ಚಿಕ್ಕಮಗಳೂರುರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಆಶ್ರಯದಲ್ಲಿ ಗುರುವಾರ ನಗರದಲ್ಲಿ ನಡೆದ ವಿಜಯದಶಮಿ ಪಥಸಂಚಲನ ಗಮನ ಸೆಳೆಯಿತು.
(2ಪೋಟೋ ಬಳಸಬಹುದು)
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್)ದಿಂದ ವಿಜಯದಶಮಿ ಪಥಸಂಚಲನಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಆಶ್ರಯದಲ್ಲಿ ಗುರುವಾರ ನಗರದಲ್ಲಿ ನಡೆದ ವಿಜಯದಶಮಿ ಪಥಸಂಚಲನ ಗಮನ ಸೆಳೆಯಿತು.ಬರೋಬ್ಬರಿ 1,000ಕ್ಕೂ ಹೆಚ್ಚು ಗಣವೇಷಧಾರಿಗಳು ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರು ಪುಷ್ಪವೃಷ್ಟಿ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಆರಂಭವಾದ ಬೃಹತ್ ಪಥಸಂಚಲನ ಅರಳಿಮರ, ಬಸವನಹಳ್ಳಿ ಮುಖ್ಯ ರಸ್ತೆ ಹಾಗೂ ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ. ರಸ್ತೆಯಲ್ಲಿ ಸಾಗಿ ಆಜಾದ್ ಪಾರ್ಕ್ನಲ್ಲಿ ಮುಕ್ತಾಯಗೊಂಡಿತು. ಸುಮಾರು ನಾಲ್ಕು ಕಿ.ಮೀ. ದೂರ ಸಾಗಿದ ಪಥಸಂಚಲನದಲ್ಲಿ ನೂರಾರು ಪುಟಾಣಿ ಮಕ್ಕಳು ಪಾಲ್ಗೊಂಡಿದ್ದರು.ಕೇಸರಿ ಧ್ವಜ, ರಂಗೋಲಿಗಳಿಂದ ಅಲಂಕಾರ:ಪಥಸಂಚಲನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಕೇಸರಿ ಧ್ವಜಗಳು ಹಾಗೂ ತಳಿರು ತೋರಣಗಳಿಂದ ಅಲಂಕ ರಿಸಲಾಗಿತ್ತು. ರಸ್ತೆಗಳಲ್ಲಿ ಬಿಡಿಸಲಾಗಿದ್ದ ಬಣ್ಣಬಣ್ಣದ ರಂಗೋಲಿಗಳು ಹಬ್ಬದ ವಾತಾವರಣ ಹೆಚ್ಚಿಸಿದವು. ರಾಷ್ಟ್ರನಾಯಕರ ಘೋಷವಾಕ್ಯಗಳನ್ನು ಒಳಗೊಂಡ ಫಲಕಗಳು ಸಾರ್ವಜನಿಕರ ಗಮನ ಸೆಳೆದವು. ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಸಾರ್ವಜನಿಕರು ಹೂಮಳೆ ಸುರಿಸಿ ಗಣವೇಷಧಾರಿಗಳನ್ನು ಸ್ವಾಗತಿಸಿದರು. ಮಕ್ಕಳು ವಿವಿಧ ಮಹನೀಯರ ವೇಷ ಧರಿಸಿ ಗಮನ ಸೆಳೆದರು.
.../ಬಾಕ್ಸ್....ಗಣವೇಷದಲ್ಲಿ ಸಿ.ಟಿ. ರವಿವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ. ರವಿ ಗಣವೇಷ ಧರಿಸಿ ಇತರ ಸ್ವಯಂಸೇವಕರೊಂದಿಗೆ ಸರದಿಯಲ್ಲಿ ನಿಂತು ಪಥ ಸಂಚಲನದಲ್ಲಿ ಪಾಲ್ಗೊಂಡರು. ಕಾರ್ಯಕರ್ತರ ಮಧ್ಯೆ ಸಾಮಾನ್ಯ ಸ್ವಯಂಸೇವಕರಂತೆ ನಿಂತಿದ್ದ ಅವರು ಗಮನ ಸೆಳೆದರು. ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ,ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೂಟ್ಯನ್, ಆರ್ಎಸ್ಎಸ್ ಮುಖಂಡ ಮಲ್ಲಿಕಾರ್ಜುನ, ಪ್ರವೀಣ್, ಸಮಂತ್ ನೆಮ್ಮಾರು ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.
......ಬಾಕ್ಸ್....ಬಿಗಿ ಪೊಲೀಸ್ ಬಂದೋಬಸ್ತ್:ಪಥಸಂಚಲನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎರಡು ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ತುಕಡಿ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪಥಸಂಚಲನದ ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಅಗತ್ಯ ವ್ಯವಸ್ಥೆ ಮಾಡಿತ್ತು.
