ಅಸ್ಪೃಶ್ಯತೆಯಂತಹ ಕಾಯಿಲೆ ಸಮಾಜದಿಂದ ಓಡಿಸಬೇಕು

| Published : Feb 01 2024, 02:05 AM IST

ಸಾರಾಂಶ

ಪ್ರೇರಣಾ ಕಾರ್ಯಾಲಯ ಲೋಕಾರ್ಪಣೆ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ಪ್ರತಿ ಸ್ವಯಂ ಸೇವಕರು ಪ್ರಯತ್ನಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಗೋಕಾಕ

ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಓಡಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಅವರು ಬುಧವಾರ ನಗರದ ರಮೇಶಣ್ಣಾ ಕಾಲೋನಿಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ ಸ್ಮತಿ ಟ್ರಸ್ಟ ಚಿಕ್ಕೋಡಿ ಇವರ ನೂತನವಾಗಿ ನಿರ್ಮಿಸಿದ ಪ್ರೇರಣಾ ಕಾರ್ಯಾಲಯದ ವಾಸ್ತು ಶಾಂತಿ ಹಾಗೂ ಲೋಕಾರ್ಪಣೆ ಸಮಾರಂಭದಲ್ಲಿ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿ, ಹಿಂದು ಧರ್ಮದಲ್ಲಿ ಅಸ್ಪೃಶ್ಯತೆ ಇಲ್ಲ. ನಾವೆಲ್ಲ ಒಂದೇ. ಸಾಮಾಜಿಕ ಸಾಮರಸ್ಯದ ಹಿಂದು ಮನೆಯಾಗಬೇಕು. ಇದಕ್ಕಾಗಿ ಪ್ರತಿ ಸ್ವಯಂ ಸೇವಕರು ಪ್ರಯತ್ನಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದರು.

ಭಾರತ ಜಗತ್ತಿಗೆ ಗುರು ಆಗಬೇಕೆಂಬ ಗುರಿಯೊಂದಿಗೆ ದೇಶದಲ್ಲಿ ಲಕ್ಷಾಂತರ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬೃಹತ್ ಸಮಾವೇಶ ಹಾಗೂ ಚಿಂತನಾ ಗೋಷ್ಠಿಗಳನ್ನು ಆಯೋಜಿಸಿ ನಾವೆಲ್ಲ ಹಿಂದು ಎಂದು ಜಾಗೃತಿ ಮೂಡಿಸಬೇಕು. ಮನೆ ಮನೆಗೆ ಸಂಚರಿಸಿ ನಿಧಿ ಸಂಗ್ರಹಿಸಿ ರಾಮಮಂದಿರ ಪ್ರತಿಷ್ಠಾಪಿಸಿ 500 ವರ್ಷಗಳ ಕಳಂಕ ತೊಳೆದಿದ್ದೇವೆ. ಸಂಘದ ನೂರು ವರ್ಷದ ಆಚರಣೆ ಮಾಡಲು ಒಂದು ಲಕ್ಷ ಗ್ರಾಮಗಳಲ್ಲಿ ಸಂಘದ ಶಾಖೆಗಳನ್ನು ತೆರೆದು ಸಮಾಜ ಪರಿವರ್ತನೆ ಮಾಡಲು ಸ್ವಯಂ ಸೇವಕರು ಶ್ರಮಿಸಬೇಕು ಎಂದರು.

ನಮಗೆ ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರು ನಮ್ಮಲ್ಲಿ ಗುಲಾಮಗಿರಿ ಭಾವನೆ ಹೊಗಿಲ್ಲ. ಸ್ವದೇಶಿ ಮನೋಭಾವ ಬೆಳೆದಿಲ್ಲ. ನಮ್ಮ ಭಾಷೆ, ಸಂಸ್ಕೃತಿ ಬೆಳೆಸಬೇಕು. ಸ್ವದೇಶಿ ಕುರಿತು ಅರಿವು ಮೂಡಿಸಿ, ನಾಗಕರಿಕ ಕರ್ತವ್ಯಗಳ ಪಾಲನೆ ಮಾಡಲು ಸ್ವಯಂ ಸೇವಕರು ಕಲಿಸಬೇಕು. ಭಾರತ ದೇಶ ಶ್ರೇಷ್ಠವಾಗಲು ನಮ್ಮ ಮನೆ ಹಿಂದು ಮನೆಯಾಗಿ ಮಾಡಲು ಕರೆ ನೀಡಿದರು.

ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು, ಇಂದು ಮಠಗಳು ಜಾತಿಗೆ ಸೀಮಿತವಾಗುತ್ತಿವೆ. ಆರ್‌ಎಸ್‌ಎಸ್‌ನವರು ನಿರ್ಮಿಸಿರುವ ಈ ಪ್ರೇರಣಾ ಕಾರ್ಯಾಲಯ ಕಟ್ಟಡ ಜಾತ್ಯಾತೀತ ಮಠವಾಗಿ ಹಿಂದು ರಾಷ್ಟ್ರ ಮಾಡಲು ಪ್ರೇರಣೆಯಾಗಿದೆ. ಸೈನಿಕರ ನಂತರ ಶಿಸ್ತು ಹಾಗೂ ದೇಶ ಪ್ರೇಮ ಸ್ವಯಂ ಸೇವಕರಲ್ಲಿ ಕಾಣುತ್ತಿದ್ದೇವೆ. ಯುವ ಪೀಳಿಗೆ ಈ ಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ತಿಳಿಸಿದರು.

ಸಾನ್ನಿಧ್ಯವನ್ನು ಮೂಡಲಗಿಯ ಶಿವಭೋದರಂಗ ಮಠದ ಶ್ರೀ ದತ್ತಾತ್ರೇಯಭೋದ ಸ್ವಾಮೀಜಿ, ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಸಿದ್ದರು.

ಈ ವೇಳೆ ಸಂಘದ ಉತ್ತರ ಕರ್ನಾಟಕ ಪ್ರಾಂತ ಸಂಚಾಲಯ ಬಸವರಾಜ ಡಂಬಳ, ಕೇಶವ ಸ್ಮತಿ ಟ್ರಸ್ಟ ಅಧ್ಯಕ್ಷ ಮಲ್ಲಿಕಾರ್ಜುನ ಚುನಮರಿ, ಎಂ.ವೈ ಹಾರುಗೇರಿ, ಸಂಘ ಪರಿವಾರದ ಪ್ರಮುಖ ರಾಘವೇಂದ್ರ ಕಾಗವಾಡ, ನರೇಂದ್ರ, ಕೃಷ್ಣಾನಂದ ಕಾಮತ, ಅರವಿಂದರಾವ ದೇಶಪಾಂಡೆ, ಶ್ರೀಧರ ನಾಡಿಗೇರ, ಶ್ರೀನಿವಾಸ ನಾಯ್ಕ, ಶಾಸಕಿ ಶಶಿಕಲಾ ಜೊಲ್ಲೆ, ಮುಖಂಡ ಅಂಬಿರಾವ ಪಾಟೀಲ, ಸರ್ವೋತ್ತಮ ಜಾರಕಿಹೊಳಿ, ಜಯಾನಂದ ಮುನವಳ್ಳಿ, ಅಶೋಕ ಪೂಜೇರಿ ಸೇರಿ ಅನೇಕರು ಇದ್ದರು. ವಿಕಾಸ ನಾಯ್ಕ ಸ್ವಾಗತಿಸಿದರು, ಪ್ರಕಾಶ ವರ್ಜಿ ನಿರೂಪಿಸಿದರು, ಗಜಾನನ ವಾಗುಲೆ ವಂದಿಸಿದರು.