ಸಾರಾಂಶ
ಸಾವಿರಾರು ಮಂದಿಗೆ ಶಾಸ್ತ್ರೀಯ ಯಕ್ಷಗಾನವನ್ನು ಕಲಿಸಿರುವ ಬನ್ನಂಜೆ ಸಂಜೀವ ಸುವರ್ಣರ ಬಗ್ಗೆ ಫ್ರಾನ್ಸ್ ದೇಶದ ಪ್ರಜೆಯೊಬ್ಬರು ಸಾಕ್ಷ್ಯ ಚಿತ್ರ ತಯಾರಿಸಲಿದ್ದಾರೆ. ಪ್ಯಾರಿಸ್ ನ ಸೋರ್ಬೋನ್ನೇ ವಿಶ್ವವಿದ್ಯಾಲಯದಲ್ಲಿ ಸಂಗೀತ ಶಿಕ್ಷಕಿ ಅನಿತಾ ಸಾವಿತ್ರಿ ಸಾಕ್ಷ್ಯಚಿತ್ರವನ್ನು ತಯಾರಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಹಿತ್ತಲಗಿಡ ಮದ್ದಲ್ಲ ಎಂಬಂತೆ ಇರುವ ಸಾವಿರಾರು ಮಂದಿಗೆ ಶಾಸ್ತ್ರೀಯ ಯಕ್ಷಗಾನವನ್ನು ಕಲಿಸಿರುವ ಬನ್ನಂಜೆ ಸಂಜೀವ ಸುವರ್ಣರ ಬಗ್ಗೆ ಫ್ರಾನ್ಸ್ ದೇಶದ ಪ್ರಜೆಯೊಬ್ಬರು ಸಾಕ್ಷ್ಯ ಚಿತ್ರವನ್ನು ತಯಾರಿಸಲು ಆಗಮಿಸಿದ್ದಾರೆ.ಅನಿವಾಸಿ ಭಾರತೀಯರಾಗಿರುವ ಅನಿತಾ ಸಾವಿತ್ರಿ ಹರ್ ಕೇರಳ ಮೂಲದವರು, ಬಾಲ್ಯದಲ್ಲಿ ಅವರನ್ನು ಫ್ರಾನ್ಸ್ ದಂಪತಿ ದತ್ತು ಪಡೆದಿದ್ದರು. ಪ್ರಸ್ತುತ ಆಕೆ ಪ್ಯಾರಿಸ್ ನ ಸೋರ್ಬೋನ್ನೇ ವಿಶ್ವವಿದ್ಯಾಲಯದಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 48 ವಿದ್ಯಾರ್ಥಿಗಳಿಗೆ ಭಾರತೀಯ ಸಂಗೀತ ಕಲೆಗಳ ಬಗ್ಗೆ ಭೋದನೆ ಮಾಡುತ್ತಿದ್ದಾರೆ.
ಜೊತೆಗೆ ಎಥ್ನೋ ಮ್ಯೂಸಿಕಲೋಜಿ ಬಗ್ಗೆ ಪಿ.ಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ಅದರ ಭಾಗವಾಗಿ ಈ ಸಾಕ್ಷ್ಯಚಿತ್ರವನ್ನು ತಯಾರಿಸುತ್ತಿದ್ದಾರೆ. ಅವರಿಗೆ ಲ್ಯಾಟಿನ್ ಅಮೇರಿಕಾ ಮೂಲದ ಫ್ರಾನ್ಸ್ ಪ್ರಜೆ ಮೆಗೇಲಿ ಮೊಬಿಟಿಯವರು ಸಿನೆಮಾಟೋಗ್ರಫಿಯಲ್ಲಿ ಸಾಥ್ ನೀಡುತಿದ್ದಾರೆತೀರಾ ಬಡ ಕುಟುಂಬದಲ್ಲಿ ಹುಟ್ಟಿದ ಬಾಲಕ ಸಂಜೀವ, ಮುಂದೆ ಯಕ್ಷಗಾನದಲ್ಲಿ ಹಂತಹಂತವಾಗಿ ಪರಿಣತಿ ಪಡೆದು, ಯಕ್ಷಗಾನದ ಗುರುವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡಿದ ಸಾಧನೆಯನ್ನು ಅನಿತಾ ಮತ್ತು ಮೊಬಿಟಿ ಅವರು ಕಳೆದ ಹತ್ತು ದಿನಗಳಿಂದ ದಾಖಲಿಸುತ್ತಿದ್ದಾರೆ.
ಭಾರತೀಯ ನೃತ್ಯ ಮತ್ತು ಕಲೆಯ ವಿಶೇಷ ಆಸಕ್ತಿ ಹೊಂದಿದ್ದ ತಾನು 2004 ರಲ್ಲಿ ತನ್ನ 22 ನೇ ವಯಸ್ಸಿನಲ್ಲಿ ಭಾರತಕ್ಕೆ ಬಂದು ಭರತನಾಟ್ಯ ಕಲಿಯುತ್ತಿದ್ದಾಗ, ಕರಾವಳಿಯ ಗಂಡುಕಲೆ ಬಗ್ಗೆ ಆಕರ್ಷಿತನಾಗಿದ್ದೆ. ನಂತರ ಉಡುಪಿ ಯಕ್ಷಗಾನ ಕಲಾಕೇಂದ್ರಕಕ್ಕೆ ಬಂದು ಸುವರ್ಣರಿಂದ 3 ತಿಂಗಳು ಕಾಲ ಯಕ್ಷಗಾನವನ್ನು ಅಭ್ಯಾಸ ಮಾಡಿದ್ದೇನೆ ಎನ್ನುತ್ತಾರೆ ಅನಿತಾ ಸಾವಿತ್ರಿ.