ಕನ್ನಡಪ್ರಭ ವಾರ್ತೆ ಖಾನಾಪುರ ರೈತರು ಆಧುನಿಕತೆಯ ಬೆನ್ನು ಹತ್ತಿ ಸಾಂಪ್ರದಾಯಿಕ ಕೃಷಿಯನ್ನು ಮರೆಯುತ್ತಿದ್ದಾರೆ. ಭೂಮಿಗೆ ವಿಷವುಣಿಸಿ ಅದರಿಂದ ಬೆಳೆದು ಬರುವ ವಿಷಮಿಶ್ರಿತ ಫಸಲನ್ನು ಜಗತ್ತಿಗೆ ನೀಡುತ್ತಿದ್ದಾರೆ. ನಿಜವಾದ ರೈತರು ನಮ್ಮ ಪುರಾತನಕಾಲದಿಂದಲೂ ಬಂದಿರುವ ಪಾರಂಪರಿಕ ಕೃಷಿಯನ್ನು ಶಿಸ್ತುಬದ್ಧವಾಗಿ ಕೈಗೊಂಡು ನೆಮ್ಮದಿಯ ಬದುಕು ರೂಪಿಸಿಕೊಳ್ಳಬೇಕು ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬೆಳಕೂಡ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಖಾನಾಪುರರೈತರು ಆಧುನಿಕತೆಯ ಬೆನ್ನು ಹತ್ತಿ ಸಾಂಪ್ರದಾಯಿಕ ಕೃಷಿಯನ್ನು ಮರೆಯುತ್ತಿದ್ದಾರೆ. ಭೂಮಿಗೆ ವಿಷವುಣಿಸಿ ಅದರಿಂದ ಬೆಳೆದು ಬರುವ ವಿಷಮಿಶ್ರಿತ ಫಸಲನ್ನು ಜಗತ್ತಿಗೆ ನೀಡುತ್ತಿದ್ದಾರೆ. ನಿಜವಾದ ರೈತರು ನಮ್ಮ ಪುರಾತನಕಾಲದಿಂದಲೂ ಬಂದಿರುವ ಪಾರಂಪರಿಕ ಕೃಷಿಯನ್ನು ಶಿಸ್ತುಬದ್ಧವಾಗಿ ಕೈಗೊಂಡು ನೆಮ್ಮದಿಯ ಬದುಕು ರೂಪಿಸಿಕೊಳ್ಳಬೇಕು ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬೆಳಕೂಡ ಕರೆ ನೀಡಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಕೃಷಿಕ ಸಮಾಜ ಖಾನಾಪುರ ತಾಲೂಕು ಘಟಕ, ಕೃಷಿ ಇಲಾಖೆ, ಕೃಷಿ ಹಾಗೂ ಕೃಷಿಗೆ ಸಹೋದರ ಇಲಾಖೆಗಳು ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ರೈತ ದಿನಾಚರಣೆ ಮತ್ತು ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಉತ್ತಮ ಇಳುವರಿಯನ್ನು ಪಡೆಯಲು ಮಣ್ಣಿನ ಪರೀಕ್ಷೆ, ನೀರು ಪರೀಕ್ಷೆ ಮತ್ತು ಭೂಮಿಯ ಫಲವತ್ತತೆಯ ಪರೀಕ್ಷೆಗಳನ್ನು ಮೇಲಿಂದ ಮೇಲೆ ಮಾಡಿಸಬೇಕು. ಕನಿಷ್ಠ ಒಂದೆರಡು ಆಕಳುಗಳನ್ನು ಸಾಕಿ ಪಾರಂಪರಿಕ ಪದ್ಧತಿಯಡಿ ಕೃಷಿ ಕೈಗೊಳ್ಳಬೇಕು. ಬೆಳಗಾವಿ ಜಿಲ್ಲೆಯ ವಾಣಿಜ್ಯ ಬೆಳೆಯಾದ ಕಬ್ಬು ಉತ್ತಮವಾಗಿ ಬೆಳೆಯಲು 16 ಪ್ರಕಾರದ ಗೊಬ್ಬರಗಳು ಅವಶ್ಯವಾಗಿವೆ. ಇವುಗಳ ಪೈಕಿ ಗಾಳಿ, ಬೆಳಕು, ನೀರು ಮತ್ತು ಸತ್ವಯುತ ಭೂಮಿಯಲ್ಲಿ ಅರ್ಧದಷ್ಟು ಗೊಬ್ಬರ ಮತ್ತು ಪೋಷಕಾಂಶ ಅಡಗಿದೆ. ಉಳಿದಂತೆ ಜಮೀನಿಗೆ ಅವಶ್ಯವಿರುವ ಲಘು ಪೋಷಕಾಂಶಗಳು, ಸಾವಯವ ಗೊಬ್ಬರ, ಗಂಜಲು, ಎರೆಗೊಬ್ಬರ ನೀಡಬೇಕು ಎಂದು ಅವರು ವಿವರಣೆ ನೀಡಿದರು.ಕೃಷಿಯಲ್ಲಿ ಸಾಧನೆಗೈದ ತಾಲೂಕಿನ ಶಿವಾಜಿ ಮಾದಾರ, ಕೇದಾರಿ ಬಡಿಗೇರ, ಶ್ರೀನಾಥ್ ನಾಯ್ಕ, ಮಕ್ತುಮಸಾಬ್ ಪಾಟೀಲ ಅವರನ್ನು ಕೃಷಿಕ ಸಮಾಜದ ವತಿಯಿಂದ ಆದರ್ಶ ರೈತ ಪ್ರಶಸ್ತಿಯನ್ನು ನೀಡಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ತೋಟಗಾರಿಕೆ ವಿಜ್ಞಾನಿ ಕೆ.ಟಿ.ಪಾಟೀಲ, ಕೃಷಿ ವಿವಿ ಪ್ರಾಧ್ಯಾಪಕಿ ನಮಿತಾ ರಾವೂತ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಂಕರಗೌಡ ಪಾಟೀಲ, ತಾಲೂಕು ಘಟಕದ ಅಧ್ಯಕ್ಷ ಕೋಮಲ ಜಿನಗೊಂಡ, ಜಿಲ್ಲಾ ಪ್ರತಿನಿಧಿ ಕೃಷ್ಣಾಜಿ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಸತೀಶ ಮಾವಿನಕೊಪ್ಪ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಿರಣ ಉಪಾಳೆ, ಕೃಷಿಕ ಸಮಾಜದ ಜ್ಯೋತಿಬಾ ರೇಮಾಣಿ, ವಿಜಯ ಕಾಮತ, ರಮೇಶ ಪಾಟೀಲ, ಕೃಷಿ ಅಧಿಕಾರಿ ಡಿ.ಎಚ್ ರಾಠೋಡ, ದೀಪಾ ಒಡೆಯರ, ಮಂಜುನಾಥ ಕುಸುಗಲ್, ಚಿಕ್ಕಮಠ, ಪ್ರಕಾಶ ಕೋಟಿ ಸೇರಿದಂತೆ ರೈತರು, ಕೃಷಿಕ ಸಮಾಜದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು