ಮಗುವಿಗೆ ಸಂಸ್ಕಾರಯುತ ವಿದ್ಯೆಯೇ ಸಂಪತ್ತು: ಶ್ರೀ ಶಿವಸುಜ್ಞಾನ ಸ್ವಾಮೀಜಿ

| Published : May 24 2025, 12:07 AM IST / Updated: May 24 2025, 12:08 AM IST

ಮಗುವಿಗೆ ಸಂಸ್ಕಾರಯುತ ವಿದ್ಯೆಯೇ ಸಂಪತ್ತು: ಶ್ರೀ ಶಿವಸುಜ್ಞಾನ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆ, ಮಗುವಿಗೆ ಸಂಸ್ಕಾರಯುತ ಶಿಕ್ಷಣವೇ ನಿಜವಾದ ಸಂಪತ್ತು ಎಂದು ಅರಕಲಗೋಡು ಅರೆಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ಸ್ವಾಮೀಜಿ ನುಡಿದರು.

ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಭಾದಿಂದ ನಡೆದ ಸಾಮೂಹಿಕ ಉಪನಯನ, ವಿಶ್ವಕರ್ಮ ಮಹಾಯಜ್ಞ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಮಗುವಿಗೆ ಸಂಸ್ಕಾರಯುತ ಶಿಕ್ಷಣವೇ ನಿಜವಾದ ಸಂಪತ್ತು ಎಂದು ಅರಕಲಗೋಡು ಅರೆಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ಸ್ವಾಮೀಜಿ ನುಡಿದರು.

ಪಟ್ಟಣದ ಪ್ರೀತಂ ಹಾಲ್ ನಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಭಾದಿಂದ ಶುಕ್ರವಾರ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಹಾಗೂ ವಿಶ್ವಕರ್ಮ ಮಹಾಯಜ್ಞ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳು ಸುಸಂಸ್ಕೃತರಾಗಬೇಕೆಂಬ ಮಹದಾಸೆ ಇರುತ್ತದೆ. ಆದರೆ, ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡದಿದ್ದರೆ ಬೇವನ್ನು ಬಿತ್ತಿ, ಮಾವನ್ನು ನಿರೀಕ್ಷಿಸಿದಂತಾಗುತ್ತದೆ. ಮಕ್ಕಳಿಗೆ ಮಾತೃ ವಾತ್ಸಲ್ಯ, ಗುರು ಪರಂಪರೆ ಬಹುಮುಖ್ಯ ಅಂಶಗಳಾಗಿವೆ. ಪ್ರತಿ ಮಗುವಿಗೂ ಗುರುವಿನ ಅನುಗ್ರಹ ಅಗತ್ಯ. ಮಕ್ಕಳನ್ನು ಮೊಬೈಲ್‌ನಿಂದ ದೂರವಿರುವಂತೆ ಜಾಗೃತ ವಹಿಸಬೇಕೆಂದು ಸಲಹೆ ನೀಡಿದರು. ಚೆನ್ನಗಿರಿಯ ವೆಡ್ಡನಹಾಲ್ ಮಹಾಸಂಸ್ಥಾನದ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಧರ್ಮ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆಂತರ್ಯದಲ್ಲಿ ಯಾವುದೇ ವ್ಯತ್ಯಾಸವಿದ್ದರೂ ಬಾಹ್ಯವಾಗಿ ಎಲ್ಲರೂ ಒಂದಾಗಿ ನಿಲ್ಲ ಬೇಕಿದೆ. ವಿಶ್ವಕರ್ಮ ಸಮುದಾಯ ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಿದ್ದು, ಸಂಘಟನೆ ಮೂಲಕ ಸಮುದಾಯ ಬಲಿಷ್ಟವಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ಹಾಗೂ ಸಮುದಾಯದ ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ರಘುಪತಿ ಪುರೋಹಿತರ ನೇತೃತ್ವದಲ್ಲಿ 65 ವಟುಗಳಿಗೆ ಉಪನಯನ ಹಾಗೂ ಧರ್ಮೋಪದೇಶ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಂಜುನಾಥ ಚಾರ್ಯ ವಹಿಸಿದ್ದರು. ಸುಬ್ರಮಣ್ಯ ಅಂಗಡಿ, ಕನ್ನೆಹಳ್ಳಿ ಮಂಜುನಾಥ್, ಕುಮಾರಚಾರ್, ಕಡಿದಾಳ್ ರಮೇಶ್, ಶಂಕರಾಚಾರ್ ಬೆಳಗಾವಿ, ಚಂದ್ರಚಾರ್ ಮೆಣಸಮಕ್ಕಿ, ಸತೀಶ್ ಉಗ್ಗೆಹಳ್ಳಿ, ವಾಸುದೇವ, ಪರಮೇಶಾಚಾರ್, ಶಿವಶಂಕರ್, ಸಂಧ್ಯಾ, ಹಳಿಯೂರು ನಾರಾಯಣಚಾರ್, ಉಮಾಶಂಕರ್, ಗಣಪತಿ ಆಚಾರ್, ಮಂಜುನಾಥಚಾರ್ ಘಟ್ಟದಹಳ್ಳಿ, ಚಂದ್ರಾವತಿ, ಸಂಧ್ಯಾ, ಆಶಾ, ಪುಷ್ಪ ಇದ್ದರು.

23 ಕೆಸಿಕೆಎಂ 5ಮೂಡಿಗೆರೆ ಪಟ್ಟಣದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಭಾದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಹಾಗೂ ವಿಶ್ವಕರ್ಮ ಮಹಾಯಜ್ಞ ಕಾರ್ಯಕ್ರಮವನ್ನು ಅರಕಲಗೋಡು ಅರೆಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ಸ್ವಾಮೀಜಿ ಉದ್ಘಾಟಿಸಿದರು.