ಲೋಕ ಆದಾಲತ್ ನಲ್ಲಿ ಒಂದಾದ ದಂಪತಿ

| Published : Jul 19 2025, 01:00 AM IST

ಸಾರಾಂಶ

ತರೀಕೆರೆ ತಾಲೂಕು ಕಾನೂನು ಸೇವಾ ಸಮಿತಿಯಿಂದ ಜು.13 ರಂದು ತರೀಕೆರೆ ನ್ಯಾಯಾಲಯದಲ್ಲಿ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಡೆಯಿತು.

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ತಾಲೂಕು ಕಾನೂನು ಸೇವಾ ಸಮಿತಿಯಿಂದ ಜು.13 ರಂದು ತರೀಕೆರೆ ನ್ಯಾಯಾಲಯದಲ್ಲಿ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಡೆಯಿತು.

ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಊರ್ಮಿಳಾ ಅವರ ನ್ಯಾಯಾಲಯದಲ್ಲಿ ಸುಫಾನ ಅಂಜಮ್ ಮತ್ತು ರಿಯಾಜ್ ಖಾನ್ ದಂಪತಿಯನ್ನು ಒಂದುಗೂಡಿಸಿದರು.

ಅನೇಕ ವರ್ಷಗಳಿಂದ ದೂರವಿದ್ದ ಇವರಿಗೆ ಒಂದು ಗಂಡು ಮಗುವಿತ್ತು, ಈ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರಾದ ಊರ್ಮಿಳಾ ಅವರು ವಕೀಲರ ಸಮ್ಮುಖದಲ್ಲಿ ಅವರಿಗೆ ತಿಳಿಹೇಳಿ ಒಂದುಗೂಡಿಸಿದರು. ಹಾರ ಹಾಕಿಸಿ ಸಿಹಿ ಹಂಚಿಸಿದರು. ನ್ಯಾಯಾಲಯದಲ್ಲಿದ್ದ ಎಲ್ಲರೂ ಸಂತಸಗೊಂಡರು.

ಲೋಕ ಅದಾಲತ್ ನಲ್ಲಿ ಹಿರಿಯ ನ್ಯಾಯಾಧೀಶರಾದ ವೈದ್ಯ ಶ್ರೀಕಾಂತ್ ಅವರ ನ್ಯಾಯಾಲಯದಲ್ಲಿ 234 ಪ್ರಕರಣಗಳು ಇತ್ಯರ್ಥಗೊಂಡವು, ಸಿವಿಲ್ ನ್ಯಾಯಾಧೀಶ ರಾಹುಲ್ ಶೆಟ್ಟಿಗಾರ್ ಅವರ ನ್ಯಾಯಾಲಯದಲ್ಲಿ 161 ಪ್ರಕರಣಗಳು, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶದ ಉರ್ಮಿಳಾ ಅವರ ನ್ಯಾಯಾಲಯದಲ್ಲಿ 310 ಪ್ರಕರಣಗಳು ಮತ್ತು ಒಟ್ಟು 15 ಹಳೆ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿದು ಬಂದಿದೆ.

-

18ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ನೆಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ದಂಪತಿಯನ್ನು ಒಂದುಗೂಡಿಸಲಾಯಿತು.