ಸಾರಾಂಶ
ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಶ್ರೀ ಸಿದ್ದೇಶ್ವರ ಜಾತ್ರೆ, ಕೃಷಿ ಪ್ರದರ್ಶನದ ನಿಮಿತ್ತ ಮಂಗಳವಾರ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇದು ಜನರ ಮನಸೂರೆಗೊಂಡಿತು.
ಕನ್ನಡಪ್ರಭ ವಾರ್ತೆ ಕಾಗವಾಡ
ಮನುಷ್ಯನಿಗಿಂತ ಹೆಚ್ಚು ನಂಬಿಗಸ್ಥ ಆಗಿರುವ ಶ್ವಾನಗಳು ನಮ್ಮ ಜೀವನಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿವೆ. ಸಾಕಿದ ಮಾಲೀಕನಿಗೆ ನಿಯತ್ತಾಗಿರುವ ಏಕೈಕ ಪ್ರಾಣಿ ನಾಯಿ ಎಂದು ಜನಶಕ್ತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪ್ರಶಾಂತ ಅಪರಾಜ ಹೇಳಿದರು.ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಶ್ರೀ ಸಿದ್ದೇಶ್ವರ ಜಾತ್ರೆ, ಕೃಷಿ ಪ್ರದರ್ಶನದ ನಿಮಿತ್ತ ಮಂಗಳವಾರ ಶ್ವಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಭಾರತೀಯ ಸೇನೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಶ್ವಾನಗಳು ಮಾಡುವ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಜೈನ ಸಮಾಜದ ಅಧ್ಯಕ್ಷ ಸುನೀಲ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ಪ್ರವೀಣ ಗಾಣಿಗೇರ, ಸಂಜು ಬಿರಡಿ, ಸಂಜಯ ಕುಚನೂರೆ, ಅರುಣ ಗಾಣಿಗೇರ,ಮುಖಂಡರಾದ ಕುಮಾರ ಅಪರಾಜ, ಗೋಪಾಲ ಮಾನಗಾಂವೆ, ಪ್ರಕಾಶ ಚಿನಗಿ, ಅಶೋಕ ಗಾಣಿಗೇರ, ಸುನೀಲ ಪಾಟೀಲ, ಪ್ರಕಾಶ ಕೋರ್ಬು, ಸುಜಲ ಗಾಣಿಗೇರ, ಈಶ್ವರ ಕಾಂಬಳೆ, ರಾಜು ಖವಟಗೊಪ್ಪ, ಅಶೋಕ ಅಪರಾಜ, ಸುನೀಲ ಅವಟಿ, ಅರವಿಂದ ಕಾರ್ಚಿ ಸಿದರಾಯ ಗಾಡಿವಡ್ಡರ, ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜುಗೌಡ ಪಾಟೀಲ, ಕಾರ್ಯದರ್ಶಿ ಅಮಗೌಡ ವಡೆಯರ ಅನೇಕರು ಇದ್ದರು.ಕಾರ್ಯಕ್ರಮದಲ್ಲಿ ಅತಿಥಿ ಹಾಗೂ ನಿರ್ಣಾಯಕರಾಗಿ ಪಶು ವೈದ್ಯಾಧಿಕಾರಿ ಡಾ.ಮಹೇಶ ದಳವಿ, ಡಾ.ಸಚೀನ ಸೌಂದಲಗಿ, ಡಾ.ಅಭಿನಂದನ ಪಾಟೀಲ, ಡಾ.ವಿಜಯ ಢೋಕೆ ಮಾತನಾಡಿದರು.
ಶ್ವಾನ ಪ್ರದರ್ಶನದಲ್ಲಿ ಒಂದು ಕೆಜಿ ತೂಕದಿಂದ 150 ಕೆಜಿ ತೂಕದ ಶ್ವಾನಗಳು 23 ತಳಿಗಳ ಶ್ವಾನಗಳ 300 ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಈ ಪೈಕಿ ಗ್ರೇಟ್ಡಾನ್, ಟುಮೋರಿಯನ್, ಡೊಬರಮನ್, ಸೆಂಡ್ ಬರ್ನಾರ್ಡ್, ಜರ್ಮನ್ ಷಫರ್ಡ್, ಪಗ್, ರಾಟ್ ವ್ಹಿಲ್‌ರ ಅಮೆರಿಕನ್ ಫಿಟ್ಬುಕ್, ಟೆರಿಯರ್, ಶಿಖಾರಿ ಸೇರಿದಂತೆ ವಿವಿಧ ತಳಿಗಳ ಒಂದು ಸಾವಿರಕ್ಕೂ ಹೆಚ್ಚು ಪಾಲಲ್ಗೊಂಡಿದ್ದವು.ಸರ್ವಶ್ರೇಷ್ಟ ಶಾವನಗಳ ಆಯ್ಕೆ: 300 ಶ್ವಾನಗಳಲ್ಲಿ ಸರ್ವಶ್ರೇಷ್ಠ ಮುರೂ ಶ್ವಾನಗಳನ್ನು ಆಯ್ಕೆ ಮಾಡಿ ಆಯ್ಕೆಮಾಡಿ ಬಹುಮಾನ ವಿತರಿಸಿದರು.