ಅದೊಂದು ವಿಶಾಲವಾದ ಮೈದಾನ. ಅಲ್ಲಿ ತಯಾರಾಗಿ ನಿಂತಿರುವುದು ಜಗಜಟ್ಟಿ ಅಂತೆ ಕಾಣುವ ಕಟ್ಟುಮಸ್ತಾದ ಪುರುಷರು. ಜನರ ಸಿಳ್ಳೆ ಸದ್ದು, ಎಲ್ಲಿ ನೋಡಿದರೂ ಹುರುಪು ಹುಮ್ಮಸ್ಸು ತುಂಬುವ ಝೇಂಕಾರ. ಆದರೆ ಇದು ಯಾವುದೆ ಕುಸ್ತಿ ಪಂದ್ಯಾಟ ಅಥವಾ ಬೇರೆ ಯಾವುದೆ ಪಂದ್ಯಾಟದ ಮೈದಾನವಲ್ಲ. ದಸರಾ ಉತ್ಸವ ಸಮಿತಿ ಆಯೋಜಿಸಿರುವ ವಿನೂತನ ಪಕ್ಕಾ ಗ್ರಾಮೀಣ ಪ್ರದೇಶದ ಚೀಲ ಭಾರ ಎತ್ತುವ ಸ್ಪರ್ಧೆಯ ಆಟಗಳು.
ಕನ್ನಡಪ್ರಭ ವಾರ್ತೆ ಕೆಂಭಾವಿ
ಅದೊಂದು ವಿಶಾಲವಾದ ಮೈದಾನ. ಅಲ್ಲಿ ತಯಾರಾಗಿ ನಿಂತಿರುವುದು ಜಗಜಟ್ಟಿ ಅಂತೆ ಕಾಣುವ ಕಟ್ಟುಮಸ್ತಾದ ಪುರುಷರು. ಜನರ ಸಿಳ್ಳೆ ಸದ್ದು, ಎಲ್ಲಿ ನೋಡಿದರೂ ಹುರುಪು ಹುಮ್ಮಸ್ಸು ತುಂಬುವ ಝೇಂಕಾರ. ಆದರೆ ಇದು ಯಾವುದೆ ಕುಸ್ತಿ ಪಂದ್ಯಾಟ ಅಥವಾ ಬೇರೆ ಯಾವುದೆ ಪಂದ್ಯಾಟದ ಮೈದಾನವಲ್ಲ. ದಸರಾ ಉತ್ಸವ ಸಮಿತಿ ಆಯೋಜಿಸಿರುವ ವಿನೂತನ ಪಕ್ಕಾ ಗ್ರಾಮೀಣ ಪ್ರದೇಶದ ಚೀಲ ಭಾರ ಎತ್ತುವ ಸ್ಪರ್ಧೆಯ ಆಟಗಳು.ಪಟ್ಟಣದ ಪುರಸಭೆ ಆವರಣದಲ್ಲಿ ಬುಧವಾರ ದಸರಾ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ತುಂಬಿದ ಚೀಲ ಎತ್ತುವ ಸ್ಪರ್ಧೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು ರೈತರು ತಮ್ಮ ಶಕ್ತಿ ಪ್ರದರ್ಶನ ತೋರಿದರು. 110 ಕೆಜಿ, 140 ಕೆಜಿ, 220ಕೆಜಿ ಹೀಗೆ ಹಲವು ಬಗೆಯ ಭಾರ ಎತ್ತುವ ಆಟದಲ್ಲಿ ಪಾಲ್ಗೊಂಡಿದ್ದ ಸುರಪುರ, ಶಹಾಪುರ ತಾಲೂಕಿನ ಹಲವು ರೈತಾಪಿ ಯುವಕರು ತಮ್ಮ ಬಲ ಪ್ರದರ್ಶನದ ಮೂಲಕ ವಿಶೇಷ ಕಲೆ ತೋರ್ಪಡಿಸಿದರು.
ಯುವ ರೈತರು ತೋರಿದ ಈ ಪ್ರತಿಭೆಗೆ ಉತ್ಸವ ಸಮಿತಿ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿ 235 ಕೆಜೆ ಭಾರ ಎತ್ತಿ ಪ್ರಥಮ ಬಹುಮಾನ ಪಡೆದ ಮರೆಪ್ಪ ಶಾರದಹಳ್ಳಿ ಬೆಳ್ಳಿ ಕಡಗ, ನಗದು ಬಹುಮಾನ ಹಾಗೂ 230 ಕೆಜಿ ಭಾರ ಎತ್ತಿ ದ್ವಿತೀಯ ಬಹುಮಾನ ಗಳಿಸಿದ ಯಲ್ಲಾಲಿಂಗ್ ಮಡ್ನಾಳ ಅವರಿಗೆ ಬಹುಮಾನ ವಿತರಿಸಿದರು.ರಾಜು ಯರಗಲ, ಬಸವರಾಜ ಗೌಡಗೇರಿ, ಶರಣು ಚಿಕ್ಕಹಂಗರಗಿ ಅವರಿಗೆ ತೃತೀಯ ಬಹುಮಾನ ದೊರೆಯಿತು. ದಸರಾ ಉತ್ಸವ ಸಮಿತಿ ಗೌರವಾಧ್ಯಕ್ಷ ಮುದಿಗೌಡ ಮಾಲಿಪಾಟೀಲ, ಅಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ಪುರಸಭೆ ಸದಸ್ಯ ರವಿ ಸೊನ್ನದ, ಆರೀಫ ಖಾಜಿ, ರಮೇಶ ಕೊಡಗಾನೂರ, ತೋಟಪ್ಪ ಪೂಜಾರಿ, ಮಲ್ಲನಗೌಡ ಪಾಟೀಲ, ಬಂದೇನವಾಜ ನಾಲತವಾಡ, ಹಳ್ಳೆಪ್ಪ ಕವಾಲ್ದಾರ, ನಂದಪ್ಪ ಕವಾಲ್ದಾರ, ರಂಗಪ್ಪ ವಡ್ಡರ, ಗುರುಸ್ವಾಮಿ ಗಣಾಚಾರಿ, ಹಣಮಂತ ಪಡಸಾಲಿ, ತಿಪ್ಪಣ್ಣ, ಪವನ ತುಂಬಗಿ, ಕೆಂಚಪ್ಪ ತುಂಬಗಿ, ಪರಶುರಾಮ ಹಿರೇಕುರಬರ, ಮಲ್ಲಪ್ಪ ಹೊಸಮನಿ, ಸಂಗಪ್ಪ ಯರಗಲ ಸೇರಿ ಹಲವರಿದ್ದರು.