ಸಾರಾಂಶ
ಅಭಿವೃದ್ಧಿಪರ ಚಿಂತನೆ ಮೈಗೂಡಿಸಿಕೊಂಡಿದ್ದರೆ ಮಾತ್ರ ಬಳ್ಳಾರಿ ಜಿಲ್ಲೆ ಮಾದರಿಯಾಗಲು ಸಾಧ್ಯ.
ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಂಸದ
ಕನ್ನಡಪ್ರಭ ವಾರ್ತೆ ಕುರುಗೋಡುಅಭಿವೃದ್ಧಿಪರ ಚಿಂತನೆ ಮೈಗೂಡಿಸಿಕೊಂಡಿದ್ದರೆ ಮಾತ್ರ ಬಳ್ಳಾರಿ ಜಿಲ್ಲೆ ಮಾದರಿಯಾಗಲು ಸಾಧ್ಯ ಎಂದು ಸಂಸದ ತುಕಾರಾಮ ಹೇಳಿದರು.
ಸಮೀಪದ ಕುಡುತಿನಿ ಪಟ್ಟಣದಲ್ಲಿ ಶಾಸಕ ಹಾಗೂ ಸಂಸದರ ಅನುದಾನ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಂಸದನಾಗಿ ಕೇವಲ ಸಂಡೂರು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಲೋಕಸಭೆಯಲ್ಲಿ ಈಗಾಗಲೇ ಜಿಲ್ಲೆಯ ಅಗತ್ಯ ವಿಷಯದ ಬಗ್ಗೆ ಪ್ರಸ್ತಾಪಿಸುವ ಜತೆಗೆ ಕೇಂದ್ರ ಸರ್ಕಾರಕ್ಕೆ ಅನುದಾನ ಒದಗಿಸಲು ಮನವಿ ಮಾಡಿದ್ದೇನೆ. ಅನುದಾನ ಮಂಜೂರಾದ ಬಳಿಕ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಈಗಾಗಲೇ ಪಟ್ಟಣದಲ್ಲಿ ₹4.70 ಕೋಟಿ ವೆಚ್ಚದಲ್ಲಿ ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ₹2.45 ಕೋಟಿಯಲ್ಲಿ ಕುಡತಿನಿ ಹೊಸಪೇಟೆ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ, ₹20 ಲಕ್ಷದಲ್ಲಿ ಅಂಗನವಾಡಿ ಕಟ್ಟಡ, ನೂತನ ಇಂದಿರಾ ಕ್ಯಾಂಟೀನ್ ಹಾಗೂ ₹1.50 ಕೋಟಿ ವೆಚ್ಚದಲ್ಲಿ ನೀರಿನ ಟ್ಯಾಂಕ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣಾ ತುಕಾರಾಮ ಮಾತನಾಡಿ, ಪಂಚ ಗ್ಯಾರಂಟಿ ಅನುಷ್ಠಾನದ ಜತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಹೇಳಿದರು.ಪಪಂ ಅಧ್ಯಕ್ಷೆ ಆರ್. ಸುಜಾತಾ ಸತ್ಯಪ್ಪ, ಉಪಾಧ್ಯಕ್ಷ ಕನ್ನಿಕೇರಿ ಪಂಪಾಪತಿ, ದೊಡ್ಡಬಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ವಿ. ರಾಜಶೇಖರ, ಪಲ್ಲೇದ ಪ್ರಭುಗೌಡ, ಚಂದ್ರಾಯಿ, ದೊಡ್ಡಬಸಪ್ಪ, ವಿಸಿಕೆ ಚಂದ್ರಪ್ಪ, ಐ. ಲೋಕೇಶ, ತಿಮ್ಮಪ್ಪ, ಚಲುವಾದಿ ಶ್ರೀನಿವಾಸ ಇತರರಿದ್ದರು.