ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಜೈನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಭಾರತೀಯರಾದ ನಾವು ಎಂಬ ನಾಟಕವನ್ನು ವಸತಿ ಶಾಲೆ ವಿದ್ಯಾರ್ಥಿಗಳು ಅದ್ಭುತವಾಗಿ ಅಭಿನಯಿಸಿ ಗಮನ ಸೆಳೆದರು.ತಾಲೂಕು ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಲೋಕಾಯನ ಕಲ್ಚರಲ್ ಫೌಂಡೇಷನ್ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ ನಡೆದ ಈ ನಾಟಕ ಪ್ರದರ್ಶನವನ್ನು ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ನಂತರ ಮಾತನಾಡಿ, ನಾಟಕವು ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮ, ಸಂವಿಧಾನ ರಚನೆಯಲ್ಲಿ ಕೈಗೊಂಡ ದಿಟ್ಟ ನಿರ್ಧಾರಗಳು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿ ಸೈ ಎನಿಸಿಕೊಂಡ ಬಗ್ಗೆ ಮಕ್ಕಳು ಅದ್ಭುತವಾಗಿ ಅಭಿನಯಿಸಿ ನಮ್ಮೆಲ್ಲರಿಗೂ ಸಂವಿಧಾನದ ಆಶಯಗಳ ಬಗ್ಗೆ ಅರಿವಿನ ಜಾಗೃತಿ ಮೂಡಿಸಿದ್ದಾರೆ ಎಂದರು.ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಸಂವಿಧಾನದ ಆಶಯಗಳು ಇಂದಿಗೂ ಈಡೇರದಿರುವ ಬಗ್ಗೆ ವಿಷಾದಿಸಿದರು. ಮುಖಂಡ ಎ.ಆರ್.ರಘು, ಲೋಕಾಯನ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ ಶಶಿಧರ ಭಾರೀಘಾಟ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಚಂದ್ರಶೇಖರ್, ವಸತಿ ಶಾಲೆ ಪ್ರಾಂಶುಪಾಲ ರಾಜಣ್ಣ ಹಾಗೂ ಅಕ್ಕಿಹೆಬ್ಬಾಳು ಗ್ರಾಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ನಾಗಮ್ಮಜಲೆಂದ್ರ, ಸದಸ್ಯರಾದ ಸುಂದರೇಶ್, ತಾರಾಶ್ರೀ ಮುಕುಂದ, ಮುಖಂಡರಾದ ದಿನೇಶ್, ರಾಘವೇಂದ್ರ ಗೌಡಪ್ಪ, ಜೆ.ಎನ್.ತಿಮ್ಮಪ್ಪಗೌಡ, ಜೈನಹಳ್ಳಿ ಹರೀಶ್, ಕೆ.ಆರ್.ನೀಲಕಂಠ, ಗವಿಮಠ ಮೊರಾರ್ಜಿ ದೇಸಾಯಿ ವಸತಿಶಾಲೆ ಪ್ರಾಂಶುಪಾಲ ಪ್ರಸನ್ನಕುಮಾರ್, ನಾಟಕದ ನಿರ್ದೇಶಕರಾದ ರಾಜಶೇಖರ್ ಗಂಗಾವತಿ, ಪೂರ್ಣಿಮಾ ಗಬ್ಬೂರು, ಸಂಗೀತ ನಿರ್ದೇಶಕ ಶ್ರೀಕಾಂತ್‌ಚಿಮ್ಮಲ್, ಜಯಶ್ರೀಚಿಮ್ಮಲ್, ರವಿಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.