ಮಹಿಳಾ ಸ್ವ-ಸಂಘಗಳ ಅಧ್ಯಯನಕ್ಕೆ ಅಮೆರಿಕ ವಿದ್ಯಾರ್ಥಿಗಳ ತಂಡ

| Published : Jan 08 2024, 01:45 AM IST / Updated: Jan 08 2024, 01:56 PM IST

ಮಹಿಳಾ ಸ್ವ-ಸಂಘಗಳ ಅಧ್ಯಯನಕ್ಕೆ ಅಮೆರಿಕ ವಿದ್ಯಾರ್ಥಿಗಳ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧುನೀಕೃತ ಉಚ್ಚಿಲ ಶಾಖೆಗೆ ಅಮೆರಿಕದ ವಿದ್ಯಾರ್ಥಿಗಳ ಅಧ್ಯಯನ ತಂಡ ಶನಿವಾರ ಭೇಟಿ ನೀಡಿ ವಿಚಾರ ವಿನಿಮಯ ನಡೆಸಿತು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧುನೀಕೃತ ಉಚ್ಚಿಲ ಶಾಖೆಗೆ ಅಮೆರಿಕದ ವಿದ್ಯಾರ್ಥಿಗಳ ಅಧ್ಯಯನ ತಂಡ ಶನಿವಾರ ಭೇಟಿ ನೀಡಿ ವಿಚಾರ ವಿನಿಮಯ ನಡೆಸಿತು.

ಸ್ವ-ಸಹಾಯ ಸಂಘಗಳಿಂದ ಗ್ರಾಮಾಭಿವೃದ್ಧಿ, ಇದರಿಂದ ಮಹಿಳೆಯರ ಆರ್ಥಿಕ ಸ್ಥಿತಿಗತಿ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಬಗ್ಗೆ ಅಧ್ಯಯನಕ್ಕಾಗಿ ಬಂದಿರುವ ಈ ವಿದ್ಯಾರ್ಥಿಗಳ ತಂಡವು ನಿಟ್ಟೆ ವಿವಿಗೆ ಆಗಮಿಸಿದ್ದು, ಅದರಂಗವಾಗಿ ಸಹಕಾರಿ ಸಂಘಗಳಿಗೆ ಭೇಟಿ ನೀಡುತ್ತಿದೆ.

ಅಮೆರಿಕದ ಪ್ರಮುಖ ೩ ವಿವಿಗಳಲ್ಲಿ ಒಂದಾದ ಪೆನೊಸೋಲೋನಿಯಾ ವಿವಿಯ ಡಾ.ಫಮೀದಾ ಹ್ಯಾಂಡಿ ಮಾತನಾಡಿ, ಅಮೆರಿಕದಲ್ಲೂ ಬಡತನವಿದೆ. ಅಲ್ಲಿಯೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿದ್ದಾರೆ. 

ಇಲ್ಲಿನ ಮಹಿಳಾ ಸಬಲೀಕರಣ ಬಗ್ಗೆ ನಡೆಸಿದ ಅಧ್ಯಯನದಿಂದ ಅಮೆರಿಕದ ಗ್ರಾಮೀಣ ಭಾಗದಲ್ಲಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ. ಕಳೆದ ೧೧ ವರ್ಷಗಳಿಂದ ಭಾರತದ ಮಹಿಳೆಯರ ಸಬಲೀಕರಣದ ಅಧ್ಯಯನಕ್ಕೆ ಬರುತ್ತಿದ್ದು, ಇಲ್ಲಿನ ಮಹಿಳೆಯರ ಆರ್ಥಿಕ, ಸಾಮಾಜಿಕ ಉನ್ನತೀಕರಣ ಕಂಡ ಪ್ರಭಾವಿತರಾಗಿದ್ದೇವೆ ಎಂದರು.

ತಂಡದ ಮಾರ್ಗದರ್ಶಕ ನಿಟ್ಟೆ ವಿವಿಯ ಪ್ರೊ. ವಿನೋದ್ ದೀಕ್ಷಿತ್ ಜೊತೆಗಿದ್ದರು. ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅತಿಥಿಗಳನ್ನು ಸ್ವಾಗತಿಸಿದರು.

ನಂತರ ಈ ವಿದ್ಯಾರ್ಥಿಗಳು ಬೆಳುಪುವಿನ ಬಟ್ಟೆ ತಯಾರಿಕಾ ಘಟಕ, ದೇವಿಪ್ರಸಾದ್ ಶೆಟ್ಟರ ಗೋಶಾಲೆಗೆ ಭೇಟಿ ನೀಡಿ, ಹೈನುಗಾರಿಕೆ ಬಗ್ಗೆ ಮಾಹಿತಿ ಕಲೆ ಹಾಕಿದರು. ಬೆಳಪು ಸಂಘದ ೩೦೦ ಸ್ವಸಹಾಯ ಸಂಘಗಳ ಬಗ್ಗೆಯೂ ಅವರು ಮಾಹಿತಿ ಪಡೆದರು.