತಮ ಪರಿಸರದಿಂದ ನೆಮ್ಮದಿ ಜೀವನ ಸಾಧ್ಯ: ರಾಜಣ್ಣ

| Published : Aug 13 2024, 12:46 AM IST

ಸಾರಾಂಶ

ನಮ್ಮ ಸುತ್ತಮುತ್ತಲ ಪರಿಸರದಲ್ಲಿ ನೈರ್ಮಲ್ಯ ಕಾಪಾಡಬೇಕು. ಉತ್ತಮ ಪರಿಸರದಿಂದ ನೆಮ್ಮದಿ ಜೀವನ ಸಾಧ್ಯ ಎಂದು ಮೆಣಸೆ ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ನಮ್ಮ ಸುತ್ತಮುತ್ತಲ ಪರಿಸರದಲ್ಲಿ ನೈರ್ಮಲ್ಯ ಕಾಪಾಡಬೇಕು. ಉತ್ತಮ ಪರಿಸರದಿಂದ ನೆಮ್ಮದಿ ಜೀವನ ಸಾಧ್ಯ ಎಂದು ಮೆಣಸೆ ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ ಹೇಳಿದರು.

ತಾಲೂಕಿನ ಮೆಣಸೆ ಪಂಚಾಯಿತಿ ಶೂನ್ಯ ಶ್ರೀ ವಿಶ್ವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜೆಸಿಐ ಆಶ್ರಯದಲ್ಲಿ ಆಯೋಜಿಸಿದ್ದ ಶ್ರಮದಾನ ಹಾಗೂ ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನು ನೆಮ್ಮದಿಯಿಂದ ಜೀವನ ನಡೆಸಲು ಆರೋಗ್ಯ ಉತ್ತಮವಾಗಿರಬೇಕು. ಆರೋಗ್ಯ ಉತ್ತಮ ವಾಗಿರಲು ಪೂರಕವಾದ ಉತ್ತಮ ವಾತಾವರಣವಿರಬೇಕು.

ನಾವು ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಲ್ಲಿ ಕಸ, ತ್ಯಾಜ್ಯಗಳು ಸಂಗ್ರವಾಗದಂತೆ ನೋಡಿಕೊಳ್ಳಬೇಕು. ಕಸ, ತ್ಯಾಜ್ಯಗಳ ಸಂಗ್ರಹದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಖಾಯಿಲೆಗಳು, ರೋಗ ರುಜಿನಗಳಿಗೆ ಕಾರಣವಾಗುತ್ತದೆ.

ದೇವಸ್ಥಾನ,ಧಾರ್ಮಿಕ ಕೇಂದ್ರಗಳು ನೆಮ್ಮದಿ ತಾಣಗಳಾಗಿವೆ. ದೇವಾಲಯ, ಧಾರ್ಮಿಕ ಕೇಂದ್ರಗಳ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸಬೇಕು ಎಂದರು. ಇದೇ ಸಂದರ್ಭದಲ್ಲಿ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಾಪ್, ಅನ್ನಪೂರ್ಣ, ಜೆಸಿಐ ಕಾರ್ಯದರ್ಶಿ ಹಾಗೂ ಕಾರ್ಮಿಕ ಬಳಗದ ಅಧ್ಯಕ್ಷ ಶೂನ್ಯ ರಮೇಶ್ ಹೇಮ, ನಟೇಶ್ ವಿಪತ್ತು ನಿರ್ವಹಣಾ ಘಟಕದ ಗೋಪಾಲ್ ಮತ್ತಿತರರು ಇದ್ದರು.