ಸಾರಾಂಶ
ಸ್ವಾತಂತ್ರ್ಯ ಎಂಬುದು ಭವಿಷ್ಯದ ಕನಸು ಮತ್ತು ಆಕಾಂಕ್ಷೆಗಳನ್ನು ಹೊಂದುವ ದಿನವಾಗಿದೆ ಎಂದು ಅರವಿಂದೋ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಜೋಸೆಫ್ ಹೇಳಿದರು.
ಹೊಳೆಹೊನ್ನೂರು: ಸ್ವಾತಂತ್ರ್ಯ ಎಂಬುದು ಭವಿಷ್ಯದ ಕನಸು ಮತ್ತು ಆಕಾಂಕ್ಷೆಗಳನ್ನು ಹೊಂದುವ ದಿನವಾಗಿದೆ ಎಂದು ಅರವಿಂದೋ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಜೋಸೆಫ್ ಹೇಳಿದರು.
ಪಟ್ಟಣದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚಾರಣೆಯಲ್ಲಿ ಭಾಗವಹಿಸಿ ಮಾತನಾಡಿ, ದೇಶದಲ್ಲಿ ಪ್ರತಿ ವ್ಯಕ್ತಿಯ ಕೊಡುಗೆಯೂ ಕೂಡ ಅತ್ಯಂತ ಪ್ರಮುಖವಾದ ವರದಾನವಾಗಿದೆ. ನಮ್ಮ ಸಮಾಜಕ್ಕೆ ಬೇಕಾಗಿರುವುದು ಒಳ್ಳೆಯ ಉತ್ತಮ ವ್ಯಕ್ತಿತ್ವಗಳ ಮಾರ್ಗದರ್ಶನ ಎಂದರು.ಚನ್ನಗಿರಿ, ಭದ್ರಾವತಿ, ಕೈಮರ, ಗುರುಪುರ, ಶಿವಮೊಗ್ಗದಲ್ಲಿರುವ ಜ್ಞಾನದೀಪ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿಯೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯಲ್ಲಿ ತಿರಂಗ ಯಾತ್ರೆ, ಇಂಟರಾಕ್ಟ್ ಕ್ಲಬ್ ವತಿಯಿಂದ ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ನೃತ್ಯ ಕಾರ್ಯಕ್ರಮ ನಡೆಸಲಾಯಿತು.ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ ಹೆಗಡೆ, ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ನಿರ್ದೇಶಕ ಎಚ್.ಎನ್.ಎಸ್.ರಾವ್, ಡಾ.ರೆಜಿ ಜೋಸೆಫ್, ವಾಣಿ ಕೃಷ್ಣಪ್ರಸಾದ್ ಇತರರು ಇದ್ದರು.