ಶಿಥಿಲಾವಸ್ಥೆಯಲ್ಲಿದ್ದ ವಾಣಿಜ್ಯ ಮಳಿಗೆಗಳ ನೆಲಸಮ

| Published : Dec 26 2024, 01:03 AM IST

ಸಾರಾಂಶ

. ಇದೀಗ ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ ಅವರು ಕೊಟ್ಟ ಮಾತಿನಂತೆ ಮಳಿಗೆಗಳ ನೆಲಸಮ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಶಿಥಿಲಾವಸ್ಥೆ ತಲುಪಿದ್ದ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ ನೇತೃತ್ವದಲ್ಲಿ ನೆಲಸಮ ಮಾಡಲಾಯಿತು.

ಶಿಥಿಲಾವಸ್ಥೆ ತಲುಪಿದ್ದ ವಾಣಿಜ್ಯ ಮಳಿಗೆಗಳನ್ನು ಕೆಡವಲು ಸಾರ್ವಜನಿಕರು ಒತ್ತಾಯಿಸಿದ್ದರು. ಅಲ್ಲದೆ ದಸಂಸ ಪುರಸಭೆ ಮುಂದೆ ಪ್ರತಿಭಟನೆ ನಡೆಸಿ ಹಳೆಯ ವಾಣಿಜ್ಯ ಮಳಿಗೆಗಳನ್ನು ಕೆಡವಬೇಕು. ಹೊಸ ಮಳಿಗೆಗಳನ್ನು ನಿರ್ಮಿಸಿ ಬೀದಿ ಬದಿಯ ವ್ಯಾಪಾರಿಗಳಿಗೆ ಮಳಿಗೆಗಳನ್ನು ನೀಡಬೇಕು ಎಂದು ಒತ್ತಾಯಿಸಿತ್ತು.

ಆ ವೇಳೆ ಪುರಸಭೆ ಮುಖ್ಯಾಧಿಕಾರಿಗಳು ಮಳಿಗೆಗಳನ್ನು ಕೆಡವಲು ಒಂದು ವಾರ ಗಡುವು ತೆಗೆದುಕೊಂಡಿದ್ದರು. ಇದೀಗ ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ ಅವರು ಕೊಟ್ಟ ಮಾತಿನಂತೆ ಮಳಿಗೆಗಳ ನೆಲಸಮ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ಉಪಸ್ಥಿತಿಯಲ್ಲಿ ಮಳಿಗೆಗಲನ್ನು ಕೆಡವಲಾಯಿತು.

ಅರೋಗ್ಯ ಅಧಿಕಾರಿ ಮಧು, ದಸಂಸ ಜಿಲ್ಲಾ ಸಂಚಾಲಕ ಚಂದ್ರಶೇಖರ್, ತಾಲೂಕು ಸಂಚಾಲಕ ರಾಜು, ವಿಭಾಗೀಯ ಸಂಚಾಲಕ ಮರಿಸ್ವಾಮಿ, ಮನೋಜ್, ಅರ್ಜುನ್ ಇದ್ದರು.