ಕೈ ನಡಿಗೆಯಲ್ಲಿ ಬಾಲರಾಮನ ದರ್ಶನ ಪಡೆದ ಭಕ್ತ

| Published : Jan 23 2024, 01:47 AM IST

ಕೈ ನಡಿಗೆಯಲ್ಲಿ ಬಾಲರಾಮನ ದರ್ಶನ ಪಡೆದ ಭಕ್ತ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆ ರಾಮಮಂದಿರ ಉದ್ಘಾಟನೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಭಕ್ತರು ಇನ್ನಿಲ್ಲದಂಥ ಹರಕೆಗಳನ್ನು ಹೊತ್ತು ಸಾಗುತ್ತಿದ್ದಾರೆ. ಸೋಮವಾರ ಸಾಗರದ ರಾಮನಗರ ಬಡಾವಣೆಯ ರಾಮಭಕ್ತ ಪ್ರಭು ಪಾದಗಳ ಬದಲಿಗೆ ಕೈಯಲ್ಲಿಯೇ (ತಲೆಕೆಳಗಾಗಿ) ನಡೆದು ರಾಮದೇವರ ದರ್ಶನ ಪಡೆಯುವ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.

ಸಾಗರ: ಪಟ್ಟಣದ ರಾಮನಗರ ಬಡಾವಣೆಯ ರಾಮಭಕ್ತನೊಬ್ಬ ಕೈಯಲ್ಲಿ ನಡೆದು ದೇವರ ದರ್ಶನ ಪಡೆಯುವ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.

ರಾಮನಗರ ನಿವಾಸಿ ಪ್ರಭು ಅವರು ಇಲ್ಲಿಂದ ಅಯೋಧ್ಯೆಗೆ ಹೋಗಬೇಕೆನ್ನುವ ಆಸೆ ಇಟ್ಟುಕೊಂಡಿದ್ದರು. ಆದರೆ ಬಡತನದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಆಗ, ಹೊಸನಗರ ರಸ್ತೆಯ ರಾಮನಗರದ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಪೇಟೆಯ ವಾಸವಿ ದೇವಸ್ಥಾನದಲ್ಲಿ ನಿರ್ಮಿಸಲಾಗಿದ್ದ ಅಯೋಧ್ಯೆ ಶ್ರೀರಾಮ ಮಂದಿರ ಹಾಗೂ ರಾಮ ಮೂರ್ತಿಯ ದರ್ಶನ ಪಡೆಯಲು ಸೋಮವಾರ ಬೆಳಗ್ಗೆ ಕೈ ನಡಿಗೆ (ತಲೆ ಕೆಳಗಾಗಿ) ಸುಮಾರು 2.5 ಕಿಮೀ ದೂರ ಸಾಗಿ ದೇವರ ದರ್ಶನ ಪಡೆದು ಭಕ್ತಿ ಮೆರೆದಿದ್ದಾರೆ. ಸುಮಾರು 1.30 ಗಂಟೆ ಕಾಲದಲ್ಲಿ ಈ ಸಾಧನೆ ಮಾಡಿದ್ದಾರೆ.

ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಪ್ರಭು ದಂಪತಿಗೆ ಸಾಗರದಿಂದ ಅಯೋಧ್ಯೆ ತನಕ ಕಾಲ್ನಡಿಗೆಯಲ್ಲಿ ತೆರಳಿ ಬಾಲರಾಮನ ದರ್ಶನ ಪಡೆಯುವ ಬಯಕೆ ಹೊಂದಿದ್ದಾರೆ.

- - - -22ಕೆ.ಎಸ್.ಎ.ಜಿ.4: ಕೈ ನಡಿಗೆಯಲ್ಲಿ ಸಾಗಿ ಬಾಲರಾಮನ ದರ್ಶನ ಪಡೆದ ಸಾಗರದ ಪ್ರಭು.