ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆಗೆ ನಿರ್ಧಾರ

| Published : Oct 22 2024, 12:20 AM IST

ಸಾರಾಂಶ

ನ.೧ ರಂದು ರಬಕವಿ ನಗರದಲ್ಲಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲು ಶಂಕರಲಿಂಗ ದೇವಸ್ಥಾನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಅಂದು ಬೆಳಗ್ಗೆ ೯ ಗಂಟೆಗೆ ರಬಕವಿ ಹಳೆಯ ಬಸ್ ನಿಲ್ದಾಣದ ಬಳಿಯ ಬಾಲಿಕಿಯರ ಪ್ರೌಢಶಾಲೆ ಆವರಣದಲ್ಲಿನ ಭವ್ಯ ಅಲಂಕೃತ ವೇದಿಕೆಯಲ್ಲಿ ನಾಡದೇವಿ ಶ್ರೀಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾಮೂಹಿಕ ನಾಡಗೀತೆ ಮತ್ತು ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಭೆಯಲ್ಲಿ ಚಿದಾನಂದ ಸೊಲ್ಲಾಪೂರ, ಎಂ.ಎಸ್.ಬದಾಮಿ, ಈರಣ್ಣ ಗುಣಕಿ, ಸಾಗರ ನಿಪ್ಪಾಣಿ, ರವೀಂದ್ರ ಅಷ್ಟಗಿ, ಸಿದ್ದಣ್ಣ ಮೇಣಿ, ಸುಭಾಷ್ ಮಧುರಖಂಡಿ, ಬಾಬು ಗಂಗಾವತಿ, ಶ್ರೀಶೈಲ ಬುರ್ಲಿ, ಯಶವಂತ ವಾಜಂತ್ರಿ, ಪ್ರಕಾಶ ಸುಢಾಳ, ಬಸವರಾಜ ಮಟ್ಟಿಕಲ್ಲಿ, ಸಂಜಯ ಮಹೇಂದ್ರಕರ, ಪ್ರಕಾಶ ಕುಂಬಾರ, ಯಾಸೀನ್ ಕಾರುಭಾರಿ ಸೇರಿದಂತೆ ಪ್ರಮುಖರಿದ್ದರು.