ಬೆಕ್ಕಿನಮರಿಗೆ ತಾಯಿಯಂತೆ ಹಾಲು ಕುಡಿಸುವ ನಾಯಿ!

| Published : Jan 22 2025, 12:34 AM IST

ಸಾರಾಂಶ

ಬೆಕ್ಕು ಮತ್ತು ನಾಯಿ ಪರಮಶತ್ರುಗಳು ಎಂದು ಹೇಳುತ್ತಾರೆ. ಆದರೆ, ಇಲ್ಲೊಂದು ನಾಯಿ ಬೆಕ್ಕಿನ ಮರಿಗೆ ಹಾಲುಣಿಸಿ ತಾಯಿಯ ಮಮತೆ ತೋರಿಸುತ್ತಿದೆ. ತಾಲೂಕಿನ ಬಿ.ಜಿ.ಕೆರೆ ಗ್ರಾಮದ ದಲಿತ ಕಾಲೋನಿಯಲ್ಲಿ ನಾಯಿ ಮತ್ತು ಬೆಕ್ಕಿನ ನಡುವೆ ಇರುವ ಅನ್ಯೂನ್ಯತೆ ಕಂಡ ಜನರು ಕುತೂಹಲ ಭರಿತ ಆಶ್ಚರ್ಯಚಕಿತರಾಗಿದ್ದಾರೆ.

ಮೊಳಕಾಲ್ಮುರು: ಬೆಕ್ಕು ಮತ್ತು ನಾಯಿ ಪರಮಶತ್ರುಗಳು ಎಂದು ಹೇಳುತ್ತಾರೆ. ಆದರೆ, ಇಲ್ಲೊಂದು ನಾಯಿ ಬೆಕ್ಕಿನ ಮರಿಗೆ ಹಾಲುಣಿಸಿ ತಾಯಿಯ ಮಮತೆ ತೋರಿಸುತ್ತಿದೆ.

ತಾಲೂಕಿನ ಬಿ.ಜಿ.ಕೆರೆ ಗ್ರಾಮದ ದಲಿತ ಕಾಲೋನಿಯಲ್ಲಿ ನಾಯಿ ಮತ್ತು ಬೆಕ್ಕಿನ ನಡುವೆ ಇರುವ ಅನ್ಯೂನ್ಯತೆ ಕಂಡ ಜನರು ಕುತೂಹಲ ಭರಿತ ಆಶ್ಚರ್ಯಚಕಿತರಾಗಿದ್ದಾರೆ.

ತಾಯಿಯಿಂದ ದೂರ ಇರುವ ಬೆಕ್ಕು ಕಳೆದೆರಡು ದಿನಗಳಿಂದ ಸದಾ ನಾಯಿಯ ಜೊತೆಯಲ್ಲಿಯೇ ಇರುತ್ತಿದೆ. ಹಸಿವಾದಗೆಲ್ಲಾ ಬೆಕ್ಕು ನಾಯಿಯ ಎದೆಹಾಲು ಕುಡಿಯುತ್ತಿದೆ. ಅಷ್ಟೇ ಪ್ರೀತಿಯಿಂದ ನಾಯಿಯು ಬೆಕ್ಕಿಗೆ ಹಾಲು ಉಣಿಸುತ್ತಿದೆ. ಹಾಲು ಕುಡಿಯಲು ಬರುವ ಬೆಕ್ಕಿನ ಮರಿಗೆ ಶ್ವಾನವು ಎಂದಿಗೂ ದೂರ ಮಾಡಿಲ್ಲ ಎನ್ನುತ್ತಾರೆ ಸ್ಥಳೀಯರು.

- - - (-ಫೋಟೋ:)